ಬೋಳಿ ಮಗನೇ ಎಂದವರೆ ಮಗನ ಕೆನ್ನೆಗೆ ಬಾರಿಸಿ ನಡು ರಾತ್ರಿಯಲ್ಲೇ ಅವನ ಸೂಟ್ಕೇಸನ್ನು ಮನೆಯಿಂದ ಹೊರಗೆಸೆದು ಗೆಟ್ಔಟ್ ಎಂದು ಬಾಗಿಲು ಮುಚ್ಚಿಕೊಂಡರು

 

ರಕ್ಷಣಾ ಇಲಾಖೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆಯನ್ನು ಅವರ ತಂದೆ ಮಾಜಿ ಪ್ರಧಾನಿ ದೇವೇಗೌಡರು ಖಡಾತುಂಡವಾಗಿ ನಿರಾಕರಿಸಿದ್ದಾರೆ. ಆದರೆ ಎಚ್.ಡಿ. ಕುಮಾರಸ್ವಾಮಿ ನೀಡಿದ ಹೇಳಿಕೆ ಅಕ್ಷರ ಸಹ ಸರಿಯಾಗಿಯೇ ಇದೆ. ಜತೆಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ನೀಡಿದ ಹೇಳಿಕೆಯೂ ಇನ್ನೂ ನಿದರ್ಿಷ್ಟ, ಸ್ಪಷ್ಟ ಜತೆಗೆ ನಿಖರವಾಗಿಯೂ ಇದೆ. 1996 ರಲ್ಲಿ ದೇವೇಗೌಡರು ಅಚಾನಕ್ ಆಗಿ ಪ್ರಧಾನಿಯಾದಾಗ ಅವರಿಗಿದ್ದ ಇಚ್ಛಾಶಕ್ತಿ, ಬದ್ಧತೆ, ಪ್ರಾಮಾಣಿಕತೆ, ಆದರ್ಶ ಯಾವುದೇ ಮತ್ತೊಬ್ಬ ಪ್ರಧಾನಿಗೆ ಇರಲಿಲ್ಲ. ಅಂಥಹ ಅದ್ಭುತ ಗುಣಗಳು ದೇವೇಗೌಡರಲ್ಲಿ ಮನೆಮಾಡಿದ್ದವು. ಅಚಾನಕ್ ಆಗಿ ಸಿಕ್ಕ ಅವಕಾಶವನ್ನು ತುಂಬಾ ಜವಾಬ್ದಾರಿಯುವಾಗಿ ನಿಭಾಯಿಸಿ, ಪ್ರಧಾನಿ ಹುದ್ದೆಯನ್ನು ಭದ್ರಪಡಿಸಿಕೊಳ್ಳುವ, ರಾಷ್ಟ್ರ ಮಟ್ಟದಲ್ಲಿ ಶಾಶ್ವತವಾಗಿ ರಾಜಕೀಯ ನೆಲೆಕೊಂಡುಕೊಳ್ಳುವ ಉಮ್ಮೇದಿ, ಆಲೋಚನೆ ದೇವೇಗೌಡರಿಗಿತ್ತು. ಅಂಥಹ ಸಂದರ್ಭದಲ್ಲೇ ರಕ್ಷಣಾ ಇಲಾಖೆಗೆ ಸಂಬಂಧಿಸಿದಂತೆ ದೇವೇಗೌಡರ ಬಳಿ ಪ್ರಸ್ತಾವನೆಯೊಂದು ಬಂದಿತ್ತು. ಅದು ಬರೋಬರಿ ಅಂದಾಜು ಸುಮಾರು 21 ಸಾವಿರ ಕೋಟಿ ರುಪಾಯಿ ಮೊತ್ತದ ವ್ಯವಹಾರ ಅದು ಎಂದು ಹೇಳಬಹುದು. ಆ ವ್ಯವಹಾರವೇನು? ಅದು ಯುದ್ಧ ಸಾಮಗ್ರಿಗಳ ಖರೀದಿಯೋ, ಕ್ಷಿಪಣಿ ಉಡಾವಣೆ ವಾಹನಗಳು, ಯುದ್ಧ ವಿಮಾನಗಳ ಖರೀದಿಯೋ ಅಥವಾ ಭೂಸೇನೆಗೆ ಯುದ್ಧ ಟ್ಯಾಂಕರ್ಗಳ ಸರಬರಾಜೋ, ಖರೀದಿಯೋ ಅದಾಗಿತ್ತು. ಈ ಡೀಲ್ಗೆ ಪ್ರಧಾನಿ ದೇವೆಗೌಡರು ಅಂಕಿತ ಹಾಕಿದರೆ ಬರೋಬರಿ 100 ಕೋಟಿಗಳ ಕಮೀಷನ್ ನೀಡುವ ಪ್ರಸ್ತಾವನೆ ಅದಾಗಿತ್ತು. ಆ ಪ್ರಸ್ತಾವನೆ ರಕ್ಷಣಾ ಇಲಾಖೆಯ ಎಲ್ಲಾ ಪರೀಕ್ಷೆಗಳು, ಮೌಲ್ಯಮಾಪನ ಮಾನದಂಡವನ್ನು ದಾಟಿ ಬರಬೇಕಾಗಿತ್ತು. ಈ ಪ್ರಸ್ತಾವನೆಯನ್ನು ರಕ್ಷಣಾ ಇಲಾಖೆ ಮಂದಿಡುವ ಮುನ್ನವೇ ಈ ವ್ಯವಹಾರ ಕುದುರಿಸಲು ಮುಂದಾಗಿದ್ದ ವಿದೇಶಿ ಕಂಪನಿ ಕಡೆಯವರು ಪ್ರಧಾನಿಯನ್ನು ಬುಕ್ ಮಾಡಿಕೊಳ್ಳಲು ಮುಂದಾಗಿದ್ದರು. ಆಗ ಅತ್ಯಂತ ಪಾರದರ್ಶಕವಾಗಿ, ಪ್ರ್ರಾಮಾಣಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ದೇವೇಗೌಡರನ್ನು ನೇರವಾಗಿ ಸಂಪಕರ್ಿಸಿ ಪ್ರಸ್ತಾವನೆ ಮಂದಿಡಲು ಆ ಕಂಪನಿಯವರಿಗೆ ಧೈರ್ಯವಿರಲಿಲ್ಲ. ಜತೆಗೆ ವೈಯಕ್ತಿಕವಾಗಿ ಭ್ರಷ್ಟರಲ್ಲದ ದೇವೇಗೌಡರನ್ನು ಈ ವಿಷಯವಾಗಿ ಸಂಪಕರ್ಿಸುವುದು ಸಾಧ್ಯವೇ ಇರದ ಮಾತಾಗಿತ್ತು. ದೇವೇಗೌಡರು ಅಮರ್ಸಿಂಗ್ರಂಥಹ ಯಾವುದೇ ಮಧ್ಯವತರ್ಿಗಳನ್ನು ಅವರ ಹಿಂದೆಮುಂದೆ ಇಟ್ಟುಕೊಂಡಿರಲಿಲ್ಲ. ಅಂಥಹ ಸಂದರ್ಭದಲ್ಲಿ ಡೀಲ್ ಕಂಪನಿ ಪ್ರತಿನಿಧಿಗಳು, ದೇವೇಗೌಡರ ಕುಟುಂಬ ವರ್ಗವನ್ನು ಸಂಪಕರ್ಿಸಿದ್ದರು. ಆಗಿನ್ನೂ ಮುಖ್ಯಮಂತ್ರಿಯಾಗಿ ಕೇವಲ ಒಂದುವರೆ ವರ್ಷ ಅಧಿಕಾರ ಅನುಭವಿಸಿದ್ದ ದೇವೇಗೌಡರ ಕುಟುಂಬ ಅಂಥಹ ದೊಡ್ಡ ಮೊತ್ತದ ಹಣದ ಬಗ್ಗೆ ಕಲ್ಪಿಸಿಕೊಂಡಿರಲಿಲ್ಲ. ಯಾವಾಗ ಇಂಥಹ ಪ್ರಸ್ತಾವನೆ ಬಂತೋ, ದೇವೇಗೌಡರ ಕುಟುಂಬದ ಸದಸ್ಯರು ಹೇಗಾದರೂ ಮಾಡಿ ಈ ಡೀಲ್ ಕುದುರಿಸಿ ಹಣ ಪಡೆಯುವ ಧಾವಂತದಲ್ಲಿದ್ದರು. ಆದರೆ ಈ ಹಣ ಪಡೆಯುವುದು ಹೇಗೆ? ಯಾವುದೇ ಕಾರಣಕ್ಕೂ ಸ್ವಜನ ಪಕ್ಷಪಾತಕ್ಕೆ ಕೈಹಾಕದ, ಲಂಚಕ್ಕೆ ಆಸೆ ಬೀಳದ, ಕುಟುಂಬ ಸದಸ್ಯರು ಆಡಳಿತದಲ್ಲಿ ಮೂಗುತೂರಿಸುವುದನ್ನು ಸಹಿಸದ ದೇವೇಗೌಡರನ್ನು ಈ ವಿಷಯದಲ್ಲಿ ಸಂಪಕರ್ಿಸುವುದಾದರೂ ಹೇಗೆ ಎಂಬ ಬಗ್ಗೆ ದೇವೇಗೌಡರ ಕುಟುಂಬ ಸದಸ್ಯರಲ್ಲಿ ಚರ್ೆ ನಡೆದಿತ್ತು. ಈ ಬಗ್ಗೆ ಕುಟುಂಬದ ಹಿರಿಯ ಸದಸ್ಯರು ತಲೆಕಡೆಸಿಕೊಂಡಿದ್ದರು. ತಿಂಗಳುಗಟ್ಟಲೆ ಅಳೆದೂ ತೂಗಿ, ಸಮಾಲೋಚಿಸಿ ದೇವೇಗೌಡರ ಮುಂದೆ ಈ ಪ್ರಸ್ತಾವ ಇಡುವುದು ಹೇಗೆ, ಅವರನ್ನು ಒಪ್ಪಿಸುವುದು ಹೇಗೆ ಎಂದು ಜಿಜ್ಞಾಸೆಗೆ ಬಿದ್ದ ಕುಟುಂಬ ಕಡೆಗೆ ದೇವೇಗೌಡರ ಪುತ್ರರೊಬ್ಬರನ್ನು (ಎಚ್.ಡಿ. ಕುಮಾರಸ್ವಾಮಿ ಹೊರತುಪಡಿಸಿ) ಈ ವಿಷಯದಲ್ಲಿ ಹುರುದುಂಬಿಸಿ ಈ ಡೀಲ್ನ ಬಗ್ಗೆ ದೇವೇಗೌಡರಿಂದ ಹೂ ಎನ್ನಿಸಿಕೊಳ್ಳಲು ದೆಹಲಿಗೆ ಕಳುಹಿಸಿಕೊಟ್ಟರು. ಅಂಜುತ್ತಾ ಅಳುಕುತ್ತಾ ದೆಹಲಿಗೆ ಬಂದ ದೇವೇಗೌಡರ ಪುತ್ರರೊಬ್ಬರು ಅಂದು ರಾತ್ರಿ ತಂದೆಯ ನಿವಾಸದಲ್ಲಿ ತಂಗಿದ್ದು ಈ ಬಗ್ಗೆ ಗೌಡರ ಒಪ್ಪಿಗೆ ಪಡೆಯಲು ನಿರ್ಧರಿಸಿದ್ದರು. ಮುರ್ನಾಲ್ಕು ದಿನ ಕಳೆದರೂ ಅವರಿಗೆ ಈ ಸಂಬಂಧ ಗೌಡರೊಂದಿಗೆ ಪ್ರಸ್ತಾಪಿಸಲು ಸಾಧ್ಯವೇ ಆಗಲಿಲ್ಲ. ಕಡೆಗೆ ಬೆಂಗಳೂರಿನಿಂದ ಕುಟುಂಬ ಸದಸ್ಯರ ಒತ್ತಡ ಹೆಚ್ಚಾದ ನಂತರ ಒಂದು ರಾತ್ರಿ ಗೌಡರು ಮಲಗಿದ್ದ ಕೋಣೆ ಪ್ರವೇಶಿದ ಅವರ ಪುತ್ರ, ಸರಿಹೊತ್ತಿನಲ್ಲಿ ಗೌಡರನ್ನು ಎಬ್ಬಿಸಿ ನಿಮ್ಮ ಜತೆ ಒಂದು ರಹಸ್ಯ ವಿಷಯ ಪ್ರಸ್ತಾಪಿಸುವುದಿದೆ ಎಂದರು. ಸ್ವಲ್ಪ ವಿಚಲಿತರಾದ ಗೌಡರು, ಸಾವರಿಸಿಕೊಂಡು ಬೆಂಗಳೂರಿನಿಂದ ಬಂದಿದ್ದ ಮಗನು ಯಾವ ರಹಸ್ಯ ಹೊತ್ತು ತಂದಿದ್ದಾನೆಂದು ಗಾಬರಿಗೊಂಡು, ಎಲ್ಲರೂ ಮಲಗಿರುವುದನ್ನು ಖಚಿತಪಡಿಸಿಕೊಂಡ ನಂತರ, ಮಗನನ್ನು ಮತ್ತೊಂದು ಒಳಕೋಣೆಗೆ ಕರೆದೊಯ್ದು ಯಾವ ವಿಷಯ ಎಂದು ವಿಚಾರಿಸಿದರು. ಸ್ವಲ್ಪ ಧೈರ್ಯ ತೆಗೆದುಕೊಂಡ ಮಗ, ರಕ್ಷಣಾ ಇಲಾಖೆಯ ಡೀಲ್ ಬಗ್ಗೆ ಪ್ರಸ್ತಾಪಿಸಿದರು. ಆಗಲಿ ಅಂಥಹ ವಿಷಯ ಇದ್ದರೆ ಸರಿಯಾದ ಮಾರ್ಗದಲ್ಲಿ ಬರಲಿ, ಯುದ್ಧ ಸಾಮಗ್ರಿಗಳನ್ನು ಖರೀಸುವ ಪಸ್ತಾಪ ಸದ್ಯಕ್ಕೆ ಸಕರ್ಾರದ ಮುಂದಿಲ್ಲ ಎಂದರು. ಈ ಹಿನ್ನಲೆಯಲ್ಲಿಯೇ ಈ ಕಂಪನಿಯವರು ಬಂದಿದ್ದಾರೆ, ನಮ್ಮನ್ನು ಸಂಪಕರ್ಿಸಿ ಪ್ರಸ್ತಾವನೆ ಸಿದ್ಧವಾಗುವಂತೆ ಮಾಡಿ ಎಂದು ಮನವಿ ಮಾಡಿದ್ದಾರೆ. ತಾವು ಹೊಸದಾಗಿ ಪ್ರಸ್ತಾವ ಹೊರಡಿಸಬೇಕು. ಜತೆಗೆ ಡೀಲ್ ಇವರಿಗೆ ಸಿಗುವಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಈ ಕಂಪನಿಯವರು ಬರೋಬ್ಬರಿ ಇಷ್ಟು ಮೊತ್ತವನ್ನು ನಮಗೆ ನೀಡಲು ತಯಾರಾಗಿದ್ದಾರೆ ಎಂದು ತಿಳಿಸಿದರು. ಏನು ರುಷುವತ್ತಾ? ಒಂದು ಕ್ಷಣ ಅಚ್ಟು ದೊಡ್ಡ ಮೊತ್ತದ ಹಣದ ವ್ಯವಹಾರ ಕೇಳಿ ಅಚಕ್ಕಾದ ಗೌಡರು, ಏಕೆ, ನಿನಗೆ ಈ ಬಗ್ಗೆ ತಲೆಕಡಿಸಿದವರ್ಯಾರು ಎಂದು ಮಗನ ವಿರುದ್ಧ ಧುಮುಗುಟ್ಟಿದರು. ಬೋಳಿ ಮಗನೇ ಎಂದವರೆ ಮಗನ ಕೆನ್ನೆಗೆ ಬಾರಿಸಿ ನಡು ರಾತ್ರಿಯಲ್ಲೇ ಅವನ ಸೂಟ್ಕೇಸನ್ನು ಮನೆಯಿಂದ ಹೊರಗೆಸೆದು ಗೆಟ್ಔಟ್ ಎಂದು ಬಾಗಿಲು ಮುಚ್ಚಿಕೊಂಡರು. ನಡುರಾತ್ರಿಯಲ್ಲಿ ಕಾರೊಂದನ್ನು ಹಿಡಿದು ಅವರ ಸಹೋದರನ ಮನೆ ಸೇರಿದ ದೇವೇಗೌಡರ ಪುತ್ರ, ಬೆಳಿಗ್ಗೆ ನಡೆದಿದ್ದೆಲ್ಲವನ್ನು ಬೆಂಗಳೂರಿನ ಕುಟುಂಬ ಸದಸ್ಯರಿಗೆ ತಿಳಿಸಿ ವಾಪಸ್ಸಾದರು. ಅಲ್ಲಿಗೆ ಡಿಫೆನ್ಸ್ ಡೀಲ್, ಕಮೀಷನ್ ಎಲ್ಲಾ ಬಿದ್ದು ಹೋಗಿ ಸತ್ತು ಹೋದವು. ಆನಂತರವೇ ದೇವೇಗೌಡರು, ಕುಟುಂಬ ಸದಸ್ಯರನ್ನು ಪ್ರಧಾನಿ ಸಚಿವಾಲಯದ ವ್ಯವಹಾರದ ಬಳಿ ಕೂಡಿಸದಂತೆ ತಮ್ಮ ಕಚೇರಿ ಸಿಬ್ಬಂದಿಗೆ ತಾಕೀತು ಮಾಡಿದ್ದು. ಆಗಿನ ಅವರ ಪ್ರಧಾನ ಕಾರ್ಯದಶರ್ಿಯಾಗಿದ್ದ ಸತೀಶ್ ಚಂದ್ರನ್ ಹಾಗೂ ಅವರ ಸಂಪುಟ ಕಾರ್ಯದಶರ್ಿ ಟಿಎಸ್ಆರ್ ಸುಬ್ರಮಣ್ಯನ್ ಅವರಿಗೆ ನನ್ನ ಪುತ್ರರು ಹಾಗೂ ಕುಟುಂಬ ಸದಸ್ಯರು ಪ್ರಧಾನಿ ಕಾಯರ್ಾಲಯವನ್ನು ದುರುಪಯೋಗ ಪಡಿಸಿಕೊಳ್ಳಲು ಬಯಸುತ್ತಿದ್ದಾರೆ. ಆದ್ದರಿಂದ ನಿಮ್ಮ ಮೇಲೆ ನನ್ನ ಮಕ್ಕಳು ಎಂಬ ಕಾರಣಕ್ಕೆ ಅವರುಗಳು ಪ್ರಭಾವ ಬೀರಲು ಯತ್ನಿಸಿದರೆ ನೀವು ಮಣಿಯ ಕೂಡದೆಂದು ತಾಕೀತು ಮಾಡಿದ್ದು. ನೀವು ನನ್ನ ಎಲ್ಲಾ ವ್ಯವಹಾರಗಳಲ್ಲಿ ಪಾರದಶರ್ಿಕತೆ, ನಿಯಮ ಪಾಲನೆ ಹಾಗೂ ಪಕ್ಷಪಾತವಿಲ್ಲದಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದ್ದರು. ಅದನ್ನೇ ಸಯಬ್ರಮಣ್ಯಂ ತಮ್ಮ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ. ಈ ವಿಷಯವನ್ನೇ ನಿನ್ನೆ ದೇವೆಗೌಡರು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದಾರೆ. ಈ ವಿಷಯವನ್ನು ಕೇಳಿ ಬಹಳ ದಿನಗಳೇ ಆದರು ಈಗ ರಕ್ಷಣಾ ಸಚಿವಾಲಯದ ಕಮೀಷನ್ ಡೀಲ್ ಬಗ್ಗೆ ಕುಮಾರಸ್ವಾಮಿ ವಿಷಯ ಪ್ರಸ್ತಾಪಿಸಿದ್ದರಿಂದ ಇದನ್ನು ಇಲ್ಲಿ ಹೇಳುತ್ತಿದ್ದೇನೆ. ದೇವೇಗೌಡರ ಇಂಥಹ ಪಾರದರ್ಶಕ ಆಡಳಿತದಿಂದಲೇ ಅವರ ಅಧಿಕಾರವಧಿಯಲ್ಲಿ ಯಾವುದೇ ಹಗರಣಗಳು ನಡೆಯಲಿಲ್ಲ. ದೇವೇಗಡರನ್ನು ವಿಚಾರಣೆಗೆ ಗುರಿಪಡಿಸಬೇಕೆಂದು ಯಾರೊಬ್ಬರೂ ಆಗ್ರಹಿಸಲಿಲ್ಲ. ದೇವೇಗೌಡರು ಮನೆಗೆ ಬಂದ ಬಹುದೊಡ್ಡ ಮೊತ್ತವೊಂದನ್ನು ಎಡಗಾಲಿನಿಂದ ಒದ್ದು ಬಾಗಿಲು ಮುಚ್ಚಿಕೊಂಡಿದ್ದನ್ನು ಕೇಳಿ ನಾನು ನಿನಕ್ಕೂ ಅವರನ್ನು ಮನಸ್ಸಿನಲ್ಲೇ ಅಭಿನಂದಿಸಿದ್ದೆ. ಇದೇ ಯಡಿಯೂರಪ್ಪ ಇಂಥದೊಂದು ಕೆಲಸವನ್ನು ಮಾಡಿದ್ದರೆ ಇವತ್ತು ಕೋಟರ್್ಗೆ ಅಲೆಯಬೇಕಾಗಿರಲಿಲ್ಲ. ವೈಯಕ್ತಿಕವಾಗಿ ಲಾಭ ಮಾಡಿಕೊಳ್ಳದಿದ್ದರೂ ಕಂಬಿ ಏಣಿಸಬೇಕಾಗಿರಲಿಲ್ಲ. ಅಧಿಕಾರ ಕಳೆದುಕೊಳ್ಳಬೇಕಾಗಿರಲಿಲ್ಲ. ಪುತ್ರ ವ್ಯಾಮೋಹವನ್ನು ತ್ಯಜಿಸಿದ್ದರೆ ಇಂದು ತಮ್ಮ ರಾಜಕೀಯ ಬದುಕನ್ನು ಮೊಟುಕುಗೊಳಿಸಿಕೊಳ್ಳುವಂತ ಪರಿಸ್ಥಿತಿ ಎದುರಿಸಬೇಕಾಗಿರಲಿಲ್ಲ. ಎಚ್.ಡಿ. ಕುಮಾರಸ್ವಾಮಿ ಅಧಿಕಾರಕ್ಕೆ ಬಂದ ನಂತರ ಗೌಡರ ಕುಟುಂಬ ಬದಲಾಗಿದ್ದು ಬೇರೆ ವಿಷಯ. ಬೋಫೋಸರ್್ ಹಗರಣ, ಕ್ಷಿಪಣಿ ಉಡಾವಣೆ ವಾಹನಗಳ ಖರೀದಿ ಹಗರಣ ಹೀಗೆ ಹತ್ತಾರು ಹಗರಣಗಳಲ್ಲಿ ಸಿಕ್ಕಿ ಬಿದ್ದು ಬೆತ್ತಲಾಗಿರುವ ರಕ್ಷಣಾ ಇಲಾಖೆ, ಜತೆಗೆ ಪದಕಗಳ ಆಸೆಗಾಗಿ ನಕಲಿ ಎನ್ಕೌಂಟರ್ಗಳನ್ನು ಸೃಷ್ಟಿ ಮಾಡುವಂಥ ಜನ ಸೇನೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ರಕ್ಷಣಾ ಇಲಾಖೆಯಲ್ಲಿ ಈ ಕಮೀಷನ್ ವ್ಯವಹಾರ ಬಹಳ ದಿನಗಳಿಂದಲೇ ಇದೇ ಎಂಬುದು ನನ್ನ ನಂಬಿಕೆ. ಕಮೀಷನ್ ಕೊಡದಿದ್ದರೆ ರಕ್ಷಣಾ ಇಲಾಖೆಯಲ್ಲಿ ಯಾವುದೇ ವ್ಯವಹಾರ ನಡೆಯುವುದಿಲ್ಲ ಎಂಬುದು ನನ್ನ ವೈಯಕ್ತಿಕ ಅನಿಸಿಕೆ. ರಕ್ಷಣಾ ಖರೀದಿ ಒಪ್ಪಂದಗಳು ಹೆಚ್ಚಾಗುವಂತೆ ಮಾಡುವ ಸಲುವಾಗಿಯೇ ಸೇನಾ ಅಧಿಕಾರಿಗಳು, ದೇಶದ ರಕ್ಷಣೆಯ ಭೀತಿ ಸೃಷ್ಟಿಸುತ್ತಾರೋ ಎಂಬ ಅನುಮಾನ. —ಎಂ. ಎನ್, ಚಂದ್ರೇಗೌಡ ರಾತ್ರಿಯಲ್ಲೇ ಅವನ ಸೂಟ್ಕೇಸನ್ನು ಮನೆಯಿಂದ ಹೊರಗೆಸೆದು ಗೆಟ್ಔಟ್ ಎಂದು ಬಾಗಿಲು ಮುಚ್ಚಿಕೊಂಡರು

Advertisements

ನಿಮ್ಮ ಟಿಪ್ಪಣಿ ಬರೆಯಿರಿ

No comments yet.

Comments RSS TrackBack Identifier URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 • ಪುಟಗಳು

 • Flickr Photos

  Follow your dreams

  Acqua Alta 7

  Exterior of New York City's Oculus

  Shirahige II

  More Photos
 • ಮಾರ್ಚ್ 2012
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಫೆಬ್ರ   ಏಪ್ರಿಲ್ »
   123
  45678910
  11121314151617
  18192021222324
  25262728293031
 • ವಿಭಾಗಗಳು