ಬಜೆಟ್ ಅಧಿವೇಶನದ ನಂತರ ವಿಧಾನಸಭೆಯನ್ನು ವಿಸಜರ್ಿಸಿ ಹೊಸ ಜನಾದೇಶ

ರಿಪೋರ್ಟರ್; ಎಂ. ಎನ್. ಚಂದ್ರೇಗೌಡ ಸ್ಲಗ್: ಎಲೆಕ್ಷನ್ ಡೇಟ್: 11-01-2011 ಬೆಂಗಳೂರು ಆಂಕರ್: ಬಜೆಟ್ ಅಧಿವೇಶನದ ನಂತರ ವಿಧಾನಸಭೆಯನ್ನು ವಿಸಜರ್ಿಸಿ ಹೊಸ ಜನಾದೇಶ ಪಡೆಯಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಲೋಚಿಸಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ. ನಿರೀಕ್ಷಿತ ಬೆಂಬಲ ಜೆಡ್ಪಿ ಹಾಗೂ ಟಿಪಿ ಚುನಾವಣೆಯಲ್ಲಿ ದಕ್ಕಿದ್ದರೆ ಜನವರಿಯಲ್ಲೇ ವಿಧಾನಸಭೆಯನ್ನು ವಿಸಜರ್ಿಸಲು ಬಿಜೆಪಿ ನಾಯಕರು ಲೆಕ್ಕಾಚಾರ ಹಾಕಿದ್ದರೆಂದು ಹೇಳಲಾಗಿದೆ. ನಿರೀಕ್ಷಿತ ಬೆಂಬಲ ದೊರೆಯದ ಕಾರಣ ಬಜೆಟ್ ಅಧಿವೇಶನದವರೆಗಾದರೂ ಸಕರ್ಾರ ಮುನ್ನಡೆಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

  ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಸ್ತಿತ್ವಕ್ಕೆ ಬಂದ ಬಿಜೆಪಿ ಸಕರ್ಾರದ ಆಯಸ್ಸು ಇನ್ನು ಕೇವಲ ಮೂರೇ ಮೂರು ತಿಂಗಳೇ? ಇಂಥಹ ಚಚರ್ೆ ರಾಜಕೀಯ ವಲಯದಲ್ಲಿ ಈಗ ಆರಂಭವಾಗಿದೆ. ಇದಕ್ಕೆ ಕಾರಣ ಹಲವು. ಒಂದು ಮುಖ್ಯಮಂತ್ರಿಗಳ ಮೇಲಿರುವ ಗುರುತರ ಭೂಹಗರಣಗಳ ಆರೋಪಗಳು. ಎರಡನೆಯದು ಸಿಇಸಿ ವರದಿ. ಇದರಿಂದ ರೆಡ್ಡಿಗಳ ಮೇಲೆ ಕ್ರಮ ಕೈಗೊಳ್ಳುವ ಅನಿವಾರ್ಯತೆ. ಮೂರನೆಯದು ಅನರ್ಹಗೊಂಡಿರುವ ಪಕ್ಷೇತರ ಶಾಸಕರ ಪರ ಹೈಕೋಟರ್್ ತೀಪರ್ು ಹೊರಬೀಳುವ ಸಾಧ್ಯತೆ. ಒಂದು ಕಡೆ ಬಹುಮತವಿಲ್ಲದ ಸಕರ್ಾರ. ಮತ್ತೊಂದು ಕಡೆ ನಿಲ್ಲದ ಪ್ರತಿಪಕ್ಷಗಳ ಆರೋಪ ಹಾಗೂ ಪ್ರತಿಭಟನೆ. ಇದರಿಂದ ಬೇಸತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೊಸದಾಗಿ ಜನಾದೇಶ ಪಡೆಯಲು ಆಲೋಚನೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.

 ವಿಧಾನಸಭೆ ವಿಸಜರ್ಿಸುವುದಕ್ಕಿಂತ ಬೇರೆ ಏನಾದರೂ ದಾರಿಗಳಿವೆ ಎಂದು ಮುಖ್ಯಮಂತ್ರಿಗಳು ಆಪ್ತರ ಜತೆ ಚಚರ್ಿಸಿದ್ದಾರೆಮದು ಹೇಳಲಾಗಿದೆ. ಮತ್ತೊಂದು ಸುತ್ತಿನ ಆಪರೇಷನ್ ಕಮಲ ನಡೆಸಿ ಅದರಲ್ಲಿ ಜೆಡಿಎಸ್ನ ಸುಭಾಷ್ ಗುತ್ತೇದಾರ್, ಕಾಂಗ್ರೆಸ್ನ ಡಾ. ಸುಧಾಕರ್ ಹಾಗೂ ರಾಜಶೇಖರ್ ಪಾಟೀಲ್ ಹುಮ್ನಾಬಾದ್ರನ್ನು ಬಿಜೆಪಿಗೆ ಕರೆ ತರುವ ಯತ್ನವನ್ನು ಅವರು ಮಾಡಲಿದ್ದಾರೆಂದು ಹೇಳಲಾಗುತ್ತಿದೆ. 12 ರ ಬದಲಾಗಿ ಕನಿಷ್ಠ 18 ಜಿಲ್ಲಾ ಪಂಚಾಯ್ತಿಗಳಲ್ಲಿ ಬಹುಮತ ಲಭಿಸಿದ್ದರೆ ಕೂಡಲೇ ವಿಧಾನಸಭೆಯನ್ನು ವಿಸಜರ್ಿ ಚುನಾವಣೆಗೆ ಹೋಗಲು ಅವರು ಉತ್ಸುಕರಾಗಿದ್ದರೆಂದು ಮೂಲಗಳು ಖಚಿತಪಡಿಸಿವೆ.

 ಆದರೆ ಮೊದಲೇ ಅಲ್ಪ ಮತಕ್ಕೆ ಕುಸಿದಿರುವ ಸಕರ್ಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿಗಳು, ಬಜೆಟ್ ಅಧಿವೇಶನದ ನಂತರ ವಿಧಾನಸಭೆ ವಿಸಜರ್ಿಸಲು ಮುಂದಾದರೆ, ರಾಜ್ಯಪಾಲ ಹೆಚ್.ಆರ್. ಭಾರದ್ವಜ್ ಅದನ್ನು ಒಪ್ಪುವ ಸಾಧ್ಯತೆ ಕಡಿಮೆ. ನ್ಯಾಯಾಲಯಗಳ ತೀಪರ್ು ಹೊರಬೀಳುವವರೆಗೆ ವಿಧಾನಸಭೆ ವಿಸಜರ್ಿನೆಗೆ ಅವರು ತತಾಸ್ತು ಎಂದು ಹೇಳುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಕೇಂದ್ರ ಸಕರ್ಾರವೇನಾದರೂ ಲೋಕಸಭೆಯನ್ನು ಕೇಂದ್ರದ ಬಜೆಟ್ ಅಧಿವೇಶನದ ನಂತರ ವಿಸಜರ್ಿಸಿ ಸಾರ್ವತ್ರಿಕ ಚುನಾವಣೆಗೆ ಹೋದರೆ ಯಡಿಯೂರಪ್ಪ ವಿಧಾನಸಭೆ ವಿಸಜರ್ಿಸುವುದನ್ನು ತಡೆಯುವುದು ಕಷ್ಟ. –ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್ ಬೆಂಗಳೂರು

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 • ಪುಟಗಳು

 • Flickr Photos

 • ಜನವರಿ 2011
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಡಿಸೆ   ಏಪ್ರಿಲ್ »
   1
  2345678
  9101112131415
  16171819202122
  23242526272829
  3031  
 • ವಿಭಾಗಗಳು