ನಿಮ್ಮದೊಂದು ವಿಚಿತ್ರ ಪ್ರೇಮ ಕಥೆ — ಅವಳ ಕಾರಿಂದ ಇಳಿದು ಬಂದೆ

ನಾಳೆ ವ್ಯಾಲಂಟೈನ್ ದಿನ. ಕನ್ನಡದಲ್ಲಿ ಇದೊಂದು ಪ್ರೇಮಿಗಳ ದಿನ. ಇದನ್ನು ಆಚರಿಸುವುದು ಬಿಡುವುದು ಬೇರೆ ವಿಷಯ. ಪ್ರೀತಿಸುವವರು ರಿನಿವಲ್ ಮಾಡಿಕೊಳ್ಳುವ, ಪ್ರೊಫೋಸ್ ಮಾಡುವವರು ನಾಳೆ ಒಳ್ಳೆ ಮುಹೂರ್ತ ನಿಗದಿಪಡಿಸಿ ನಿವೇದನೆ ಮಾಡಿಕೊಳ್ಳುವ, ಜತೆಗೆ ಪ್ರೀತಿಯ ತಿರಸ್ಕಾರಕ್ಕೆ ಒಳಗಾಗುವವರು ಕೊರಗುತ್ತಾ ಸೊರಗುವ ಏಕೈಕ ದಿನ. ಇಂಥಹ ದಿನಕ್ಕೆ ಕಾಲಿಡುವ ಮುನ್ನ ಒಂದು ಅದ್ಭುತ ಲವ್ ಸ್ಟೋರಿ ಹೇಳದಿದ್ದರೆ ಹೇಗೆ?
ಆಕೆಗೆ 32 ರ ಹರೆಯ, ಅವನಿಗೆ 47 ರ ಇಳಿ ವಯಸ್ಸು. ಇಬ್ಬರಿಗೂ …ಮದುವೆಯಾಗಿದೆ. ಅವಳಿಗೆ ಒಬ್ಬ ಗಂಡು ಮಗ, ಅವನಿಗೆ ಇಬ್ಬರು ಗಂಡು ಮಕ್ಕಳು. ಇಬ್ಬರ ನಡುವೆ ಸುಮಾರು 16 ವರ್ಷಗಳ ಸ್ನೇಹ. ಸ್ನೇಹ ಪ್ರೇಮಕ್ಕೆ ತಿರುಗಿದ್ದರೂ ಒಬ್ಬರಿಗೊಬ್ಬರು ತಮ್ಮ ಮದುವೆಗಳ ಮುರಿದುಕೊಂಡು ಮರುಮದುವೆಯಾಗಲು ಇಷ್ಟವಿಲ್ಲ. ಇವರಿಬ್ಬರ ಭೇಟಿ ಪ್ರತಿ ಮಂಗಳವಾರ. ಆತ ಎಲ್ಲಿದ್ದರೂ ಅವಳ ಮನೆಯಲ್ಲಿರಬೇಕು. ಅವಳು ಎಲ್ಲಿದ್ದರೂ ಅವನ ಮುಂದೆ ನಿಂತಿರಬೇಕು. ಮದುವೆಯಾಗಿದ್ದರೂ ಅವಳ ಗಂಡನಿಗಾಗಲಿ ಇವಳ ಹೆಂಡತಿಗಾಗಲಿ ಇವರಿಬ್ಬರ ಭೇಟಿಯನ್ನು ತಪ್ಪಿಸಲು ಸಾಧ್ಯವಿಲ್ಲ. ಏಕೆಂದರೆ ಇವರಿಬ್ಬರು ಪ್ರೇಮಿಗಳೆಂದು ಅವಳ ಗಂಡ, ಇವನ ಹೆಂಡತಿಗೆ ಗೊತ್ತು. ಇವರಿಬ್ಬರ ಬಗ್ಗೆ ಅನುಮಾನ ಪಡಲು ಅವರಿಬ್ಬರಿಗೂ ಸಾಧ್ಯವೇ ಇಲ್ಲಾ. ಏಕೆಂದರೆ ಅವನನ್ನು ಒಪ್ಪಿಸಿ ಅವಳ ಜತೆ ಮದುವೆ ಮಾಡಿಸಿದವನೇ ಇವನು. ಅವಳ ಜತೆ ನನಗೆ ಯಾವದೇ ದೈಹಿಕ ಸಂಬಂಧ ಇಲ್ಲವೆಂದು ಸಾಬಿತುಪಡಿಸಲೇ ಅವನು ಅವಳನ್ನು ಅವನೊಂದಿಗೆ ಮದುವೆ ಮಾಡಿಸಿದ್ದ. ಇದು ಇವನ ಹೆಂಡತಿಗೂ ಗೊತ್ತಿತ್ತು. ಆದ್ದರಿಂದಲೇ ಅವರಿಬ್ಬರೂ ಪಿಕ್ನಿಕ್ಗೆ, ಅವನ ಹಿನ್ನೀರಿನ ತೋಟಕ್ಕೆ ಹೋಗುವಾಗ ಅವಳ ಮಗ, ಇವನ ಮಕ್ಕಳನ್ನೂ ಒಟ್ಟಾಗಿ ಕರೆದೊಯ್ಯುತ್ತಾರೆ. ಹಬ್ಬ ಹರಿದಿನಗಳಲ್ಲಿ ಒಬ್ಬರ ಮನೆಗೊಬ್ಬರು ಭೇಟಿಕೊಡುತ್ತಾರೆ. ಎಲ್ಲರೂ ಒಟ್ಟಾಗಿ ಹುಟ್ಟು ಹಬ್ಬ ಆಚರಿಸುತ್ತಾರೆ.
ಅವಳನ್ನು ಕೇಳಿದೆ, ಅವನನ್ನು ಪ್ರೀತಿಸಿದ ಮೇಲೆ ಮದುವೆಯಾಗು, ನಿನ್ನ ಗಂಡನಿಗೆ ವಿಚ್ಛೇಧನ ನೀಡು ಪ್ರೀತಿಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗು ಎಂದರೆ ಬಿಲ್ಕುಲ್ ಆಗುವುದಿಲ್ಲ ಎನ್ನುತ್ತಾಳೆ. ಒಂದು ಗಂಡು ಮತ್ತು ಹೆಣ್ಣಿನ ನಡುವೆ ಪರಸ್ಪರ ಆಕರ್ಷಣೆಯ ಕೇಂದ್ರ ಬಿಂದುವೇ ಸೆಕ್ಸ್. ಅದಿಲ್ಲದಿದರೆ ನೀವೇಕೆ ಹಾಗೆ ಸುಮ್ಮನೆ ಪ್ರೀತಿಸುತ್ತೀರಿ ಎಂದರೆ ಆಕೆ ಸೆಕ್ಸ್ ಮೀರಿದ ಪ್ರೀತಿ ನಮ್ಮಿಬ್ಬರದು ಎನ್ನುತ್ತಾಳೆ. ಅವನನ್ನು ಕೇಳಿದರೆ ಆಕೆ ನನ್ನ ಪ್ರಾಣ. ಅವಳನ್ನು ಪ್ರೀತಿಸದೇ ಇರಲಾರೆ, ಆದರೆ ನನ್ನ ಪತ್ನಿಯಿಂದ ಮಾತ್ರ ದೂರ ಉಳಿಯಲಾರೆ ಎನ್ನುತ್ತಾನೆ. ಇವಳನ್ನ ಕಂಡರೆ ಅಷ್ಟೊಂದು ಪೊಸೆಸೀವ್ ಆತ. ಫೇಸ್ಬುಕ್ನಲ್ಲಿ ಯಾವ ಪೋಟೋ ಹಾಕಬೇಕು ಎಂಬುದನ್ನು ಆತನೇ ನಿರ್ಧರಿಸುತ್ತಾನೆ. ಯಾರ ಜತೆ ಮಾತಾಡಿದರೂ ಅನುಮಾನಿಸುತ್ತಾನೆ. ಇವಳ ವ್ಯವಹಾರಲ್ಲಿ ಮೂಗು ತೂರಿಸುತ್ತಾನೆ. ಇದು ಸುತಾರಾಂ ಅವಳಿಗೆ ಇಷ್ಟವಿಲ್ಲ. ಅವನ ನಡೆವಳಿಗೆ ಬಗ್ಗೆ ಒಳಗೊಳಗೆ ತಿರಸ್ಕಾರ ಅವಳಿಗೆ. ಹೀಗಿದ್ದರೂ ನಾನು ಅವನನ್ನು ಬಿಟ್ಟಿರಲಾರೆ ಎನ್ನುತ್ತಾಳೆ. ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರಲಾರರು. ಮದುವೆ ಮುರಿದು ಮರು ಮದುವೆ ಮಾಡಿಕೊಳ್ಳಲಾರರು. ಪರಸ್ಪರ ಗಂಡ, ಹೆಂಡತಿ ಮನಸ್ಸು ನೋಯಿಸಲಾರರು. ಮತ್ತೊಂದು ಹಂತಕ್ಕೆ ಮುಂದುವರೆಯಲಾರರು. ನಿಮ್ಮದೊಂದು ವಿಚಿತ್ರ ಪ್ರೇಮ ಕಥೆ ಎಂದು ಅವಳ ಕಾರಿಂದ ಇಳಿದು ಬಂದೆ. ಆದ್ದರಿಂದಲೇ ನಿಮಗೆ ತಿಳಿಸಿದೆ.

–ಎಂಎನ್ಸಿ

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 • ಪುಟಗಳು

 • Flickr Photos

 • ಫೆಬ್ರವರಿ 2012
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಜನ   ಮಾರ್ಚ್ »
   1234
  567891011
  12131415161718
  19202122232425
  26272829  
 • ವಿಭಾಗಗಳು