ವಿಧಾನಮಂಡಲದ ಅಧಿವೇಶನ ಅಕ್ಷರಶ: ರಣರಂಗವಾಗುವ ಸಾಧ್ಯತೆ

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ ಸ್ಲಗ್: ಟುಮಾರೋ ಡೇಟ್: 09-01-2011 ಬೆಂಗಳೂರು ಆಂಕರ್: ನಾಳೆಯಿಂದ ಪುನರ್ ಆರಂಭವಾಗಲಿರುವ ವಿಧಾನಮಂಡಲದ ಅಧಿವೇಶನ ಅಕ್ಷರಶ; ರಣರಂಗವಾಗುವ ಸಾಧ್ಯತೆ ಇದ್ದು ಪ್ರತಿಪಕ್ಷಗಳು ಮುಖ್ಯಮಂತ್ರಿ ಹಾಗೂ ಬಳ್ಳಾರಿ ರೆಡ್ಡಿ ಸಹೋದರರ ರಾಜೀನಾಮೆಗೆ ಆಗ್ರಹಿಸಿ ಗದ್ದಲ ಎಬ್ಬಿಸುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಉಭಯ ಸದನಗಳಲ್ಲಿ ಕಲಾಪ ಸುಗಮವಾಗಿ ನಡೆಯುವ ಸಾಧ್ಯತೆ ಕಡಿಮೆ. ಫ್ಯಾಕೇಜ್ ಫಾಲೋಸ್……….. ವಾಯ್ಸ್ ಓವರ್: ಅಕ್ರಮ ಗಣಿಗಾರಿಕೆ ಸತ್ಯ ಶೋಧನೆಗಾಗಿ ಸುಪ್ರೀಂಕೋರ್ಟ ನೇಮಿಸಿದ್ದ ಉನ್ನತಾಧಿಕಾರ ಸಮಿತಿ ನೀಡಿರುವ ವರದಿ, ಮುಖ್ಯಮಂತ್ರಿಗಳ ಮೇಲಿರುವ ಭೂ ಹಗರಣಗಳ ಆರೋಪ ಜತೆಗೆ ಸ್ಪೀಕರ್ ಕೆ.ಜಿ. ಬೋಪಯ್ಯ ವಿರುದ್ಧ ಮಂಡಿಸಲು ನಿರ್ಧರಿಸಿರುವ ಅವಿಶ್ವಾಸ ಗೊತ್ತುವಳಿ. ಈ ಮೂರು ವಿಷಯಗಳು ನಾಳೆಯಿಂದ ಪುನರ್ ಆರಂಭವಾಗಲಿರುವ ವಿಧಾನಮಂಡಲದ ಅಧಿವೇಶನವನ್ನು ಗದ್ದಲದ ಗೂಡಾಗಿಸುವ ಸಾಧ್ಯತೆ ಇದೆ. ಇದರಿಂದ ಉಭಯ ಸದನಗಳಲ್ಲಿ ಕಲಾಪ ಸುಗಮವಾಗಿ ನಡೆಯುವುದು ಅನುಮಾನ. ಏಕೆಂದರೆ ಕಟ್ಟಾ ಸುಬ್ರಮಣ್ಯ ನಾಯ್ಡು ರಾಜೀನಾಮೆ ಪಡೆದಂತೆ ರೆಡ್ಡಿ ಸಹೋದರರ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳು ಉಭಯ ಸದನಸಲ್ಲಿ ಕೋಲಾಹಲ ಎಬ್ಬಿಸಲು ಈಗಾಗಲೇ ಸಜ್ಜಾಗಿವೆ. ಉಳಿದಂತೆ ಮುಖ್ಯಮಂತ್ರಿಗಳ ವಿರುದ್ಧ ಇರುವ ಭೂ ಹಗರಣಗಳ ಬಗ್ಗೆ ಕೂಲಂಕಷವಾಗಿ ಚಚರ್ಿಸುವ ಸಲುವಾಗಿ ಗೊತ್ತುವಳಿ ಸೂಚನೆ ಮಂಡಿಸಲು ಅವುಗಳು ಈಗಾಗಲೇ ನಿರ್ಧರಿಸಿವೆ. ಇದರ ನಡುವೆ ವಿಧಾನಸಭೆಯಲ್ಲಿ ಸ್ಪೀಕರ್ ಕೆ.ಜಿ. ಬೋಪಯ್ಯ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಯನ್ನು ಮಾಡಲು ಪ್ರತಿ ಪಕ್ಷಗಳು ಸಜ್ಜಾಗಿವೆ. ಹೀಗೆ ಪ್ರತಿಪಕ್ಷಗಳ ಸರಣಿ ದಾಳಿಯನ್ನು ಸಕರ್ಾರ ಹೇಗೆ ಎದುರಿಸಲಿದೆ, ಆರೋಪಗಳಿಗೆ ಹೇಗೆ ಸಮಜಾಯಿಷಿ ನೀಡಲಿದೆ, ರೆಡ್ಡಿ ಸಹೋದರರನ್ನು, ಮುಖ್ಯಮಂತ್ರಿಗಳನ್ನು ಹೇಗೆ ಸಮರ್ಥನೆ ಮಾಡಿಕೊಳ್ಳಲು ಆಡಳಿತ ಪಕ್ಷ ಏನೆಲ್ಲಾ ಕಸರತ್ತು ಮಾಡಬಹುದು ಎಂಬುದು ಈಗ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ. 1. ಬೈಟ್: ಕೃಷ್ಣಬೈರೇಗೌಡ, ಕಾಂಗ್ರೆಸ್ ಮುಖಂಡ: 2. ಬೈಟ್: ಆರ್. ಅಶೋಕ್, ಗೃಹ ಸಚಿವ ಫೈಲ್ ನೇಮ್: ಆರ್. ಅಶೋಕ್ (ಪೊಲಿಟಿಕಲ್, ಕ್ಲಿಪ್ ನಂ 47 ಟಿಸಿಆರ್: 01: 18 ಟು 03; 05) ವಾಯ್ಸ್ ಓವರ್ 2: ಪ್ರತಿಪಕ್ಷಗಳು ಎಷ್ಟೇ ಗದ್ದಲ, ಕೋಲಾಹಲ ಎಬ್ಬಿಸಿದರೂ ಸಕರ್ಾರ ನಾಳೆ ಉಪಸಭಾಧ್ಯಕ್ಷರ ಚುನಾವಣೆ ನಡೆಸಲು ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ. ಗದ್ದಲದ ನಡುವೆಯೇ ಧ್ವನಿಮತದ ಮೂಲಕವಾದರೂ ಹಿರಿಯ ಶಾಸಕ ಯೋಗೀಶ್ ಭಟ್ರನ್ನು ಉಪಸಭಾಧ್ಯಕ್ಷರನ್ನಾಗಿ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಬಳ್ಳಾರಿ ರೆಡ್ಡಿ ಸಹೋದರರು ನಾಳೆ ಸಕರ್ಾರಕ್ಕೆ ಬಿಸಿ ತುಪ್ಪ. ಯಡಿಯೂರಪ್ಪನವರು ನಾಳೆ ಬಿಸಿ ತುಪ್ಪವನ್ನು ಉಗುಳುವರೋ ನುಂಗುವರೋ ಕಾದು ನೋಡಬೇಕು. ಮುಖ್ಯಮಂತ್ರಿಗಳೇ ಸಕರ್ಾರಕ್ಕೆ ಬಿಸಿ ತುಪ್ಪವಾಗುವರೋ ಹೇಗೆ ಎಂಬುದನ್ನು ಕುತೂಹಲದಿಂದ ನಿರೀಕ್ಷಿಸಬೇಕಾಗಿದೆ. ಒಟ್ಟಿನಲ್ಲಿ ನಾಳೆ ಮಾತ್ರ ಸದನದಲ್ಲಿ ಕದನ ಕುತೂಹವಂತೂ ಸೃಷ್ಟಿಯಾಗಿದೆ. –ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್, ಬೆಂಗಳೂರು

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 • ಪುಟಗಳು

 • Flickr Photos

 • ಜನವರಿ 2011
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಡಿಸೆ   ಏಪ್ರಿಲ್ »
   1
  2345678
  9101112131415
  16171819202122
  23242526272829
  3031  
 • ವಿಭಾಗಗಳು