MNC with Prof. B.A. Vivek Rai, ಪ್ರೊಫೆಸರ್ ಬಿ.ಎ. ವಿವೇಕ್ ರೈ: Be a Vivek Rai

NPS_0063

NPS_0072

ಪ್ರೊಫೆಸರ್ ಬಿ.ಎ. ವಿವೇಕ್ ರೈ: Be a Vivek Rai
ಬೀ ಎ, ವಿವೇಕ್ ರೈ.  ಹಂಪನಾ ಅವರು ಈ ಮಾತುಗಳನ್ನು ಹೇಳಿ ಕುಳಿತಾಗ, ವೀ ಶುಡ್ ಲೀವ್ ಲೈಕ್ ಎ ವಿವೇಕ್ ರೈ ಅನ್ನಿಸಿತು ನನಗೆ. ಅಂಥಹ ಸರಳ, ನೇರ, ನಡೆ ನುಡಿಯ ವ್ಯಕ್ತಿ ವಿವೇಕ್ ರೈ. ನಾನು ವಿವೇಕ್ ರೈ ಅವರನ್ನು ಭೇಟಿಯಾಗಿದ್ದು ಜಿ.ಎನ್. ಮೋಹನ್ ಆಯೋಜಿಸಿದ್ದ ಯಾವುದೋ ಒಂದು ಪಾರ್ಟಿರ್ಯಲ್ಲಿ ಹಲವಾರು ವರ್ಷಗಳ ಹಿಂದೆ. ಅಲ್ಲಿಂದ ಇಲ್ಲಿಯವರೆ ನಾನು ಭೇಟಿಯಾದದ್ದೇ ಇಲ್ಲಾ. ನಿನ್ನೆ ಅಭಿಮಾನಿ ವಸತಿಯಲ್ಲಿ ನಡೆದ ಮತ್ತೊಂದು ಪಾರ್ಟಿಯಲ್ಲಿ ರೈ ಅವರನ್ನು ಭೇಟಿಯಾದೆ. ಯಾವುದೋ ಹಳೆಯ ಚಡ್ಡಿ ದೋಸ್ತನ್ನು ಕಂಡರೆ ಹೇಗೆ ಎದುರುಗೊಳ್ಳುತ್ತಾರೊ ಹಾಗೆ ನನ್ನನ್ನು ಗುರುತಿಸಿ ಮಾತನಾಡಿಸಿದರು. ವಿವೇಕ್ ರೈ ಸನ್ಮಾನಿಸಿದ ಕಾರ್ಯಕ್ರಮದ ನಂತರ ಬರುವಾಗ ಶಾರದಾ ನಾಯಕ್ ಹೇಳಿದಳು, ಇರುಳ ಕಣ್ಣು ಪುಸ್ತಕದ ಮುನ್ನುಡಿಯಲ್ಲಿ ನಿಮ್ಮ ಹೆಸರನ್ನು ರೈ ಬರೆದಿದ್ದಾರೆ ಎಂದಳು. ನನಗೆ ಆಶ್ಚರ್ಯ ಆಯಿತು ಒಂದು ಕ್ಷಣ. ಹೌದಾ ಎಂದು ಕಣ್ಣಾಡಿಸಿದರೆ ನನ್ನ ಹೆಸರಿತ್ತು. ಇದಕ್ಕೂ ಮುನ್ನ ನಯನ ಸಭಾಂಗಣದಲ್ಲಿ ಮಾತನಾಡುವಾಗ ನಿಮಗಾದ ಸ್ಲಿಪ್ ಡಿಸ್ಕ್ ಬಗ್ಗೆ, ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ಶಾರದಾ ಬಳಿ ವಿಚಾರಿಸುತ್ತಿದ್ದೆ ಎಂದರು. ಅದು ಮತ್ತಷ್ಟು ಅಚ್ಚರಿ ಮೂಡಿಸಿತ್ತು ನನಗೆ. ಅವರ ಯಾವ ಬರವಣಿಗೆ, ಸಾಹಿತ್ಯ, ಅಂಕಣ ಓದದ ಅಥವಾ ಅವರ ಯಾವುದೇ ಚಟುವಟಿಕೆಗಳ ಭಾಗವಾಗಿರದಿದ್ದ ನನಗೆ ಇಷ್ಟೊಂದು ಪ್ರೀತಿ ಅಭಿಮಾನ ತೋರಿಸಿದ ರೈ ವ್ಯಕ್ತಿತ್ವ ಆ ಕ್ಷಣದಿಂದ ಕಾಡಹತ್ತಿತು ನನಗೆ.
ರಾತ್ರಿ ಮನೆಗೆ ಬಂದವನೇ ಅವರ ಇರುಳ ಕಣ್ಣು, ಹಿಂದಣ ಹೆಜ್ಜೆ, ರಂಗದೊಳಗಣ ಬಹಿರಂಗ ಮೂರು ಪುಸ್ತಕಗಳನ್ನು ಓದಿ ಮುಗಿಸಿದೆ. ಸಾಲದೆಂಬಂತೆ ಅವರೊಂದಿಗೆ ಒಂದು ವಾಕ್ ದ ಟಾಕ್ ಪ್ರೋಗ್ರಾಂನ್ನೂ ಫಿಕ್ಸ್ ಮಾಡಿದೆ. ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಕೇವಲ ಅರ್ಧ ಗಂಟೆಯಲ್ಲಿ ಮಾಡಿ ಮುಗಿಸಿದೆ. ಗಾಲ್ಫ್ ಕ್ಲಬ್ನ ಕ್ಯಾಪ್ಟನ್, ಕಾರ್ಯದಶರ್ಿ, ಕಾಮತ್, ಕ್ಯಾಮರಾಮನ್, ಲೈಟ್ ಬಾಯ್ಸ್, ಫಿಕ್ ಅಪ್, ಡ್ರಾಪ್ ಹೀಗೆ ಎಲ್ಲವನ್ನೂ ಸಿದ್ಧಪಡಿಸಿದೆ. ರಾತ್ರಿ ಹತ್ತೂವರೆಗೆ ಪೋನಾಯಿಸಿ ರೈ ಅವರಿಗೂ ಲೊಕೆಷನ್ ಹಾಗೂ ಟೈಮನ್ನು ಫಿಕ್ಸ್ ಮಾಡಿದೆ. ಜಿ,ಎನ್. ಮೋಹನ್ಗೂ ಪೋನಾಯಿಸಿ ವಿಷಯವನ್ನು ತಿಳಿಸಿದೆ. ಇಷ್ಟೇ ಅಲ್ಲದೆ ವಿವೇಕ್ ರೈ ಅವರಿಗೆ ಅಭಿಮಾನಿ ವಸತಿ ಹೊಟೇಲ್ನಲ್ಲಿ ಒಂದು ಸನ್ಮಾನ ಕಾರ್ಯಕ್ರಮವನ್ನೂ ಫಿಕ್ಸ್ ಮಾಡಿದೆ.
ಇಷ್ಟೆಲ್ಲಾ ಮಾಡಿದ ಮೇಲೆ ಅರೆ ರೈ ನನಗೆ ಯಾರು? ಯಾಕಿಷ್ಟು ಪ್ರೀತಿ, ಗೌರವ ಅವರ ಮೇಲೆ ನನಗೆ ಎಂದು ಕಾಡತೊಡಗಿತು ಮನಸ್ಸಿನಲ್ಲಿ. ವಿವೇಕ್ ರೈ ಹೇಗೆ ಕನ್ನಡದ ವಿವೇಕವನ್ನು ತಿದ್ದುವ ಕೆಲಸವನ್ನು ಮಾಡಿ ವಿವೇಕ ಬಳಗ ಸೃಷ್ಟಿ ಮಾಡಿಕೊಂಡರೋ ಹಾಗೆ ನನಗೆ ಅರಿವಾಗದೇ ನಾನು ಅವರ ಬಳಗದ ಭಾಗವಾಗಿ ಹೋಗಿದ್ದೇನೆ. ಇಂಥಹ ಖುಷಿ ನಿವೃತ್ತ ಐಎಎಸ್ ಅಧಿಕಾರಿ ತಿಮ್ಮೇಗೌಡರನ್ನು ಭೇಟಿಯಾದಾಗ ಆಗಿತ್ತು ನನಗೆ. ಇದು ನನ್ನಲ್ಲಾಗಿರುವ ದೊಡ್ಡ ಬದಲಾವಣೆ ಎಂದು ಅರಿವಾಗತೊಡಗಿತು ನನಗೆ. ನಾನು ನನಗರಿವಿಲ್ಲದೇ ಮತ್ತೊಬ್ಬರನ್ನು ಪ್ರೀತಿಸತೊಡಗಿದ್ದೇನೆ ಎಂದೆನಿಸಿತು ಒಂದು ಕ್ಷಣ.
ನಾವು ಯಾವುದೇ ಸಾಹಿತಿ, ಬರಹಗಾರನನ್ನು ಎದುರುಗೊಂಡಾಗ, ಆತನ ಬಳಿ ಸ್ವೇಹಕ್ಕಾಗಿ ಕೈ ಚಾಚಿದಾಗ ಆತ ಅನುಮಾನದಿಂದ ನೋಡುತ್ತಾನೆ. ಈತನಿಗೆ ನನ್ನ ಸಾಹಿತ್ಯದ ಬಗ್ಗೆ ಅರಿವಿದೆಯಾ, ಈತನ ಸ್ವಾರ್ಥ ಏನಿರಬಹುದು ಹೀಗೆ ಪ್ರತಿ ಸಾಹಿತಿ ಬರಹಗಾರ ಯೋಚಿಸುತ್ತಿರುತ್ತಾನೆ. ಆದರೆ ರೈ ಅವರಲ್ಲಿ ಅಂಥಹ ಯಾವುದೇ ಅಹಂನ್ನು ಕಾಣಲಿಲ್ಲ ನಾನು. ಎಂದೋ ಪರಿಚಯವಾದ, ಕೈ ಕುಲುಕಿದ ನನ್ನೊಡನೆ ಅವರು ಜರ್ಮನಿಯ ವೊಜ್ಬಗರ್್ ವಿವಿಯ ಬಗ್ಗೆ ಮಾತನಾಡಿದರು. ಅಲ್ಲಿ ಮಾಡಬೇಕೆಂದಿರುವ ಕನ್ನಡ ಭಾಷೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಚಚರ್ಿಸಿದರು. ಎಂಥಹ ವ್ಯಕ್ತಿತ್ವ ಎಂದೆನಿಸಿತ್ತು ನನಗೆ……(ಮುಂದುವರೆಯುವುದು)…..

Advertisements
 • ಪುಟಗಳು

 • Flickr Photos

 • ಡಿಸೆಂಬರ್ 2017
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಮಾರ್ಚ್    
   12
  3456789
  10111213141516
  17181920212223
  24252627282930
  31  
 • ವಿಭಾಗಗಳು