ಇದಕ್ಕೆ ಕುಮಾರಸ್ವಾಮಿ ಏನೂ ಹೊರತಾಗಿಲ್ಲ. ಅವರಿಗೂ ಬಬ್ಬ ಸುರೇಶ ಇದ್ದಾನೆ. ಅವರ ಟೀಂನಲ್ಲೂ ಒಬ್ಬ ಜಮೀರ, ಮತ್ತೊಬ್ಬ ಅಮೀರ ಇದ್ದಾನೆ.

ಬಿಎಸ್ವೈರನ್ನು ನಾನು ಮೊದಲ ಬಾರಿ ನೋಡಿದ್ದು 1990 ರಲ್ಲಿ. ಅಂದರೆ ಸುಮಾರು 21 ವರ್ಷಗಳ ಹಿಂದೆ. ಆಗ ನಾನು ಮೊದಲ ಪಿಯುಸಿ ವಿದ್ಯಾಥರ್ಿ. ತುಮಕೂರಿನ ಸಿದ್ದರಾಮಣ್ಣ ಹಾಸ್ಟೆಲ್ನ ಮುಂದೆ ಪೆಂಡಾಲ್ನ ವೇದಿಕೆ ಮೇಲೆ ಸಫಾರಿ ಹಾಕಿದ್ದ ವ್ಯಕ್ತಿಯೊಬ್ಬ ಪೊಲೀಸರನ್ನು ವಾಚಾಮಗೋಚರ ಬೈಯ್ಯುತ್ತಿದ್ದ. ಅದೇನೋ ಸರಿಯಾದ ಭದ್ರತೆ ನೀಡಲಿಲ್ಲವೆಂದೋ, ಭಾಷಣ ಮಾಡಲು ಅಡ್ಡಿಪಡಿಸಿದರೆಂದೋ ನೆನಪಿಲ್ಲ. ಆ ವ್ಯಕ್ತಿ ತನ್ನ ಎರಡೂ ಕೈಗಳನ್ನು ಮೇಲಕ್ಕೇರಿಸಿ ಬೈಗುಳಗಳ ಸುರಿಮಳೆಯನ್ನೇ ಸುರಿಸುತ್ತಿದ್ದ. ಅಲ್ಲಿದ್ದ ಪೊಲೀಸರು ಮಾತ್ರ ಏನೂ ಕೇಳಿಸದವರಂತೆ ಸುಮ್ಮನಿದ್ದರು. ಎಸ್ಪಿಯನ್ನೇ ನೇರ ಮಾತುಗಳಲ್ಲಿ ತೆಗಳುತ್ತಿದ್ದ ಈ ವ್ಯಕ್ತಿ ಯಾರೆಂದು ಅಲ್ಲಿದ್ದವರನ್ನು ಕೇಳಿದಾಗ ಆಯಪ್ಪ ಶಿಕಾರಿಪುರದ ಯಡ್ಯೂರಪ್ಪ ಎಂದರು. ಮುಖ ಕೆಂಪಾಗಿಸಿಕೊಂಡು ಏರು ಧ್ವನಿಯಲ್ಲಿ ಮಾತಾಡುತ್ತಾ ಆ ವ್ಯಕ್ತಿ ಅದೇನೆನನ್ನೋ ಸಕರ್ಾರದ ವಿರುದ್ಧ ಬೈಯುತ್ತಿದ್ದ. ಅಬ್ಬಾ ಪೊಲೀಸರನ್ನೇ ಹೀಗೆ ಹಿಗ್ಗಾಮಗ್ಗಾ ಬೈಯ್ಯುತ್ತಿದ್ದಾನಲ್ಲ ಇವನ್ಯಾರಪ್ಪ, ಇವನ ಗುಂಡಿಗೆ ಎಂಥದ್ದಪ್ಪಾ, ಎಂಥ ಸಿಟ್ಟು ಸೆಡವು ಎಂದುಕೊಂಡು ನಾವು ಅಲ್ಲೇ ಇದ್ದ ಕ್ಲಾಸ್ ರೂಂ ಒಳಗೆ ಹೋದೆವು. ಅದಾಗಿ ಸುಮಾರು 10 ವರ್ಷಗಳ ಬಳಿಕ ಒಬ್ಬ ಪತ್ರಕರ್ತನಾಗಿ ಬಿಎಸ್ವೈರನ್ನು ಕಂಡೆ. ಅದೇ ಕೆಂಡದಂತ ಮುಖ. ಮಾತೆತ್ತಿದರೆ ಸಿಬಿಐ ತನಿಖೆಗೆ ಆಗ್ರಹ. ಮುಖ್ಯಮಂತ್ರಿಗಳನ್ನು ಆಡಳಿತ ಪಕ್ಷವನ್ನು ಮಾತೆತ್ತಿದರೆ ತೆಗಳುವುದನ್ನೇ ವೃತ್ತಿಯನ್ನಾಗಿಸಿಕೊಂಡ ವ್ಯಕ್ತಿಯಂತೆ ಗೋಚರಿಸಿದರು ಯಡ್ಯೂತರಪ್ಪ. ಹೆಚ್ಡಿ ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ, ಅವರ ಸೀಟಿನಲ್ಲಿ ಕುಳಿತು ಹೆಚ್ಡಿ ರೇವಣ್ಣ ಹುಕುಂ ಚಲಾಯಿಸಿದ್ದಾರೆಂದು ಆರೋಪಿಸಿ ಇದೇ ಯಡಿಯೂರಪ್ಪ ಮಾಡಿದ ರಂಪಾಟವನ್ನು ಕಂಡವರಿಗೆ, ಧರಣಿ ನಡೆಸಿದ ದಾಟಿ ನೋಡಿದವರಿಗೆ ಎಂಥ ನಿಷ್ಠೂರ ವ್ತಕ್ತಿತ್ವದ ವ್ಯಕ್ತಿ ಇವರು ಎಂದೆನಿಸಿತ್ತು. ಆನಂತರ ಅವರು ಪ್ರತಿಪಕ್ಷದ ನಾಯಕರಾಗಿದ್ದಾಗ ಅವರ ನೂರಾರು ಪತ್ರಿಕಾಗೋಷ್ಠಿಗಳು, ಪ್ರತಿಭಟನೆಗಳು, ಧರಣಿಗಳಿಗೆ ಹೋಗಿದ್ದೇನೆ. ಮೈಕ್ ಹಿಡಿದಿದ್ದೇನೆ. ರೈತರ ಸಮಸ್ಯೆಗಳು, ನೀರಾವರಿ ಯೋಜನೆಗಳು, ಬೆಳೆ ನಾಶ, ಬರ, ನೆರೆಹಾವಳಿ ಯಂತಹ ವಿಷಯಗಳನ್ನು ಮುಂದಿಟ್ಟುಕೊಂಡು ಸದಾ ಆಡಳಿತ ಪಕ್ಷವನ್ನು ಟೀಕಿಸುತ್ತಾ, ಅಧಿಕಾರ ಹಿಡಿದವರನ್ನು ಕಂಡರೆ ಕೆಂಡ ತುಳಿದಂತೆ ಮಾಡುತ್ತಾ ಸದಾ ಸಕರ್ಾರವನ್ನು ಟೀಕಿಸುತ್ತಲೇ, ಸಕರ್ಾರವನ್ನು ತಿದ್ದುವ ಕೆಲಸ ಮಾಡುತ್ತಿದ್ದ ಯಡಿಯೂರಪ್ಪ ಯಾವುದೇ ಅಧಿಕಾರ ಅನುಭವಿಸದೇ ಹೀಗೆ ಬದುಕಿದ್ದು ಹೋಗಿಬಿಡುತ್ತಾರೇನೋ ಎಂದೆನಿಸುತ್ತಿತ್ತು. ಅಂಥಹ ಕಠೋರ ವ್ಯಕ್ತಿತ್ವದ, ಯಾವುದೇ ವಿಷಯದಲ್ಲಿ ರಾಜೀಮಾಡಿಕೊಳ್ಳದ ವ್ಯಕ್ತಿಯಾಗಿದ್ದರು ಯಡಿಯೂರಪ್ಪ. ಮಲ್ಲೇಶ್ವರಂನ ಆಟದ ಮೈದಾನದಲ್ಲಿ ವೇದಿಕೆಯಿಂದ ಇಳಿದು ಬಂದವರೆ ಯಾರೋ ಒಬ್ಬ ಶಾಸಕ ಬಸ್ಸಿನ ತುಂಬಾ ಜನ ಕರೆ ತರಲಿಲ್ಲವೆಂದು ಜನರ ಎದುರೇ ಎಗ್ಗಾಮಗ್ಗಾ ಶಾಸಕರೊಬ್ಬರನ್ನು ಬೈದಿದ್ದು ನನಗೆ ನೆನಪಿದೆ. ಅಂಥಹ ದುವರ್ಾಸ ಮುನಿಯಂತಿದ್ದವರು ಇದೇ ಯಡಿಯೂರಪ್ಪ. ಆದರೆ ಅವರಿಗೂ ಅಧಿಕಾರದ ಅದೃಷ್ಟ ಹಣೆಬರಹದಲ್ಲಿ ಬರೆದಿತ್ತಲ್ಲ. ಕುಮಾರಸ್ವಾಮಿ ಜತೆಗೂಡಿ ಸಕರ್ಾರ ಮಾಡಿದರು. ಅಧಿಕಾರ ಹಂಚಿಕೊಂಡರು, ಕುಮಾರಸ್ವಾಮಿ ಅಧಿಕಾರ ಬಿಟ್ಟುಕೊಡುವುದಿಲ್ಲವೆಂಬುದು ಖಾತ್ರಿಯಾದಾಗ, ಎಲ್ಲಾ ಬಿಜೆಪಿ ಸಚಿವರ ಜತೆಗೂಡಿ ಬಂದು ರಾಜೀನಾಮೆ ಸಲ್ಲಿಸಿ ಅದೇ ಗಂಟುಮುಖ ಹಾಕಿಕೊಂಡು ಹೊರಟು ಹೋದರು. ಆನಂತರ ಗೋಳಾಡಿದ್ದು, ಕಾಂಗ್ರೆಸ್ ಪಕ್ಷ, ಎಂ.ಪಿ. ಪ್ರಕಾಶ್ ನೇತೃತ್ವದಲ್ಲಿ ಸಕರ್ಾರ ರಚಿಸಲು ಕೈಹಾಕಬಹುದು ಎಂಬ ಆತಂಕದಲ್ಲಿ ಮತ್ತೊಮ್ಮೆ ಜೆಡಿಎಸ್ ನೀಡಿದ ಬೆಂಬಲ, ಆನಂತರ ಆ ಪಕ್ಷ ಅಧಿಕಾರ ಕೊಟ್ಟು ಕಸಿದುಕೊಂಡಾಗ ಜನರ ಮುಂದೆ ವಚನಭ್ರಷ್ಟತೆ ವಿಷಯ ಇಟ್ಟುಕೊಂಡು ಮತ ಭಿಕ್ಷೆ ಬೇಡಿದರು ಯಡಿಯೂರಪ್ಪ. ಜನ ಕುಮಾರಸ್ವಾಮಿ ಮೇಲಿದ್ದ ಸಿಟ್ಟನಿಂದ ಆಶೀವರ್ಾದ ಮಾಡಿದಾಗ ಅದರಲ್ಲಿ ಭರ್ಜರಿ ಯಶಸ್ವಿಯೂ ಆದರು. ಸ್ವಂತ ಶಕ್ತಿಯ ಸಕರ್ಾರ ರಚಿಸಿದ ಯಡಿಯೂರಪ್ಪ, ಇಷ್ಟು ದಿನ ಧ್ವನಿ ಎತ್ತಿದ ಸ್ವಜನ ಪಕ್ಷಪಾತ, ಅಧಿಕಾರ ಲಾಲಸೆ, ಅಧಿಕಾರ ದುರ್ಬಳಕೆ, ನಂಬಿಕೆ ದ್ರೋಹ, ರೈತರ ಸಂಕಷ್ಟಗಳು, ನೀರಾವರಿ ಸಮಸ್ಯೆಗಳು, ನೆರೆ ಹಾವಳಿ ಬಗ್ಗೆ ಸುಮಾರು ಮೂರು ದಶಕಗಳಿಗೂ ಹೆಚು ಕಾಲ ಹೋರಾಟ ನಡೆಸಿದ ಬಿಎಸ್ವೈ, ಎಂಥಹ ಅದ್ಭುತ ಸಕರ್ಾರ ನೀಡಬಹುದು. ಯಾರ ಹಂಗೂ ಇಲ್ಲದ ಬಿಜೆಪಿ ಸಕರ್ಾರ ಎಂಥಹ ಸುಭದ್ರ, ಸದೃಢ ಸಕರ್ಾರವನ್ನು ನೀಡಿ ಅದ್ಭುತ ಆಡಳಿತ ನೀಡಬಹುದೆಂದು ಇಡೀ ನಾಡು ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಬಿಎಸ್ವೈ ಏನು ಮಾಡಿದರು? ಹಲವಾರು ದಶಕಗಳ ಕಾಲ ತಾವೇ ನಡೆಸಿದ ಹೋರಾಟದ ವಿಷಯಗಳನ್ನು ಮರತೆ ಬಿಟ್ಟರು. ರೈತರನ್ನು ಸಂಕಷ್ಟಗಳನ್ನು ನೆನಪಿಸಿಕೊಳ್ಳಲಿಲ್ಲ. ನೀರಾವರಿ ಯೋಜನೆಗಳ ಬಗ್ಗೆ ಚಕಾರ ಎತ್ತಲಿಲ್ಲ. ಸ್ವಜನ ಪಕ್ಷಪಾತ, ಅಧಿಕಾರ ದುರ್ಬಳಕೆ, ಲಾಲಸೆಯನ್ನು ಮೂಲಮಂತ್ರ ಮಾಡಿಕೊಂಡವರಂತೆ ವತರ್ಿಸಿದರು. ಮುಖ್ಯಮಂತ್ರಿಗಳ ಕುಟುಂಬ ವರ್ಗವನ್ನು ಶಕ್ತಿಕೇಂದ್ರದ ಹೊರಗಿಡಬೇಕೆಂದು ಹೋರಾಟ ಮಾಡಿದವರೇ ಇಂದು ತಮ್ಮ ಮಕ್ಕಳು, ಅಳಿಯ, ಸೊಸೆಯಂದಿರನ್ನು ಶಕ್ತಿಕೇಂದ್ರಕ್ಕೆ ಕರೆತಂದು ಕೊಳ್ಳೆಹೊಡೆಯಲು ಅವಕಾಶ ಮಾಡಿಕೊಟ್ಟರು. ತಮ್ಮ ಪುತ್ರರು ಜನಸಾಮನ್ಯರ ಕೈಗೆ ಸಿಗದಂತೆ ಮಾಡಿಬಿಟ್ಟರು. ಮುವತ್ತೈದು ವರ್ಷಗಳ ಕಾಲ ಯಾವುದೇ ಅಧಿಕಾರ ಅನುಭವಿಸದೇ ಜನ ಸೇವೆ ಮಾಡಿದ ವ್ಯಕ್ತಿ, ಅಧಿಕಾರ ಶಾಶ್ವತವಾಗಿ ತನ್ನ ಬಳಿಯೇ ಉಳಿಯುವಂತೆ ಮಾಡಲು ನಾನಾ ವಾಮ ಮಾರ್ಗಗಳನ್ನು ತುಳಿದರು. ಹೈಕಮಾಂಡನ್ನೇ ಖರೀದಿಸುವಷ್ಟು ದರ್ಪ ಮೆರೆದರು. ಈ ನಾಡಿನ ನೆಲ, ಜಲ, ಭಾಷೆ ಉಳಿಸಬೇಕು, ಪ್ರಕೃತಿ ಸಂಪತ್ತು ಪೋಲಾಗದಂತೆ ತಡೆಯಬೇಕೆಂದು ನೂರಾರು ಧರಣಿ ಪ್ರತಿಭಟನೆ ಮಾಡುತ್ತಾ ನಾಡಿನ ಮೂಲೆ ಮೂಲೆ ಸಂಚರಿಸಿದ ಯಡಿಯೂರಪ್ಪ, ಕೇವಲ ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ಏನೆಲ್ಲಾ ಮಾಡಿದರು. ಶಾಸಕರನ್ನು ಅಕ್ಷರಶ: ತರಕಾರಿಯಂತೆ ಖರೀಸಿದರು. ತಮ್ಮದೇ ಪಕ್ಷದ ಶಾಸಕರನ್ನು ಎತ್ತಿ ವಿಧಾನಸೌಧದಿಂದ ಹೊರಹಾಕಿಸಿದರು. ಪ್ರತಿಪಕ್ಷಗಳ ನಾಯಕರಿಗೆ ಕಿಂಚಿತ್ತೂ ಗೌರವಕೊಡದವರಂತೆ ವತರ್ಿಸಿದರು. ಕೇವಲ ಸೀಟಿನ ಮೇಲೆ ಕುಳಿತಿದ್ದನ್ನು ಸಹಿಸದೇ ಸೂಕ್ಷ್ಮತೆ ಮೆರೆದಿದ್ದ ಇದೇ ಯಡಿಯೂರಪ್ಪ, ಹತ್ತಾರು ಹಗರಣಗಳ ಬಗ್ಗೆ ಪ್ರತಿಪಕ್ಷದವರು ದಾಖಲೆ ಸಮೇತ ಜನರ ಮುಂದಿಟ್ಟಾಗ ಸೂಕ್ಷ್ಮತೆ ಮರೆತು ಅವುಗಳನ್ನು ತಮ್ಮ ಪೃಷ್ಠದ ಕೆಳಗೆ ಹಾಕಿ ಹೊಸಕಿ ಕುಳಿತುಕೊಂಡು ಬಿಟ್ಟರು. ಅಬ್ಬಾ ಎಂತಹ ಪರಿವರ್ತನೆ ಕೇವಲ ಮೂರೇ ವರ್ಷದಲ್ಲಿ. ಬಿಎಂಐಸಿ ಯೋಜನೆ ವಿರುಧ್ಧ ಗಂಟೆಗಟ್ಟಲೆ ವಿಧಾನಸೌಧದಲ್ಲಿ ಭಾಷಣ ಮಾಡುತ್ತಿದ್ದ ಯಡಿಯೂರಪ್ಪ, ಆ ಯೋಜನೆ ಮುಖ್ಯಸ್ಥನೊಂದಿಗೆ ರಾಜೀಮಾಡಿಕೊಂಡು ಬಿಟ್ಟರಲ್ಲ. ರೈತರ ಸಾವಿರಾರು ಎಕರೆ ಭೂಮಿಯನ್ನು ಹೆಚ್ಚುವರಿಯಾಗಿ ನೀಡಿದ್ದೇವೆಂದು ತಾವೇ ಸುಪ್ರೀಂಕೋರ್ಟಗೆ ಪ್ರಮಾಣ ಪತ್ರ ಸಲ್ಲಿಸಿದರೂ ಅದನ್ನು ಹಿಂದಕ್ಕೆ ಪಡೆಯಲು ಕ್ರಮಕೈಗೊಳ್ಳುತ್ತೇನೆ ಎಂದು ಗಟ್ಟಿಯಾಗಿ ಹೇಳಲಿಲ್ಲ. ಅಬ್ಬಬ್ಬಾ ಎಂಥಹ ಪರಿವರ್ತನೆ…..! ಬಹುಷ: ಯಡಿಯೂರಪ್ಪ ಈ ರಾಜ್ಯದ ಉದ್ದಗಲಕ್ಕೆ ಓಡಾಡಿ ಭೌಗೋಳ ಅಭ್ಯಾಸ ಮಾಡಿದರೆ ಹೊರತು ರಾಜಕೀಯ ಇತಿಹಾಸವನ್ನು ಓದಿ ವರ್ತಮಾನಕ್ಕೆ ಹೊಂದಿಕೊಂಡವರಲ್ಲ ಎಂದೆನಿಸುತ್ತದೆ. ಲಾಲ್ ಬಹದ್ದೂರ್ ಶಾಸ್ತ್ರಿ, ವಾಜಪೇಯಿ, ಅವರೆಲ್ಲಾ ರಾಷ್ಟ್ರೀಯ ನಾಯಕರು ಬಿಡಿ, ನಮ್ಮಲ್ಲೇ ಇದ್ದ ಕೆಂಗಲ್, ನಿಜಲಿಂಗಪ್ಪ, ಕಡಿದಾಳ್ ಅವರ ವ್ಯಕ್ತಿತ್ವವನ್ನಾದರೂ ಒಂದು ಸ್ವಲ್ಪವಾದರೂ ಓದಿ ಮೈಗೂಡಿಸಿಕೊಳ್ಳಬಹುದಾಗಿತ್ತು. ಪಾಪ ಅವರೇನು ಮಾಡಿಯಾರು ಅವರ ಜತೆಯಲ್ಲಿ ಇದ್ದವರು ಅಂತವರೇ. ಸದಾ ಬಾಲಂಗೋಚಿಯಂತೆ ಸುತ್ತುವ ಸಿದ್ದಲಿಂಗಸ್ವಾಮಿ. ಹಿಂದೆ ಮುಂದೆ ಓಡಾಡುತ್ತಿದ್ದ ರೇಣುಕಾಚಾರ್ಯ. ಯಾವುದಕ್ಕೂ ಪ್ರತಿಕ್ರಿಯಿಸದ ಮತ್ತೊಂದಿಬ್ಬರು ವ್ಯಕ್ತಿಗಳು. ಇಂಥವರ ನಡುವೆ ಓಡಾಡುವ ನಿಮಗೆಲ್ಲಿ ಇತಿಹಾಸ ತಿಳಿದುಕೊಳ್ಳಲು ಬಿಡುವೆಲ್ಲಿ ಇರುತ್ತದೆ? ಇದಕ್ಕೆ ಕುಮಾರಸ್ವಾಮಿ ಏನೂ ಹೊರತಾಗಿಲ್ಲ. ಅವರಿಗೂ ಬಬ್ಬ ಸುರೇಶ ಇದ್ದಾನೆ. ಅವರ ಟೀಂನಲ್ಲೂ ಒಬ್ಬ ಜಮೀರ, ಮತ್ತೊಬ್ಬ ಅಮೀರ ಇದ್ದಾನೆ. ಆರು ಕೋಟಿ ಜನರ ಬದುಕನ್ನು ಮುನ್ನಡೆಸಲು ಅಧಿಕಾರದ ಚುಕ್ಕಾಣಿ ಹಿಡಿಯುವಷ್ಟು ಬುದ್ಧಿವಂತವಾಗಿರುವ ನಿಮಗೆ ಜತೆಯಲ್ಲಿ ಇಂದಿಬ್ಬರು ಬುದ್ಧಿವಂತರನ್ನು, ಕಚ್ಚೆ ತನ್ನಿಚ್ಛೆಯನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಂಡು ಸದಾ ಎಚ್ಚರದ ಮನಸ್ಸನ್ನು ಹೊಂದಿರುವ ಬೆರಳೆಣಿಕೆಯಷ್ಟು ಜನರನ್ನು ಜತೆಯಲ್ಲಿ ಇಟ್ಟುಕೊಳ್ಳಲು ಸಮಸ್ಯೆಯಾದರೂ ಏನು? ಯಡಿಯೂರಪ್ಪ ನೀವು ಇಷ್ಟು ದಿನ ನಡೆಸಿದ ಹೋರಾಟ, ಮೂಡಿಸಿದ ಭರವಸೆ, ತೋರಿಸಿದ ವಿಶ್ವಾಸ, ನಮ್ಮನ್ನು ನಿಮ್ಮನ್ನು ಚುನಾಯಿಸಿದವರನ್ನು ಉದ್ದಾರ ಮಾಡಲು ಎಂದುಕೊಂಡಿದ್ದವು. ಆದರೆ ಈ ನಿಮ್ಮೆಲ್ಲಾ ಹೋರಾಟ, ಹಾರಾಟ ನಿಮ್ಮ ಮನೆ ಮಂದಿಯನ್ನು ಸಾಕಲೇ ಎಂದೆನಿಸುತ್ತದೆ ಜನರಿಗೆ, ಕಡೆ ಘಳಿಗೆಯಲ್ಲಾದರೂ ಜಾಗೃತರಾಗಿ. ಈಗಲಾದರೂ ಅಧಿಕಾರದ ವ್ಯಾಮೋಹವೇಕೆ? ಸತತ 25 ವರ್ಷ ಪಶ್ಚಿಮಬಂಗಾಳ ಆಳಿದ ಕಮ್ಯೂನಿಷ್ಟರೇ ಅಧಿಕಾರ ಕಣ್ಣಮುಂದೆ ಕೊಚ್ಚಿಕೊಂಡು ಹೋಗುವಾಗ ಕೊರಗಲಿಲ್ಲ. ಅಂಥದರಲ್ಲಿ ಇನ್ನು ಇಲ್ಲಿ 2 ವರ್ಷ ಅಧಿಕಾರದಲ್ಲಿ ಮುಂದುವರೆಯುತ್ತೇನೆ. ಬಿಜೆಪಿ 25 ವರ್ಷ ಇರುತ್ತದೆ ಎಂದು ಹೇಳಿಕೆ ನೀಡುತ್ತೀರಿ. ಇದೇನಾ ನಿಮ್ಮ ಮೇರು ವ್ಯಕ್ತಿತ್ವ. ಆಪಾದನೆ ಬಂದಾಗಲೇ ಆಪಾದನೆಯಿಂದ ಹೊರಬರಲು ಮುಂದಾಗಿದ್ದರೆ ಜನರ ಕಣ್ಣಲ್ಲಿ ನೀವು ಹೀರೋ ಆಗಿರುತ್ತಿದ್ದೀರಿ. ಆದರೆ ನೀವೀಗ ವಿಲನ್. ಅದನ್ನು ಹೋಗಲಾಡಿಸಿಕೊಳ್ಳಲು ಪ್ರಯತ್ನಿಸಿ. ಯಾವ ಜಾತಿ, ಸಮುದಾಯವೂ ಭಷ್ಟಾಚಾರದ ರಕ್ಷಣೆಗೆ ಬರುವುದಿಲ್ಲ. ಎಲ್ಲಾ ಜಾತಿ, ಸಮುದಾಯಕ್ಕೂ ಆತ್ಮಸಾಕ್ಷಿ ಎಂಬುದಿರುತ್ತದೆ, ಅದನ್ನು ಮರೆಯಬೇಡಿ. ನಿಮ್ಮ ಜತೆಗಿರುವ ಮಠಾಧೀಶರಿಗೆ ಹೆಂಡತಿ ಮಕ್ಕಳಿದ್ದರೆ ಯಾರೂ ಅವರ ಬಳಿಗೆ ಹೋಗುತ್ತಿರಲಿಲ್ಲ. ಸಾರ್ವಜನಿಕ ಹಿತಾಸಕ್ತಿ ಇಟ್ಟುಕೊಂಡು ಅವರುಗಳು ಮಠ ಕಟ್ಟಿರುವುದರಿಂದಲೇ ಜನ ಅವರ ಬಳಿಗೆ ಹೋಗುತ್ತಾರೆ. ಇಲ್ಲವಾದರೆ ನಿಮ್ಮಂತೆ ತಮ್ಮ ಹಾಗೂ ತಮ್ಮ ಕುಟುಂಬದ ಚಿಂತೆ ಮಾಡಿದರೆ ಮಠಾಧೀಶರನ್ನೂ ಯಾರೂ ಮೂಸು ನೋಡುವುದಿಲ್ಲ ಎಂಬುದು ತಿಳಿದಿರಲಿ. ನಿಮ್ಮದೇ ಪಕ್ಷದ ಬಂಗಾರು ಲಕ್ಷಣ್, ಕೇವಲ ಒಂದು ಲಕ್ಷ ರುಪಾಯಿ ಪಾಟರ್ಿ ಫಂಡ್ ಪಡೆದು ಸಿಕ್ಕಿ ಬಿದ್ದು ರಾಜಕೀಯ ಇತಿಹಾಸದ ಪುಟಗಳಿಂದ ಅಳಿಸಿಹೋದರು. ನೀವು ಅಳಿಸಿಹೋಗುವುದು ಬೇಡ. ಆದರೆ ಅಪ್ರಮಾಣಿಕನಾಗಿದ್ದೆ ಎಂದಬುದನ್ನು ಒಮ್ಮೆ ಜನರ ಮುಂದೆ ಒಪ್ಪಿಕೊಂಡು ಬಿಡಿ. ಜನ ಮೆಚ್ಚುತ್ತಾರೆ. ಕ್ಷಮಿಸುವ ದೊಡ್ಡತನವನ್ನಾದರೂ ತೋರಬಹುದು. ಆದರೆ ಭ್ರಷ್ಟಾಚಾರಿಯಾಗಿದ್ದು ಸಮಾಜದಲ್ಲಿ ಭ್ರಷ್ಟಾಚಾರ ಹೋಗಲಾಡಿಸಲು ಹೋರಾಡುತ್ತೇನೆ ಎಂದು ಕುಡಿದ ಅಮಲಿನಲ್ಲಿ ಕನವರಿಸುವ ವ್ಯಕ್ತಿಯಂತೆ ಮಾತನಾಡಬೇಡಿ. ಜನ ಹೇಸಿಗೆ ಪಡುತ್ತಾರೆ. ನಿಮ್ಮ ಸ್ಥಾನದಲ್ಲಿ ಯಾವುದೋ ತಾಂಡ್ಯಾದ ವ್ಯಕ್ತಿಯನ್ನು ಕರೆತಂದು ಕೂರಿಸಿದರೂ ನೀವು ಮಾಡಿರುವ ಸಕರ್ಾರಿ ಕೆಲಸಗಳನ್ನು ಅವನೂ ಮಾಡುತ್ತಾನೆ. ಅಥವಾ ಅಧಿಕಾರಿಗಳು ಮಾಡಿಸುತ್ತಾರೆ. ಯಾವುದಾದರೂ ಒಂದೇ ಒಂದು ದೊಡ್ಡ ಯೋಜನೆಯನ್ನು ಎಷ್ಟೇ ಪ್ರತಿರೋಧ ಬಂದರೂ ಜಗ್ಗದೇ ಜಾರಿಗೊಳಿಸಿದ್ದು ಇದ್ದರೆ ಜನರಿಗೆ ತಿಳಿಸಿ ಎಲ್ಲರೂ ಮೆಚ್ಚುತ್ತಾರೆ. ಓಟಿನ ಲೆಕ್ಕಾಚಾರದಲ್ಲಿ ಜಾರಿಗೊಳಿಸಿದ ಯಾವುದೇ ಸಕರ್ಾರಿ ಕಾರ್ಯಕ್ರಮದ ಬಗ್ಗೆ ಪದೇ ಪದೇ ಹೇಳಿ ಸಣ್ಣವರಾಗಬೇಡಿ. ಮುವತ್ತೈದು ವರ್ಷ ಹೋರಾಟ ಮಾಡಿ ಎತ್ತರಕ್ಕೆ ಬೆಳೆದ ವ್ಯಕ್ತಿ ನೀವು. ಜನರ ಭಾವನೆಗಳಿಗೆ ಘಾಸಿಯಾಗದಂತೆ ವತರ್ಿಸುವುದನ್ನು ಕಲಿತುಕೊಳ್ಳಿ. ಕುಮಾರಸ್ವಾಮಿ ಅಧಿಕಾರ ಹಸ್ತಾಂತರಿಸಲು ನಿರಾಕರಿಸಿದ್ದನ್ನು ನಾಡಿನಾದ್ಯಂತ ಡಂಗುರ ಸಾರಿದ ನಿಮಗೆ ಮತ್ತೊಬ್ಬರಿಗೂ ಅಧಿಕಾರದ ಆಸೆ ಇರುತ್ತದೆ ಎಂಬುದನ್ನು ಮರೆಯಬೇಡಿ. ನಿಮ್ಮ ಸ್ವಯಂಕೃತ ಅಪರಾಧದಿಂದ ನೀವು ಅಧಿಕಾರ ಕಳೆದುಕೊಂಡಿದ್ದೀರಿ. ಟೆಲಿಪೋನ್ ಕದ್ದಾಲಿಕೆಗೆ ಪ್ರಯತ್ನ. ಲೋಕಾಯುಕ್ತರ ಮೇಲೆ ಒತ್ತಡ ಹೇರಲು ನಡೆಸಿದ ಯತ್ನ. ಒಂದೇ ಎರಡೇ ನೋವು ಅಧಿಕಾರ ಉಳಿಸಿಕೊಳ್ಳಲು ಮಾಡಿದ ಯತ್ನ. ಇದಕ್ಕೆ ನೀವೆ ಹೊಣೆ. ಇಷ್ಟಕ್ಕೂ ನೀವು ಅಧಿಕಾರ ಹಸ್ತಾಂತರಿಸುತ್ತಿರುವುದು ನಿಮ್ಮ ಪಕ್ಷದವರಿಗೇ ಹೊರತು ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷದವರಿಗಲ್ಲ. ಬಿಡಿ ಅಧಿಕಾದ ವ್ಯಾಮೋಹ. ಈಗಲಾದರೂ ಬಿಡುವಿದೆ, ಒಮ್ಮೆ ಇತಿಹಾಸವನ್ನು ಓದಿ, ವರ್ತಮಾನಕ್ಕೆ ನಿಮ್ಮನ್ನು ನೀವು ಅಳವಡಿಸಿಕೊಳ್ಳಿ……………………………….. —–ಎಂ.ಎನ್. ಚಂದ್ರೇಗೌಡ ಪತ್ರಕರ್ತ.

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 • ಪುಟಗಳು

 • Flickr Photos

 • ಜುಲೈ 2011
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಜೂನ್   ಆಗಸ್ಟ್ »
   12
  3456789
  10111213141516
  17181920212223
  24252627282930
  31  
 • ವಿಭಾಗಗಳು