ಜೀವನೋತ್ಸಾಹ ಅಡಗದ ನೂರ ಇಪ್ಪತ್ತರ ಮಾರಕ್ಕಜ್ಜಿ

(This is my mother, GIRIYAMMA before she passed away recently, I will up date her story soon. The unlucky grand mother story is about her mother MARAKKA, who passed away 15 years ago. My mother is one who comes up in this  story as GIRI. She got married when she was 7 years old.)

ಈ ಮಾರಕ್ಕಜ್ಜಿಗೆ 120. ಇವಳ ಸುಕ್ಕುಗಟ್ಟಿದ ಮುಖದಲ್ಲಿ ಇಂದಿಗೂ ಬದುಕಲ್ಲಿ ಕಂಡುಂಡ ಕಷ್ಟಸುಖಗಳ ಗುರುತಿದೆ.
ಮನದಾಳದಲ್ಲಿ ಹೆಪ್ಪುಗಟ್ಟಿರುವ ಬದುಕಿನ ಅನುಭವ ಅಪ್ಯಾಯಮಾನವಾಗಿದೆ.
ಶತಮಾನದ ಹಿಂದೆ ಹೆತ್ತು ಹೊತ್ತು ಸಾಕಿ ಸಲಹಿದವಳು. ಹರೆಯದಲ್ಲಿ ಮಕ್ಕಳ, ಮೊಮ್ಮಕ್ಕಳ, ಮರಿಮಕ್ಕಳ ಬಾಣಂತನ ಮಾಡಿ ತಾನಿಂದು
ಹೆಣ್ಣಾಗಿದ್ದಾಳೆ, ಹಸುಗೂಸಾಗಿದ್ದಾಳೆ.
ಸಡಿಲಗೊಳ್ಳದ ಹಲ್ಲು, ಮಬ್ಬಾಗದ ಕಣ್ಣು, ಶಕ್ತಿಗುಂದಿಸದ ಶ್ರವಣ, ತೊದಲದ ಮಾತು, ಅತ್ತಂತೆ ನಗುವ ಈವಜ್ಜಿಯ ಹಸಿತ ನಗು
ಇಂದಿಗೂ ಹಸಿರಾಗಿವೆ.
ಆದರೆ ಮಾರಕ್ಕನ ಪಾದಗಳು ಶಕ್ತಿಗುಂದಿವೆ. ಕೈಗಳು ಬಲಹೀನವಾಗಿವೆ. ಜೀವನೋತ್ಸಾಹವೇನೂ ಅಡಗಿಲ್ಲ ಇವಳಲ್ಲಿ. ಮೈಸೂರ
ಮಹಾರಾಜರ ಕಾಲದಲ್ಲಿ ಅಮವಾಸ್ಯೆ ರಾತ್ರಿ, ಬೆಳಗಿನ ಜಾವದಲ್ಲಿ ನಾ ಹುಟ್ಟಿದನಂತೆ………..ನಮ್ಮವ್ವ ಆರು ಕೂಸ ಬಿಟ್ಟು
ತೀರಿಕೊಂಡಳು. ಸ್ವಲ್ಪ ದಿನ ಊರ ಶ್ಯಾನಭೋಗರ ಮನೆಯಲ್ಲಿ ಕೆಂಪಗಿದ್ದ ನನ್ನ ಸಾಕಿದರಂತೆ ಎಂದು ಬದುಕಿನ ಎಲ್ಲಾ ಘಟನೆಗಳ ನೆನಪಿಸಿ
ಹೇಳುವಳು ಈವಜ್ಜಿ.
ಪ್ರಬುದ್ಧ ಚಿಂತನೆ:
ಇವಳು ಬದುಕಲ್ಲಿ ತೆಗೆದುಕೊಂಡ ನಿರ್ಧಾರಗಳು ಎಳೆಸಿನಿಂದ ಕೂಡಿದ್ದರೂ ಅವುಗಳಲ್ಲಿ ಪ್ರಬುದ್ಧ ಚಿಂತನೆ ಇದೆ. ಭವಿsyaವನ್ನು ಹರಸುವ
ಅದಮ್ಯತೆ ಅಡಗಿದೆ, ಕ್ಷಣಿಕವನ್ನು ಚಿಂತಿಸದ ವಿಶಾಲತೆ ಅಡಗಿದೆ ಎನ್ನಬಹುದು.
ಇದ್ದ ಹಲವಾರು ಮಕ್ಕಳು ಸಾವಿಗೀಡಾದಾಗ ಬದುಕಲ್ಲಿ ಜಿಗುಪ್ಸೆಗೊಂಡವಣಲ್ಲ ಇವಳು, ಉಳಿದಿದ್ದ ಎraಡು ಮಕ್ಕಳ ನೆರಮನೆಗೆ
ಕಳಿಸಿದಾಗಲೂ ಪರಿತಪಿಸದ ಇವಳನ್ನು ದೃಢಮನಸ್ಸಿನವಳು ಎಂದರೆ ಅತಿಶಯೋಕ್ತಿ ಇಲ್ಲ.
ಇವಳು ಬದುಕಿನ ಪುಟಗಳ ತಿರುವಿದಾಗ ವಿಸ್ಮಯಗಳ ಸರಮಾಲೆಯೆ ಹಣೆದಿದೆ.
ಹೆಣ್ಣಿಗಾಗಿ ನೂರಳ್ಳಿ ಸುತ್ತಿ ಜೋಡು ಸವಸಿ ಮಾರಕ್ಕನ ಜೋಪುಡಿಯಡಿ ಬಂದು ಕುಳಿತ ಜೋಡಿ ಜಮೀನ್ದಾರ, seven years old ಮಾರಕ್ಕನ
ಹಸುಗೂಸನಿಡಿದು, ಕೈಗೆ ಮೂರು ಕಾಸಿಕ್ಕಿ, ತೊಡೆ ಮೇಲೆ ಕೂರಿಸಿಕೊಂಡು ತಲೆವೇವರಿಸಿ, “ಗಿರಿ” ನನ್ನ ಲಗ್ನ ಮಾಡ್ಕಂಡಿಯ್ಯಾ ಎಂದಾಗ
“ಓ” ಎಂದ ಕರುಳ ಕುಡಿಯ ಮುಗ್ಧತೆಗೆ ಮರುಕ ಪಡದೆ ಮನಸ್ಸು ತುಂಬಿಕೊಂಡು ಹರಸಿದ್ದಳು ಇದೇ ಮಾರಕ್ಕ.
ಜೋಡಿ ಜಮೀನ್ದಾರನ ಊರಲ್ಲೆಲ್ಲಾ ಸಡಗರ. ಮೊದಲ ಹೆಂಡತಿ ಮಕ್ಕಳಿಗೆಲ್ಲಾ ಮುಜುಗರ. ಐವತ್ತಾಳಿದ್ದ ಮನೆಯಲ್ಲಿ ಅತಿ ಚಿಕ್ಕವಳೆಂದರೆ
“ಗಿರಿ”. ತೇಪೆ ಹಾಕಿದ ತುಂಡು ಲಂಗದ ಹುಡುಗಿ ಹದಿನಾರು ಗಜದ ತುಂಬು ಸೇರೆಯುಟ್ಟವಳೆ ಇಂದು. ಗಿರಿಜಾ ಮೀಸೆಯ ಗೌಡನ
ಮೆರವಣಿಗೆಯಂದು. ಆದರೆ ಮಾರಕ್ಕ ಮಗಳ ಮೆರವಣಿಗೆಯಂದು ಹಿಗ್ಗಿದವಳಲ್ಲ. ಇಂದೂ ಕುಗ್ಗಿಲ್ಲ.
ಶ್ಯಾನಭೋಗ, ತಹಸೀಲ್ದಾರ, ಅಮಲ್ದಾರ, ಪೂಜಾರಿ, ತೋಟಿ, ತಳವಾರಾದಿಯಾಗಿ ಸೇರಿತ್ತಂದು ಸುತ್ತೈವತ್ತಾರಳ್ಳಿ ಜನ. ಗತ್ತು ಗೌಡನ
ಆರ್ಭಟದಲ್ಲಿ ಹಸುಳೆ ಬಾಳುವುದೇ ಎಂದು ಮರುಗಿತ್ತು. ತಮಟೆ ಡೋಲುಗಳ ಶಬ್ದದ ಅಬ್ಬರದಿ ಅದು ಕೇಳದಾಗಿತ್ತು.
ಆದರೆ ಮಾರಕ್ಕನ ಮನದೊಳಗೆ ನಿರ್ಲಿಪ್ತತೆ ತುಂಬಿತ್ತು.
ಈಡುಗಾಯಿ ಹಾಕಿದರೆ ಬಾಚಲೊಡುವ ಗಿರಿ, ಗತ್ತು ಗೌಡನ ಕಿರುಬೆರಳಿಗೆ ಕೂಸ ಕೈ ಸಿಕ್ಕಿಸಿ ಎಳೆದು ನಿಲ್ಲಿಸುತಿಹರು ಗದರಿ. ಜಾರುತ್ತಿದ್ದ
ಮಗಳ ಸೀರೆಯನಿಡಿದು ಸೊಂಟದಲ್ಲಿದ್ದ ಬೆಳ್ಳಿ ಡಾಬ ತೆಗೆದು, ಮಗಳ ಸೊಂಟವ ಬಿಗಿ ಮಾಡಿ ಸೀರೆ ನಿಲ್ಲಿಸಿ ಅಂತ ಕರಣದ ನಿಟ್ಟಿಸಿರು
ಬಿಟ್ಟವಳು ಇವಜ್ಜಿ.

ಹನ್ನೆರಡು ಸೂಳೆಯರಿದ್ದ ಗತ್ತು ಗೌಡನ ಗತ್ತುಗಳೇ ಬೇರೆ. ಕೆಂಪು ಮಿಶ್ರಿತ ಬಿಳಿ ಬಣ್ಣದ ನಲವತ್ತೈದರ ಗೌಡನ ಕಣ್ಣುಗಳು ಕೆಂಪು.
ಸದಾಕಾಲ ಹೆಗಲ ಮೇಲಿರುವ ಕೆಂಪು ವಸ್ತ್ರ. ಮೂಗಿನ ಸೊಳ್ಳೆಯಿಂದ ಕಿವಿವರೆಗೆ ಹುದುಗಿರುವ ಮೀಸೆರಾಶಿ. ಎತ್ತರದ ನಿಲವು.
ಗಡಸು ಧ್ವನಿ, ಬಾಯ್ತೆರೆದರೆ ಅಮ್ಮ ಅಕ್ಕ ಎನ್ನುವ ooಗುಳಿನ maatuglu. ಅವನು ಅರೆಬರೆ ಅಗಿದು ಹುಗಿದ ಅಡಿಕೆಗಳ ಆಯ್ದು
ಅಗಿಯುತ್ತಿದ್ದವರು, ಮಾರಿ ಕಾಸು ಮಾಡಿಕೊಳ್ಳುತ್ತಿದ್ದವರು ಎ?ಇಂಔಂ ಜನ? ಮೊಳದುದ್ದದ ಜೇಬಿನಿಂದ ದಾನದ ರೂಪದಲ್ಲಿ
ಹೊರಹೋಗುತ್ತಿದ್ದ ವೀಳ್ಯದೆಳೆಯ ಕಟ್ಟುಗ‌ಇ?ಇಂಔಂ, ಅರ್ಧ ಕುಡಿದು ಬಿಸಾಡಿದ ಬೀಡಿ ಆಯ್ದು ಸೇದಿ ಖುಷಿಪಡುವ ಪಡ್ಡೆ
hudugaru estooo? ಬರಗಾಲ ಬಂದಾಗ ಜೋಳದ ಹಿಟ್ಟಾಕಿ, ಹದಿನಾರಳ್ಳಿ ಹುಟ್ಟು ಉಳಿಸಿದ್ದ ಗತ್ತು ಗೌಡನಿಗೆ ಹಸುಳೆ ಮಗಳ ಧಾರೆಯೆರೆದು
ಧೈರ್‍ಯ ಮೆರೆದಿದ್ದಳು ಇದೇ ಮಾರಕ್ಕ.
ಗೌಡನಿಗೆ ಒಬ್ಬ ಅಣ್ಣ ಮತ್ತು ತಮ್ಮ. ಇಬ್ಬರಿಗೂ ಇಬ್ಬಿಬ್ಬರು ಹೆಂಡಿರು. ತಲಾ ಏಳೇಳು ಮಕ್ಕಳು. ಅರ್ಧ ಫರ್ಲಾಂಗುದ್ದದ ಮನೆ. ನೂರು
ಹಸುಕರುಗಳುಮ ಐನೂರು ಕುರಿ. ಐವತ್ತು ಆಳುಗಳಿದ್ದ ದರ್ಬಾರಿನ ಮನೆಯೊಡತಿ ಈಗ ಮಾರಕ್ಕನ ಮಗಳು.
ಸವತಿ ಮಕ್ಕಳಿಗಳಿಗೆಂದೂ ಎದುರಾಡಬೇಡ. ಗೌಡನ ಕರೆ ಎಂದೂ ಓಗೊಡದೆ ಇರಬೇಡ, ಆಳುಗಳಲ್ಲಿ ಅಸಹನೆ ತೋರಬೇಡ. ವಹಿಸಿದ
ಕೆಲಸದಲ್ಲಿ ಮೈಗಳ್ಳತನ ಮಾಡಬೇಡ, ತುಂಬಿದ ಕುಟುಂಬದಲ್ಲಿ ಈ?ಇಚಿಜ ಪಡಬೇಡ. ಹಿರಿಯರ ಅಣ್ಣಯ್ಯ, ಅಕ್ಕಯ್ಯ ಎನ್ನು. ಕಾಲಿನಲಿ
ತೋರುವುದ ತಲೆ ಮೇಲೆ ಹೊತ್ತು ಮಾಡು. ತುಂಬಿದ ಕುಟುಂಬದಲ್ಲಿ ಕೆಟ್ಟೆಸರು ತಗಂಬೇಡ…….ಮಾರಕ್ಕನ ಬುದ್ಧಿ ಮಾತಿವು ಮೂಗು
ಚುಚ್ಚದ ಹುಡುಗಿಗೆ.
ಸಂಸಾರಕ್ಕೆ ಪಕ್ವವಾಗದ ಮೈಮನಸ್ಸುಗಳು ಈ ಮಾರಕ್ಕನ ಹಸುಳೆಯವು. ತುಂಬು ಕುಟುಂಬದಲ್ಲಿ ಒಡೆದ ಮನಸ್ಸುಗಳಿದ್ದವು. ಹತ್ತಾರು
ಕೇಸುಗಳಿಗೆ ಕೋರ್ಟಿಗೆ ತಿರುಗುವ ಗೌಡ, ಸೂಳೆಯರೊಂದಿಗೆ ಕಾಲ ಕಳೆಯ ಹತ್ತಿದ. ಅವಿಭಕ್ತ ಕುಟುಂಬದಲ್ಲಿ ಎಲ್ಲರೂ ಸಮಾನರು ಎಂಬ
ಒಣ ಸಿದ್ದಾಂತ ಹೊಂದಿದ್ದ. ಮಾರಕ್ಕನ ಕೂಸು ಮನಸ್ಸಿಗೆ ಬರದಾಯ್ತು. ಪರಿಣಾಮ ಕಸ ಎತ್ತುವ, ಆಳುಗಳೊಡನೆ ದನಕಾಯುವ, ನೀರು
ತರುವ ನಿತ್ಯ ಕೆಲಸ “ಗಿರಿ”ಗೆ ನಿಗದಿಯಾಯ್ತು. ಓಡುವ ದನಗಳ ಬಳಸಿಕೊಳ್ಳಲಾಗದೆ ಬಳಲಿ ಎದಿಸಿರು ಬಿಡುತ್ತಾ ಒಡೆದ ಪಾದಗಳ
ನೋಡಿ ಬಿಕ್ಕುವ ಮಗಳ ಬದುಕ ಸಹಿಸಲಾಗದೇ ಆರ್ದ್ರಗೊಂಡವಳು ಈ ಮಾರಕ್ಕ. ಇದ್ದ ಮಕ್ಕಳಲ್ಲಿ ಹಿರಿಯ ಮಗನ ಕರೆದು, ’ಗಂಗ’
ಗಿರಿಯಪ್ಪನ (ಗಿರಿ) ಕಾಪಾಡಪ್ಪ. ಮಗ ಸವೆಯಕ್ಕತ್ತೈತೊ, ಹೆಂಗಾದರೂ ಕಾಪಾಡೊ ಎಂದು ಹೆತ್ತ ಕರುಳ ಆರ್ತನಾದ ಮಾಡಿದಳವಳು
ಮಾರಕ್ಕ. ಮಗಳ ಸಹಾಯಕ್ಕೆ ಕೈಗೆ ಬಂದ ಮಗನನ್ನು ಜಮೀನ್ದಾರನ ಮನೆಗಟ್ಟಿದಳು.
’ಪಾಪಯ್ಯ (ಗೌಡ) ಏನೂ ನನ್ನ ಕಂದಮ್ಮನ ನಿನ್ನ ಸೆರಗಿಗೆ ಹಾಕಿದ್ದೇನಪ್ಪಾ. ಅದರ ಜೀವ ಉಳಿಸುವುದು ಬದುಕಿಸುವುದು ನಿನಗೆ
ಬಿಟ್ಟಿದ್ದಪ್ಪಾ’ …….ಮಾರಕ್ಕನ ದು:ಖಭರಿತ ಮಾತುಗಳಿವು ಜಮೀನ್ದಾರನ ಕಣ್ಣುಗಳ, ಮನಸ್ಸು ತೆರೆಯಲಿಲ್ಲ.
ಕಟ್ಟಿದ್ದ ಗಾಡಿಯನೇರಿ ಬಿಕ್ಕಳಿಸಿ ಅಳುತ್ತಿದ್ದ ಮಗಳಿಂದ ದೂರವಾಗಿ ಬಂದವಳು ಈ ಮಾರಕ್ಕ. ಇಂದಿಗೂ ಹಿಂತಿರುಗಿ ಅಳಿಯನ ನೆಲೆ
ತುಳಿದಿಲ್ಲ.
ತಾನು ವಾಸವಿದ್ದ ಜೋಪಯಡಿಯಿಂದ ಹೊರಬಂದಿಲ್ಲ. ಆದರೆ ಸಾವಿನಂಚಿಗಂತೂ ಬಂದಿದ್ದಾಳೆ. ದಿನ ಗಂಟೆ, nimishagala ಎಣಿಸುತ್ತಿದ್ದಾಳೆ.
—ಎಂ. ಎನ್. ಚಂದ್ರೇಗೌಡ
(ಈ ಮಾರಕ್ಕಜ್ಜಿ ತೀರಿಕೊಂಡು ಈಗ ೧೫ varshagalagive. ಈಗ ಗಿರಿ, ಗಿರಿಯಮ್ಮ ಈಗ ಹಣ್ಣಾಗಿದ್ದಾಳೆ…..ಸಾವಿನಂಚಿಗೆ ಈಗ
ಗಿರಿಯಮ್ಮಜ್ಜಿಯೂ ಬಂದಿದ್ದಾಳೆ, recenlty she also passed away)
…….ಮುಂದಯವರೆಯುವುದು ….

Advertisements
 • ಪುಟಗಳು

 • Flickr Photos

 • ಡಿಸೆಂಬರ್ 2017
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಮಾರ್ಚ್    
   12
  3456789
  10111213141516
  17181920212223
  24252627282930
  31  
 • ವಿಭಾಗಗಳು