ಷರತ್ತು ಬದ್ಧ ಕ್ರಯ ಮಾಡಿಕೊಡಬಹುದೆಂದು ಕಾನೂನು ಇಲಾಖೆ ಅಭಿಪ್ರಾಯ ವ್ಯಕ್ತಪಡಿಸಿದೆ

 ಆಂಕರ್: ಬೆಂಗಳೂರು ಸುತ್ತ ನಿಮರ್ಾಣವಾಗುತ್ತಿರುವ ನೈಸ್ ಪೆರಿಫೆರಲ್ ರಸ್ತೆಗೆ ಸಾವಿರಾರು ಎಕರೆ ಭೂಮಿಯನ್ನು ಷರತ್ತು ಬದ್ಧ ಕ್ರಯ ಮಾಡಿಕೊಡಬಹುದೆಂದು ಕಾನೂನು ಇಲಾಖೆ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಸಂಬಂಧ ಲೋಕೋಪಯೋಗಿ ಇಲಾಖೆ ಇದೇ 4 ರಂದು ಕೆಐಎಬಿಡಿಗೆ ಬರೆದಿರುವ ಈ ಪತ್ರ ಸಮಯ ನ್ಯೂಸ್ಗೆ ಲಭ್ಯವಾಗಿದೆ. ಫ್ರೇಮ್ವರ್ಕ ಒಪ್ಪಂದದಲ್ಲಿ ರಸ್ತೆ ನಿಮರ್ಾಣಕ್ಕಾಗಿ ಬಳಸುವ ಜಾಗವನ್ನು ಕೇವಲ ಗುತ್ತಿಗೆ ಆಧಾರದ ಮೇಲೆ ನೀಡಬೇಕೆಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದರೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಸ್ತೆ ನಿಮರ್ಾಣಕ್ಕಾಗಿ ಬಳಸುತ್ತಿರುವ ಜಾಗವನ್ನು ಕ್ರಮಮಾಡಿಕೊಡಲು ಆದೇಶ ನೀಡಿದ್ದಾರೆ. ಇದರಿಂದ ಕೇವಲ ಬೆಂಗಳೂರು ಸುತ್ತಮತ್ತ ಸಾವಿರಾರು ಕೋಟಿ ಬೆಲೆಬಾಳುವ ಭೂಮಿ ಸುಲಭವಾಗಿ ನೈಸ್ ಸಂಸ್ಥೆ ಪಾಲಾಗಲಿದೆ.

 ವಾಯ್ಸ್ ಓವರ್ 1:  ಅದು 19.11. 2009 ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಉನ್ನತಾಧಿಕಾರ ಸಮಿತಿ ಬೆಂಗಳೂರಿನಲ್ಲಿ ಸಭೆ ಸೇರಿ, ನೈಸ್ ಸಂಸ್ಥೆಗೆ ಫೆಬ್ರವರಿ 2010 ರೊಳಗೆ ನೈಸ್ ಸಂಸ್ಥೆಗೆ ಹಸ್ತಾಂತರಿಸಲಾಗಿರುವ ಭೂಮಿ ಜತೆಗೆ ಹಸ್ತಾಂತರಿಸಲು ಬಾಕಿ ಉಳಿದಿರುವ ಭೂಮಿಯನ್ನು ಕೆಐಎಡಿಬಿ, ಕೆಐಎಡಿಬಿ ಕ್ರಯ ಮಾಡಿಕೊಡಬೇಕೆಂದು ಆದೇಶ ನೀಡುತ್ತದೆ. ಅದರಂತೆ ಸುಪ್ರೀಂಕೋರ್ಟಗೆ ಸಕರ್ಾರ ಅಫಿಡವಿಟ್ ಸಹ ಸಲ್ಲಿಸುತ್ತದೆ. ಆದರೆ ಕೆಐಎಡಿಬಿ ಈ ಬಗ್ಗೆ ಆಕ್ಷೇಪ ಎತ್ತಿ ಫ್ರೇಮ್ವರ್ಕ ಒಪ್ಪಂದದಲ್ಲಿ ಕೇವಲ ಟೌನ್ಷಿಪ್ ಭೂಮಿಯನ್ನು ಮಾತ್ರ ನೈಸ್ ಸಂಸ್ಥೆಗೆ ಕ್ರಯ ಮಾಡಿಕೊಡಲು ಅವಕಾಶವಿದೆ. ಆದರೆ ರಸ್ತೆ ನಿಮರ್ಾಣದ ಭೂಮಿಯನ್ನು ಕ್ರಮಮಾಡಿಕೊಡಲು ಬರುವುದಿಲ್ಲ. ಆದ್ದರಿಂದ ಈ ಬಗ್ಗೆ ಕಾನೂನು ಇಲಾಖೆ ಅಭಿಪ್ರಾಯ ನೀಡಬೇಕೆಂದು ಪತ್ರ ಬರೆಯುತ್ತದೆ. ಆದರೆ ಹೈಪವರ್ ಸಮಿತಿ ಸಭೆಗೂ ಮುನ್ನವೇ ಆಗಿನ ಅಡಿಷನಲ್ ಅಡ್ವೊಕೇಟ್ ಜನರಲ್ ಆಗಿದ್ದ ಅಶೋಕ್ ಹಾರ್ನಳ್ಳಿ, 03-05-2009 ಅಭಿಪ್ರಾಯ ವ್ಯಕ್ತಪಡಿಸಿ ನೈಸ್ ಸಂಸ್ಥೆಗೆ ಷರತ್ತು ಬದ್ಧ ಕ್ರಯಮಾಡಿಕೊಡಬಹುದೆಂದು ತಿಳಿಸುತ್ತಾರೆ. ಈಗ ಕಾನೂನು ಇಲಾಖೆಯೂ ಅಶೋಕ್ ಹಾರ್ನಳ್ಳಿ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದೆ. (ಗ್ರಾಫಿಕ್ ಪಾಯಿಂಟ್ಸ್:) 1. 19.11.2009 ರಂದು ಮುಖ್ಯಮಂತ್ರಿಗಳ ನೇತೃತ್ವದ ಉನ್ನತಾಧಿಕಾರ ಸಮಿತಿ ಸಭೆ: ನೈಸ್ಗೆ ಭೂಮಿ ಕ್ರಯಮಾಡಿಕೊಡಲು ಆದೇಶ 2. ಇದಕ್ಕೂ ಮುನ್ನ 03-05-2009 ರಲ್ಲಿ ಆಗಿನ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅಶೋಕ್ ಹಾರ್ನಳ್ಳಿ ಸಹ ಕ್ರಯ ಮಾಡಿಕೊಡಬಹುದೆಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. 3. 04. 12. 2010 ರಂದು ಕಾನೂನು ಇಲಾಖೆ ಸಹ ಇದಕ್ಕೆ ಸಹಮತ. ವಾಯ್ಸ್ ಓವರ್ 2: ದಿನಾಂಕ: 6-01-1998 ರಲ್ಲಿಯೇ ಈ ಭೂಮಿ ಕ್ರಯದ ಬಗ್ಗೆ ನೈಸ್ ಸಂಸ್ಥೆಯೇ ಕೆಐಎಡಿಬಿಗೆ ಬರೆದಿದ್ದ ಪತ್ರ ಸಹ ಸಮಯ ನ್ಯೂಸ್ಗೆ ಲಭ್ಯವಾಗಿದ್ದು ಇದರಲ್ಲಿ ಫ್ರೇಮ್ವರ್ಕ ಒಪ್ಪಂದದ ಪ್ರಕಾರ, ಒಟ್ಟು 20193 ಎಕರೆ ಭೂಮಿಯಲ್ಲಿ 14255. 7 ಎಕರೆ ಭೂಮಿಯನ್ನು ಸಕರ್ಾರಕ್ಕೆ ಹಿಂತಿರುಗಿಸಲಾಗುವುದೆಂದು ಒಪ್ಪಿಕೊಂಡಿದೆ. ಜತೆಗೆ ಟೌನ್ಷಿಪ್ಗಳಲ್ಲಿ ಶೇ. 45 ರಷ್ಟು ಮಾತ್ರ ನೈಸ್ ಸಂಸ್ಥೆ ಅಭಿವೃದ್ಧಿಪಡಿಸಿದ ಭೂಮಿಯನ್ನು ಮಾರಾಟ ಮಾಡಬಹುದೆಂದು ಬದ್ಧವಾಗಿರುವುದಾಗಿ ತಿಳಿಸಿದೆ. ಹೀಗಿದ್ದೂ ಬೆಂಗಳೂರು ಸುತ್ತಮುತ್ತ ನಿಮರ್ಾಣವಾಗುತ್ತಿರುವ ಪೆರಿಫರಲ್ ರಸ್ತೆಗೆ ಕೇವಲ 2471 ಎಕರೆ ಭೂಮಿ ಅವಶ್ಯಕತೆ ಇದ್ದರೂ ಇದುವರೆಗೆ 3160 ಎಕರೆ ಭೂಮಿಯನ್ನು ನೈಸ್ ಸಂಸ್ಥೆ ಪಡೆದುಕೊಂಡಿದೆ. ಸುಮಾರು 689 ಎಕರೆ ಭೂಮಿ ನೈಸ್ಗೆ ಈಗಾಗಲೇ ಹೆಚ್ಚುವರಿಯಾಗಿ ಸಿಕ್ಕಿದೆ. ಪೆರಿಫರಲ್ ರಸ್ತೆ ನಿಮರ್ಾಣಕ್ಕಾಗಿ ಫ್ರೇಮ್ವಕರ್್ ಒಪ್ಪಂದ ಹಾಗೂ ಓಡಿಪಿ ಒಪ್ಪಂದದ ಪ್ರಕಾರ ನೈಸ್ ಭೂಮಿ ಪಡೆದುಕೊಂಡಿದೆ. ಹೀಗಿದ್ದಾಗ ಹೆಚ್ಚುವರಿ ಭೂಮಿಯನ್ನು ನೈಸ್ ಸಂಸ್ಥೆಯಿಂದ ಪಡೆಯುವುದರ ಬದಲು ಷರತ್ತು ಬದ್ಧ ಕ್ರಯ ಮಾಡಿಕೊಡಲು ಸಕರ್ಾರ ಮುಂದಾಗಿರುವುದು ಏಕೆ ಎಂಬುದೇ ಸಾರ್ವಜನಿಕರ ಪ್ರಶ್ನೆ. ಕೇವಲ ಗುತ್ತಿಗೆ ಆಧಾರದ ಮೇಲೆ ಭೂಮಿಯನ್ನು ನೈಸ್ಗೆ ನೀಡಬೇಕೆಂದು ನಿಯಮವಿದ್ದರೂ ಸಕರ್ಾರ ಈ ನಿಯಮಗಳನ್ನು ಗಾಳಿಗೆ ತೂರಿ ಷರತ್ತುಬದ್ಧ ಕ್ರಯ ಮಾಡಿಕೊಡಲು ಕಾರಣವೇನು ಎಂಬುದನ್ನು ಈಗಿನ ಅಡ್ವೊಕೇಟ್ ಜನರಲ್ ಅವರೇ ಸಾರ್ವಜನಿಕರಿಗೆ ತಿಳಿಸಬೇಕಾಗಿದೆ. ( ಪೆರಿಫರಲ್ ರಸ್ತೆಗೆ 2471 ಎಕರೆ ಸಾಕು. ಹೆಚ್ಚುವರಿಯಾಗಿ ಈಗಾಗಲೇ 3160 ಎಕರೆ ಭೂಮಿ ನೈಸ್ಗೆ ಹಸ್ತಾಂತರ, ಒಟ್ಟು 689 ಎಕರೆ ಭೂಮಿ ಹೆಚ್ಚುವರಿಯಾಗಿ ಬೆಂಗಳೂರು ಸುತ್ತ ನೈಸ್ ವಶಕ್ಕೆ)

 –ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್ ಬೆಂಗಳೂರು.

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 • ಪುಟಗಳು

 • Flickr Photos

 • ಡಿಸೆಂಬರ್ 2010
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ನವೆಂ   ಜನ »
   1234
  567891011
  12131415161718
  19202122232425
  262728293031  
 • ವಿಭಾಗಗಳು