ಪತ್ರಕರ್ತರೊಬ್ಬರು ನ್ಯೂಸ್ ಛಾನೆಲ್ ಒಂದರ ಮಾಲೀಕರಾದ ಒಂದು ದೊಡ್ಡ ಪರಂಪರೆ, ಇತಿಹಾಸ ಸೃಷ್ಟಿ

ಇಂದು ರಾಜ್ಯದಲ್ಲಿ ಮತ್ತೊಂದು ಚಾನೆಲ್ ಲೋಕಾರ್ಪಣೆಯಾಗಿದೆ. ಪತ್ರಕರ್ತರೊಬ್ಬರು ಛಾನೆಲ್ ಒಂದರ ಮಾಲೀಕರಾಗಬಹುದು. ಒಂದು ಸುದ್ದಿವಾಹಿನಿ ಸಂಸ್ಥೆಯೊಂದನ್ನು ಕಟ್ಟಬಲ್ಲಷ್ಟು ಯುಕ್ತಿ- ಶಕ್ತಿಯನ್ನು ಉಳ್ಳವರಾಗಿರುತ್ತಾರೆಂದು ಸಾಬೀತಾದ ಸುವರ್ಣ ದಿನ ಪತ್ರಕರ್ತರ ಪಾಲಿಗೆ. ಏಕೆಂದರೆ ಪತ್ರಕರ್ತರು ಸಣ್ಣ ಪುಟ್ಟ ಪತ್ರಿಕೆ ಮಾಡಬಹುದು. ಆದರೆ ರಾಜ್ಯ ಮಟ್ಟದ ದೈನಿಕ ಆರಂಭಿಸುವುದು, ಸುದ್ದಿ ವಾಹಿನಿ ಮಾಡುವ ಕೆಲಸ ಬಹಳ ಕಠಿಣ. ಆಥರ್ಿಕವಾಗಿ ಗಟ್ಟಿಯಾಗಿದ್ದರೆ ಮಾತ್ರ ಇದು ಸಾಧ್ಯವಾಗುತ್ತದೆ. ಇಲ್ಲವಾದರೆ ಆ ಕಡೆ ತಿರುಗಿನೋಡುವುದೂ  ಕಷ್ಟ. ಕೋಟ್ಯಂತರ ರುಪಾಯಿ ಬಂಡವಾಳ ಹೂಡಬೇಕಾದ, ಮಾಡಿದ ನಂತರ ಅದನ್ನು ಉಳಿಸಿಕೊಂಡು ಹೋಗುವ ಸಲುವಾಗಿ ಮತ್ತಷ್ಟು ಹಣ ಚೆಲ್ಲಬೇಕಾದ ಎದೆಗಾರಿಕೆ ಬೇಕಾಗುತ್ತದೆ ಇಲ್ಲಿ. ಯಾವುದೇ ಗುಣಾಕಾರ, ಭಾಗಾಕಾರ ಇರಲಿ. ಆ ಮಟ್ಟಿಗೆ ಪತ್ರಕರ್ತರೊಬ್ಬರು ಶ್ರಮ, ಛಲ ಇದ್ದರೆ ಉದ್ದಯಮಿಯೂ ಆಗಬಹುದು. ಸಂಸ್ಥೆ ಅಧ್ಯಕ್ಷ, ಚಾನೆಲ್ನ ಮುಖ್ಯಸ್ಥ ಎರಡೂ ಆಗಬಹುದೆಂದು ಸಾಬೀತಾದ ಅಪರೂಪದ ದಿನ ಇಂದು.
ಇಂದು ಹೊಸ ಚಾನೆಲ್ ನಾಡಿಗೆ ಅರ್ಪಣೆಯಾದ ನಂತರ ಆಕಸ್ಮಿಕವಾಗಿ ಅದನ್ನು ವೀಕ್ಷಿಸಿದೆ. ಆ ಚಾನೆಲ್ನ ಮುಖ್ಯಸ್ಥರು, ಅವರ ಕಚೇರಿ ಅಲ್ಲಿನ ಸಿಬ್ಬಂದಿ ಹೀಗೆ ಪ್ರತಿಯೊಬ್ಬರನ್ನೂ ಪರಿಚಯ ಮಾಡಿಕೊಡುತ್ತಿದ್ದರು. ಪಿಸಿಆರ್, ನ್ಯೂಸ್ ಡೆಸ್ಕ್, ಆಂಕರ್ಸ್, ಜಾಹಿರಾತು ವಿಭಾಗ, ಆಡಳಿತ, ಹೆಚ್ಆರ್, ತಂತ್ರಜ್ಞಾನ ವಿಭಾಗದ ಮುಖ್ಯಸ್ಥರು ಹೀಗೆ ಎಲ್ಲರ ಮುಖವನ್ನು ಸಾರ್ವಜನಿಕರಿಗೆ ತೋರಿಸುತ್ತಿದ್ದರು, ಪರಿಚಯಿಸುತ್ತಿದ್ದರು. ಕೆಲವರು ಮಾತನಾಡಲು ತಡಬಡಿಸಿದರು. ಬಹುಷ: ಅವರಲ್ಲಿ ಮೊದಲ ಬಾರಿ ಕ್ಯಾಮರಾ ಎದುರಿಸಿದವರು ಹೆಚ್ಚು ಇದ್ದರು ಆದ್ದರಿಂದ ಹೀಗಾಗಿರಬಹುದು. ಅದೆನೇ ಇರಲಿ ಆದರೆ ಆ ಚಾನೆಲ್ನ ಮುಖ್ಯಸ್ಥರು ಮಾಡುತ್ತಿದ್ದ ಕೆಲಸವನ್ನು ನೋಡಿದ ನಂತರ, ನನ್ನ ನೆನಪು ಸುಮಾರು 12 ವರ್ಷಗಳ ಹಿಂದಕ್ಕೆ ಜಾರಿತು.
ಅದು 2000 ದ ಇಸವಿ ಜೂನ್ ತಿಂಗಳು. ಆಗ ಇದ್ದಿದ್ದು ಒಂದೇ ಚಾನೆಲ್ ಉದಯ. ಸುಪ್ರಭಾತ, ಕಾವೇರಿ ಮುಚ್ಚಿದ್ದವೆಂದು ಕಾಣುತ್ತದೆ. ಅಥವಾ ಕುಂಟುತ್ತಾ, ತೆವಳುತ್ತ ಸಾಗಿದ್ದವು. ಉದಯದಲ್ಲಿ ಬೆಳಿಗ್ಗೆ, ರಾತ್ರಿಗೊಂದು, ಮಧ್ಯಾಹ್ನಕ್ಕೊಂದು ನ್ಯೂಸ್ ಪ್ರಸಾರವಗುತ್ತಿತ್ತು. ಅದರಲ್ಲಿ ಯಾವುದೇ ವೃತಿಪರತೆ ಇರಲಿಲ್ಲ. ಚೆನ್ನೈನಿಂದ ಇರಬೇಕು ಅವರು ನ್ಯೂಸ್ನ್ನು ಪ್ರಸಾರ ಮಾಡುತ್ತಿದ್ದರು. ಅಂಥಹ ಕಾಲದಲ್ಲಿಯೇ ಈಟಿವಿ ಇಲ್ಲಿಗೆ ಕಾಲಿಟ್ಟಿತ್ತು. ಎಲೆಕ್ಟಾನಿಕ್ ಮಾಧ್ಯಮದ ಬಗ್ಗೆ ಅಲ್ಲಿನವರೆಗೆ ನಮ್ಮಲ್ಲಿ ಯಾರಿಗೂ ವೃತ್ತಿಪರ ತರಬೇತಿ ದೊರಕಿರಲಿಲ್ಲ. ಆಗಲೇ ನಾವೆಲ್ಲಾ ಹೈದ್ರಾಬಾದ್ಗೆ ತೆರಳಿದ್ದು. ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿದ್ದ ನಾನು ಸಹ ಇಲ್ಲಿಂದ ರಾಮೋಜಿ ಫಿಲಂ ಸಿಟಿಗೆ ತೆರಳಿದ ಪತ್ರಕರ್ತರ ತಂಡದಲ್ಲಿದ್ದೆ. ಆ ತಂಡದಲ್ಲಿ ಮಾಕರ್ೆಟಿಂಗ್, ಜಾಹಿರಾತು ಕ್ಷೇತ್ರ, ಮೆಡಿಕಲ್ ಪ್ರತಿನಿಧಿಯಾಗಿದ್ದವರು, ಮಾಕರ್ೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದವರಿದ್ದರು. ನಾರಾಯಣಮೂತರ್ಿಯವರು ಈ ರೀತಿಯ, ಬಗೆ ಬಗೆಯ, ಪತ್ರಿಕೋದ್ಯಮಕ್ಕೆ ಸಂಬಂಧಿಸಿಲ್ಲದವರನ್ನೂ ಶಾಟರ್್ ಲಿಸ್ಟ್ ಮಾಡಿದ್ದರು. ರಾಮಾನಿಜಮ್ ಎಲ್ಲರನ್ನೂ ಮುಖಮೋರೆ ನೋಡದೇ ಸೆಲೆಕ್ಟ್ ಮಾಡಿ ಟ್ರೈನಿಂಗ್ ಹೈದ್ರಾಬಾದ್ಗೆ ಕರೆತರಲು ಆದೇಶಿಸಿದ್ದರು. 
ಸುಮಾರು ಒಂದು ತಿಂಗಳು ನಾವುಗಳೆಲ್ಲಾ ರಾಮೋಜಿ ಫಿಲಂ ಸಿಟಿಯಲ್ಲಿ ಇದ್ದೆವು. ಅಲ್ಲಿಯೇ ನಮಗೆ ಪ್ರಥಮ ಬಾರಿಗೆ ಎಲೆಕ್ಟ್ರಾನಿಕ್ ಮಾಧ್ಯಮ ಹೆಚ್ಚು ಪರಿಚಯ ಆಗಿದ್ದು. ದೆಹಲಿ ದೂರದರ್ಶನ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಮೆಹಂದಳೆ (ಪೂರ್ಣ ಹೆಸರು ಮರೆತಿದ್ದೇನೆ) ಎಂಬುವವರು ನಮಗೆ ತರಬೇತಿ ನೀಡಿದರು. ಆಗಲೇ ನಮಗೆ ಬೈಟ್, ಪಿಟುಸಿ, ಆಂಕರ್ ಕಾರ್ಯನಿರ್ವಹಣೆ, ಎಲೆಕ್ಟ್ರಾನಿಕ್ ಮಾಧ್ಯಮದ ಒಳ ಹೊರಗುಗಳ ಪರಿಚಯ ಆಗಿದ್ದು. 2000 ನೇ ಇಸವಿ ಡಿಸೆಂಬರ್ನಲ್ಲಿ ಈಟಿವಿ ಕಾಯರ್ಾರಂಭ (ಸಬ್ಜೆಕ್ಟ್ ಟು ಡೇಟ್ ಕರೆಕ್ಷನ್) ಮಾಡಿದ್ದು. ಈ ಟಿವಿ ಆರಂಭವಾದಾಗ, ಒಂದು ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಅಗ್ರರಾಷ್ಟ್ರೀಯ ವಾತರ್ೆ ಅಷ್ಟೇ ಇತ್ತು. ಪ್ರತಿ ಗಂಟೆಗೊಮ್ಮೆ ಐದು ನಿಮಿಷದ ಬುಲೆಟನ್ ಪ್ರಸಾರವಾಗುತ್ತಿತ್ತು. ಈಗಲೂ ಅದೇ ಮುಂದುವರೆದಿದೆ ಎಂದುಕೊಂಡಿದ್ದೇನೆ. ಈಟಿವಿ ಆರಂಭವಾದಾಗ, ಅದರಲ್ಲಿ ನಮ್ಮದೊಂದು ಬೈಲೈನ್ ಪಡೆಯಲು ತಿಣುಕಾಡಬೇಕಾಗಿತ್ತು. ಯಾವುದೋ ಒಂದು ವಿಶೇಷ ವರದಿಗೆ, ವಾರಕ್ಕೊಂದು, ಹದಿನೈದು ದಿನಕ್ಕೊಂದು ಬೈಲೈನ್ ಸಿಕ್ಕರೆ ದೊಡ್ಡದಿತ್ತು ನಮಗೆ. ಒಂದೇ ದಿನ ಎರಡು ವಿಶೇಷ ವರದಿ ನೀಡಿದರೆ ಒಂದಕ್ಕೆ ಮಾತ್ರ ಬೈಲೈನ್ ಸಿಕ್ಕುತ್ತಿತ್ತು. ಅಂಥಹ ಕಾಲ ಅದು. ಬಹುಷ: ಈಟಿವಿಯಲ್ಲಿ ಪಿಟುಸಿ ನೀಡಿದ ಮೊದಲ ವರದಿಗಾರ ನಾನೇ ಆಗಿದ್ದೆ. ರಾಜ್ಕುಮಾರ್ ಕಿಡ್ನಾಪ್ ಆದಾಗ ಗಾಜನೂರಿನ ಅವರ ಹಳೇ ಮನೆ ಮುಂದೆ ನಿಂತು ಆ ಪಿಟುಸಿ ನೀಡಿದ್ದೆ. ಕ್ಯಾಮರಾಮನ್ ರಾಜೇಶ್ ಅದನ್ನು ಶೂಟ್ ಮಾಡಿದ್ದರು. ಈಟಿವಿ ಕನ್ನಡ ಲಾಂಚ್ ಆಗಿರಲಿಲ್ಲ. ಅದು ಈಟಿವಿ ತೆಲುಗು ಚಾನೆಲ್ನಲ್ಲಿ ಪ್ರಸಾರ ವಾಗಿತ್ತು. ಅದೇ ಕನ್ನಡದ ಪ್ರಥಮ ಅಧಿಕೃತ ವೃತ್ತಿಪರ ಪಿಟುಸಿ ಫಾರ್ ಎ ಡೆವಲಪಿಂಗ್ ಸ್ಟೋರಿ ಎಂದೆನಿಸುತ್ತಿದೆ ನನಗೆ. ರಾಜ್ಕುಮಾರ್ ಕಿಡ್ನಾಪ್ ಆದ ರಾತ್ರಿ, 1 ಗಂಟಗೆ ನಾನು, ಶಾರದಾ  ಹಾಗೂ ಕ್ಯಾಮರಾಮನ್ ರಾಜೇಶ್ ಸತ್ಯಮಂಗಲ ಫಾರೆಸ್ಟ್ಗೆ ಹೋಗಿದ್ದೆವು. ಬೆಂಗಳೂರಿನ ನಮ್ಮ ಸಹೋದ್ಯೋಗಿಗಳಿಗೆ ನಾವು ಕಾಡಿಗೆ ಹೋಗಿದ್ದು ಮರುದಿನ ಗೊತ್ತಾಗಿತ್ತು. ಏಕೆಂದರೆ ಆಗ ಈಟಿವಿ ಕನ್ನಡದಲ್ಲಿ ಡ್ರೈರನ್ ನಡೆಯುತ್ತಿತ್ತು. ಆಗ ಪೋನೋ ಆಗಲಿ, ಓಬಿ ವ್ಯಾನ್ಗಳಾಲಿ, ವರದಿಗಾರರನ್ನ ಕಾಂಟ್ಯಾಕ್ಟ್ ಮಾಡುವ ಸವಲತ್ತು, ಸೌಕರ್ಯವಾಗಲಿ ಹೆಚ್ಚು ಇರಲಿಲ್ಲ….ಹೀಗೆ ಬೆಳವಣಿಗೆ ಆಯಿತು ರಾಜ್ಯದಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮ.
ಆನಂತರ ಈ-ಟಿವಿಯಲ್ಲಿ ಯಾವುದೇ ಕಾರಣಕ್ಕೂ ರಿಪೋಟರ್ಗಳನ್ನು ಶೂಟ್ ಮಾಡದಂತೆ ಕ್ಯಾಮರಾಮನ್ಗಳಿಗೆ ನಿದರ್ೇಶನ ನೀಡಲಾಗಿತ್ತು. ಕೆಲವೊಮ್ಮೆ ವಿಷುಯಲ್ಸ್ನಲ್ಲಿ ರಿಪೋರ್ಟರ್ಗಳು ಕಂಡರೆ ಆ ಪುಟೇಜನ್ನು ಬಳಸಿಕೊಳ್ಳುತ್ತಲೇ ಇರಲಿಲ್ಲ. ಜತೆಗೆ ವರದಿಗಾರರನ್ನು ಶೂಟ್ ಮಾಡಿದರೆ ಕ್ಯಾಮರಾಮನ್ನನ್ನು ಚೀಪ್ ಕ್ಯಾಮರಾಮನ್ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಆದ್ದರಿಂದ ಕ್ಯಾಮರಾಮನ್ಗಳು, ಯಾವುದೇ ಕಾರಣಕ್ಕೂ ಗೆಸ್ಟ್ಗಳ ಜತೆ, ಪ್ಯಾನ್ ಶಾಟ್ಗಳಲ್ಲಿ ಕಾಣಿಸಿಕೊಳ್ಳದಂತೆ ವರದಿಗಾರರಿಗೆ ತಾಕೀತು ಮಾಡುತ್ತಿದ್ದರು.  ಬೆಂಗಳೂರಿಗೆ ಪ್ರಥಮ ಬಾರಿಗೆ ಓಬಿ ವ್ಯಾನ್ ಬಂದಾಗ, ಲೈವ್ ಚಾಟ್ ನೀಡಿದ ಮೊದಲ ವರದಿಗಾರನೂ ನಾನೇ ಆಗಿದ್ದೆ. ವಿಧಾನಸೌಧದ ಮುಂದೆ ನಿಂತು ನಾನು ನಡೆಸಿದ ಮೊದಲ ಚಿಟ್ಚಾಟ್ ಬಹುಷ: ಕನ್ನಡ ಎಲೆಕ್ಟ್ರಾನಿಕ್ ಮಾಧ್ಯಮದ ಮೊದಲ ಚಿಟ್ಚಾಟ್ ಎಂದೇ ಹೇಳಬಹುದು. ಕಲರ್ ಕಾಂಬಿನೇಷನ್ಗಾಗಿ ನಾನು ಹೊಸ ಶಟರ್್ನ್ನು ಖರೀಸುವಂತೆ ನನಗೆ ನಿದರ್ೇಶನ ನೀಡಲಾಗಿತ್ತು. 1400 ರುಪಾಯಿ ಕೊಟ್ಟು ಚಿಟ್ಚಾಟ್ ಮಾಡುವ ಸಲುವಾಗಿ ನಾನು ಗ್ರೀನ್ ಶರ್ಟ ಒಂದನ್ನು ಖರೀದಿಸಿದ್ದೆ. ಸುಮಾರು 20 ನಿಮಿಷ ಬಜೆಟ್ ಕುರಿತಂತೆ ಚಿಟ್ಚಾಟ್ ನೀಡಿದ್ದೆ. ಮೊದಲ ಚಿಟ್ಚಾಟ್ ಬಗ್ಗೆ ಮತ್ತೊಮ್ಮೆ ಬರೆಯುವೆ.
ಕ್ರಮೇಣ ಬೈಲೈನ್ಗಳನ್ನು ನೀಡುವುದು ಕಡ್ಡಾಯವಾಯಿತು. ಆದರೆ ಎಲ್ಲರೂ ವಾಯ್ಸ್ ಓವರ್ ನೀಡುವಂತಿರಲಿಲ್ಲ. ವಾಯ್ಸ್ ಓವರ್ ನೀಡುವ ಪ್ರತ್ಯೇಕ ಆಟರ್ಿಸ್ಟ್ಗಳೇ ಇದ್ದರು. ವರದಿಗಾರರ ಪಿಟುಸಿ ನೀಡುವುದು ಕಡ್ಡಾಯವಾಯಿತು. ಆನಂತರ ಟಿವಿ – 9 ಬಂತು. ಆನಂತರ ಸಾಕಷ್ಟು ಬದಲಾವಣೆಗಳಾದವು. ಎಲೆಕ್ಟ್ರಾನಿಕ್ ಮಾಧ್ಯಮ ಮತ್ತಷ್ಟು ಪ್ರಗತಿ ಯಾಯಿತು. ಸುವಣರ್ಾ ಆರಂಭವಾದಾಗ ಒಂದೇ ಬುಲಿಟನ್ನಲ್ಲಿ ಒಬ್ಬನೇ ವರದಿಗಾರನ ಎರಡು ವರದಿಗಳು ಪ್ರಸಾರ ವಾಗುವಂತಿರಲಿಲ್ಲ. ವರದಿಗಾರರಿಗೆ ಆಂಕರಿಂಗ್ ಮಾಡಲು ಅವಕಾಶ ಇರಲಿಲ್ಲ. ಕ್ರಮೇಣ ಎಲ್ಲವೂ ಬದಲಾದವು. ಹೀಗೆ ಎಲೆಕ್ಟ್ರಾನಿಕ್ ಮಾಧ್ಯಮ ನಡೆದು ಬಂದ ಹಾದಿಯನ್ನು ನೆನೆದಾಗ, ಪಬ್ಲಿಕ್ ಟಿವಿ ಮುಖ್ಯಸ್ಥರು ತಮ್ಮ ತಂಡವನ್ನು ಅದರಲ್ಲೂ ಟೆಕ್ನಿಕಲ್ ಸ್ಟ್ಯಾಪ್ನ್ನು ಜನರ ಮುಂದೆ ಕರೆತಂದು ಪರಿಚಯ ಮಾಡಿಕೊಟ್ಟಾಗ ನನಗೆ ಖುಷಿಯಾಯಿತು. ಕನ್ನಡ ಎಲೆಕ್ಟ್ರಾನಿಕ್ ಮಾಧ್ಯಮ ಕೇವಲ 12 ವರ್ಷದಲ್ಲಿ ಕಣ್ಣ ಮುಂದೆಯೇ ಎಷ್ಟೆಲ್ಲಾ ಬದಲಾಯಿತಲ್ಲ ಎಂದು ಖುಷಿಯಾಯಿತು. ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರ ವಾಯ್ಸ್ಗೆ, ಅವರ ಪ್ರತಿಭೆಗೆ ಸಿಕ್ಕುತ್ತಿರುವ ಅವಕಾಶಗಳನ್ನು ನೋಡಿದಾಗ ಮನಸ್ಸಿಗೆ ಸಂತೋಷವಾಯಿತು. 13 ವರ್ಷದ ಹಿಂದೆ ನ್ಯೂಸ್ ಚಾನೆಲ್ಗಳಿದ್ದು ನಮಗೆ ಇಷ್ಟೊಂದು ಅವಕಾಶ ಸಿಕ್ಕಿದ್ದರೆ, ಉತ್ಸಾಹದ ದಿನಗಳಲ್ಲಿ ನನ್ನ ಸಂಪೂರ್ಣ ಎನಜರ್ಿಯನ್ನು ಆಗಿನ ಚಾನೆಲ್ಗಳ ಮುಖ್ಯಸ್ಥರು ಬಳಸಿಕೊಂಡಿದ್ದರೆ ಅದೆಷ್ಟು ಸಾವಿರ ನ್ಯೂಸ್ಗಳನ್ನು ತಂದುಕೊಡುತ್ತಿದ್ದೆನೋ ಎಂದೆನಿಸಿತು. ಅದೇನೇ ಇರಲಿ, ಕೇವಲ 13 ವರ್ಷದ ಅವಧಿಯಲ್ಲಿ ಪತ್ರಕರ್ತರೊಬ್ಬರು ನ್ಯೂಸ್ ಛಾನೆಲ್ ಒಂದರ ಮಾಡಲೀಕರಾದ ಒಂದು ದೊಡ್ಡ ಪರಂಪರೆ, ಇತಿಹಾಸ ಸೃಷ್ಟಿಯಾಯಿತೆಲ್ಲಾ ಎಂದು ಖಷಿಯಾಯಿತು. ಹೊಸ ಟಿವಿ ಚಾನೆಲ್ಗೆ ಆಲ್ ದಿ ಬೆಸ್ಟ್……
—ಎಂ ಎನ್ ಸಿ

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 • ಪುಟಗಳು

 • Flickr Photos

 • ಫೆಬ್ರವರಿ 2012
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಜನ   ಮಾರ್ಚ್ »
   1234
  567891011
  12131415161718
  19202122232425
  26272829  
 • ವಿಭಾಗಗಳು