ಯಡಿಯೂರಪ್ಪ ಕಾನೂನು ಗಾಳಿಗೆ ತೂರಿ ತಮ್ಮ ಅಳಿಯನಿಗೆ ಭೂ ವಗರ್ಾವಣೆ ಲಾಭ ಮಾಡಿಕೊಟ್ಟಿರುವ ಮತ್ತೊಂದು ಪ್ರಕರಣ ಬಹಿರಂಗ

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ
ಸ್ಲಗ್: ಸಿಎಂ- ಪಕ್ಷಪಾತ
ಡೇಟ್: 01-12-2010
ಬೆಂಗಳೂರು

ಆಂಕರ್; ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕಾನೂನು ಗಾಳಿಗೆ ತೂರಿ ತಮ್ಮ ಅಳಿಯನಿಗೆ ಭೂ ವಗರ್ಾವಣೆ ಲಾಭ ಮಾಡಿಕೊಟ್ಟಿರುವ ಮತ್ತೊಂದು ಪ್ರಕರಣ ಬಹಿರಂಗಗೊಂಡಿದೆ. ಹೆಚ್ಎಸ್ಆರ್ ಲೇಔಟ್ನ “ಜಿ” ಕ್ಯಾಟಗರಿ ಸೈಟೊಂದನ್ನು ತಮ್ಮ ಅಳಿಯ ಸೋಹನ್ ಕುಮಾರ್ ಹೆಸರಿಗೆ ವಗರ್ಾಯಿಸಿಕೊಡಲು ಬಿಡಿಎ ಅಧಿಕಾರಿಗಳಿಗೆ ಆದೇಶ ನೀಡಿ ಸಿಎಂ ಯಡಿಯೂರಪ್ಪ ಸ್ವಜನ ಪಕ್ಷಪಾತ ಎಸೆಗಿದ್ದಾರೆ. ಮುಖ್ಯಮಂತ್ರಿಯಾಗಿ ಕಾನೂನು ಪಾಲಿಸಬೇಕಾದ ಅವರೇ ಕಾನೂನು ಮುರಿದು ಭಂಡತನ ಪ್ರದಶರ್ಿಸಿದ್ದಾರೆ.

ಫ್ಯಾಕೇಜ್ ಫಾಲೋಸ್………..

ವಾಯ್ಸ್ ಓವರ್ 1: (ಬೇಕಾಗಿರುವ ಕಡೆ ರೆಡ್ ಲೆಟರ್ಸ್ ಇರುವ ಗ್ರಾಫಿಕ್ ಪಾಯಿಂಟ್ ಬಳಿಸಿದರೆ ಒಳ್ಳೆಯದು)

ಪ್ರತಿಪಕ್ಷದ ನಾಯಕರಾಗಿದ್ದಾಗ ಬಿ,ಎಸ್. ಯಡಿಯೂರಪ್ಪ ಆಗಿನ ಮುಖ್ಯಮಂತ್ರಿ ಧರಂಸಿಂಗ್ಗೆ ಶಿಫಾರಸ್ಸು ಪತ್ರವೊಂದನ್ನು ನೀಡಿ ತಮ್ಮ ಅಳಿಯ ಸೋಹನ್ ಕುಮಾರ್ ಸಂಬಂಧಿ ಆರ್.ಪಿ. ಶಂಕರ್ ಎಂಬುವರಿಗೆ ಬಿಡಿಎ ನಿವೇಶನ ನೀಡಲು ಮನವಿ ಮಾಡಿದ್ದರು. ಆಗಿನ ಮುಖ್ಯಮಂತ್ರಿ ಧರಂಸಿಂಗ್ ಪ್ರತಿಪಕ್ಷದ ನಾಯಕರ ಮಾತಿಗೆ ಮಣಿದು 28-06- 2005 ರಂದು ಹೆಚ್ಎಸ್ಆರ್ ಲೇಔಟ್ನಲ್ಲಿ 40/60 ಅಳತೆಯ “ಜಿ” ಕ್ಯಾಟಗರಿ ಸೈಟೊಂದನ್ನು ಆರ್.ಪಿ. ಶಂಕರ್ಗೆ ಮಂಜೂರು ಮಾಡಿದ್ದರು. ಯಾವುದೇ ವ್ಯಕ್ತಿಗೆ ಬಿಡಿಎಯಿಂದ ಸೈಟು ಗುತ್ತಿಗೆ ಆಧಾರದ ಮೇಲೆ ಮಂಜೂರಾದ ಬಳಿಕ ಕನಿಷ್ಠ 10 ವರ್ಷ ಪರಭಾರೆ ಮಾಡುವಂತಿಲ್ಲ. ಇದು ಬಿಡಿಎ ಕಾನೂನು. ಆದರೆ ಈ ಬಿಡಿಎ ಕಾನೂನಿಗೆ ಎಳ್ಳುನೀರು ಬಿಟ್ಟ ಶಂಕರ್, 15-10-2007 ರಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅನುಮತಿಯನ್ನು ಪಡೆಯದೇ ಯಡಿಯೂರಪ್ಪನವರ ಅಳಿಯ ಸೋಹನ್ಕುಮಾರ್ ತಾಯಿ ವಿನೋದ್ ನಟರಾಜ್ಗೆ ದಾನ ಮೂಲಕ ಜಿ ಕ್ಯಾಟಗರಿ ಸೈಟನ್ನು ವಗರ್ಾವಣೆ  ಮಾಡುತ್ತಾರೆ. ಬಳಿಕ 12-09-2008 ರಂದು ಸೋಹನ್ಕುಮಾರ್ ತಾಯಿ, ಬಿಡಿಎಗೆ ಅಜರ್ಿ ಸಲ್ಲಿಸಿ ತಮ್ಮ ಹೆಸರಿಗೆ ಸೈಟನ್ನು ವಗರ್ಾಯಿಸಿಕೊಡಲು ಅಜರ್ಿ ಸಲ್ಲಿಸುತ್ತಾರೆ. ಆಗ ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುತ್ತಾರೆ. ಮುಖ್ಯಮಂತ್ರಿಗಳ ಅಳಿಯನ ಪ್ರಕರಣ ಇದಾಗಿರುವುದರಿಂದ ನಿಯಮಗಳನ್ನು ಗಾಳಿಗೆ ತೂರಿ ಬಿಡಿಎ ವಿನೋದ್ ನಟರಾಜ್ ಹೆಸರಿಗೆ ಸೈಟ್ ವಗರ್ಾವಣೆ ಒಪ್ಪಂದ ಮಾಡಿಕೊಡುತ್ತದೆ. ಈ ಸಂದರ್ಭದಲ್ಲಿ ಈ ಸೈಟನ್ನು ಯಾರಿಗೂ ವಗರ್ಾವಣೆ, ಪರಭಾರೆ ಮಾಡುವುದಿಲ್ಲವೆಂದು ವಿನೋದ್ ನಟರಾಜ್ ಬಿಡಿಎಗೆ ಮುಚ್ಚಳಿಕೆ ಬರೆದುಕೊಡುತ್ತಾರೆ. ಹೀಗಿದ್ದರೂ 23-08-2010 ರಲ್ಲಿ ವಿನೋದ್ ನಟರಾಜ್ ತಮ್ಮ ಮಗ ಸೋಹನ್ಕುಮಾರ್ ಹೆಸರಿಗೆ ಈ ಸೈಟನ್ನು ದಾನದ ಮೂಲಕ ವಗರ್ಾವಣೆ ಮಾಡುತ್ತಾರೆ. ಈ ವ್ಯವಹಾರ ನಡೆಸುವ ಮುನ್ನ ಬಿಡಿಎ ಅನುಮತಿಯನ್ನಾಗಲಿ, ಎನ್ಓಸಿಯನ್ನಾಗಲಿ ಅವರು ಪಡೆಯುವುದಿಲ್ಲ. 27-08-2010 ರಂದು ಸೋಹನ್ ಕೂಮಾರ್ ಬಿಡಿಎ ಆಯುಕ್ತರಿಗೆ ಅಜರ್ಿ ಸಲ್ಲಿಸಿ ತಮ್ಮ ತಾಯಿ ದಾನದ ಮೂಲಕ ನೀಡಿರುವ ಸ್ವತ್ತನ್ನು ತನ್ನ ಹೆಸರಿಗೆ ವಗರ್ಾಯಿಸಿಕೊಡಬೇಕೆಂದು ಅಜರ್ಿ ಸಲ್ಲಿಸುತ್ತಾರೆ. ಬಿಡಿಎ ಅಧಿಕಾರಿಗಳು ಈ ಸಂದರ್ಭದಲ್ಲೂ ನಿಯಮಗಳನ್ನು ಗಾಳಿಗೆ ತೂರಿ ಸೋಹನ್ಕುಮಾರ್ ಹೆಸರಿಗೆ ಸೈಟನ್ನು ವಗರ್ಾವಣೆ ಒಪ್ಪಂದ ಮಾಡಿಕೊಡುತ್ತಾರೆ. ಸೋಹನ್ಕುಮಾರ್ಗೆ ಬೆಂಗಳೂರಿನಲ್ಲಿ ಬೇರೆ ಆಸ್ತಿಗಳಿದ್ದರೂ ಬಿಡಿಎ ಜಿ ಕ್ಯಾಟಗರಿ ಸೈಟನ್ನು ಹೇಗೆ ವಗರ್ಾವಣೆ ಮಾಡಿಕೊಡಲು ಒಪ್ಪಿತು? ಸಿಎಂ ಪ್ರಭಾವ ಇದರಲ್ಲಿ ಎಷ್ಟು ಬಳಕೆಯಾಯಿತು ಎಂಬುದು ಸಾರ್ವಜನಿಕರ ಪ್ರಶ್ನೆ. ಪ್ರತಿಪಕ್ಷದ ನಾಯಕರಾಗಿದ್ದಾಗ ಮುಖ್ಯಂಂತ್ರಿಗಳು ಮಂಜೂರು ಮಾಡಿಸಿಕೊಟ್ಟ ಕೋಟ್ಯಂತರ ರುಪಾಯಿ ಬೆಲೆ ಬಾಳುವ ಸೈಟ್, ಹೇಗೆ ಅವರ ಅಳಿಯನ ಪಾಲಾಯಿತು? ಇದರಲ್ಲಿ ಯಡಿಯೂರಪ್ಪನವರ ಪಾತ್ರ ಏನು ಎಂಬುದನ್ನು ಅವರೇ ಈಗ ಸಾರ್ವಜನಿಕರಿಗೆ ವಿವರಿಸಬೇಕಾಗಿದೆ.
—ಎಂ. ಎನ್. ಚಂದ್ರೇಗೌಡ
ಸಮಯ ನ್ಯೂಸ್
ಬೆಂಗಳೂರು

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 • ಪುಟಗಳು

 • Flickr Photos

 • ಡಿಸೆಂಬರ್ 2010
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ನವೆಂ   ಜನ »
   1234
  567891011
  12131415161718
  19202122232425
  262728293031  
 • ವಿಭಾಗಗಳು