Gubbi Veeranna grand daughter’s grand performance

Saaguta doora doora ……Hogenical……

TP and ZP election in December?

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ

ಸ್ಲಗ್: ಎಲೆಕ್ಷನ್

ಡೇಟ್; 28-10-2010

ಬೆಂಗಳೂರು

ಆಂಕರ್: ಡಿಸೆಂಬರ್ 15 ರೊಳಗೆ ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆ ನಡೆಸುವಂತೆ ಸಕರ್ಾರ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ. ಈ ಸಂಬಂಧ ಅಗತ್ಯವಿರುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಸಿದ್ಧಪಡಿಸಿಕೊಳ್ಳಲು ಚುನಾವಣಾ ಆಯೊಗಕ್ಕೆ ಅಗತ್ಯವಿರುವ ಹಣಕಾಸಿನ ಸೌಲಭ್ಯವನ್ನು ಸಕರ್ಾರ ಬಿಡುಗಡೆ ಮಾಡಿದೆ. ಫ್ಯಾಕೇಜ್ ಫಾಲೋಸ್……… ವಾಯ್ಸ್ ಓವರ್: ಹಗರಣಗಳ ಸರಮಾಲೆ, ಭಿನ್ನಮತ, ವಿಶ್ವಾಸಮತಯಾಚನೆ ವಿವಾದಗಳಿಂದ ತತ್ತರಿಸಿರುವ ಸಕರ್ಾರ ಹೇಗಾದರೂ ಮಾಡಿ ಸಾರ್ವಜನಿಕರ ಆಸಕ್ತಿಯನ್ನು ಬೇರೆಡೆಗೆ ತಿರುಗಿಸಲು ಮುಂದಾದಿದೆ. ಈ ಹಿನ್ನಲೆಯಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಗಳನ್ನು ಡಿಸೆಂಬರ್ 15 ರೊಳಗೆ ಮಾಡಿ ಮುಗಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಬಗ್ಗೆ ಸಮಯ ನ್ಯೂಸ್ ಚಾನಲ್ ಜತೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ್ ಶೆಟ್ಟರ್, ಈಗಾಗಲೇ ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿದೆ. ಶೇ. 50 ರಷ್ಟು ಸೀಟುಗಳನ್ನು ಮಹಿಳೆಯರಿಗೆ ಮೀಸಲಿಡಲು ನಿರ್ಧರಿಸಲಾಗಿದೆ. ಜತೆಗೆ ಅಗತ್ಯವಿರುವ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಖರೀದಿಸಲು, ಚುನಾವಣೆಗಳನ್ನು ಸುಸೂತ್ರವಾಗಿ ನಡೆಸಲು ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಸಿದ್ಧಪಡಿಸಲು ಅಗತ್ಯವಿರುವ ಆಥರ್ಿಕ ನೆರವನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ವಿಧಾನಸಭಾ ಚುನಾವಣೆಗಳ ನಂತರ ಬಂದ, ಲೋಕಸಭೆ, ಆಪರೇಷನ್ ಕಮಲದ ನಂತರದ ಎದುರಾದ ಉಪಚುನಾವಣೆಗಳು, ಗ್ರಾಮಪಂಚಾಯ್ತಿ, ಬಿಬಿಎಂಪಿ ಚುನಾವಣೆ ಜತೆಗೆ ಶಾಸಕರ ಅಕಾಲಿಕ ವಿಧನದಿಂದ ತೆರವಾದ ಸ್ಥಾನಗಳಿಗೆ ನಡೆದ ಉಪ ಚುನಾವಣೆಗಳನ್ನು ಎದುರಿಸಿ ಹೈರಾಣಾಗಿದ್ದ ಸಕರ್ಾರ, ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಯನ್ನು ಕನಿಷ್ಠ 6 ತಿಂಗಳು ಮುಂದೂಡಲು ಈ ಹಿಂದೆ ನಿರ್ಧರಿಸಿತ್ತು. ಆದರೆ ಒಂದಾದ ಮೇಲೊಂದರಂತೆ ಬಂದು ಅಪ್ಪಳಿಸಿದ ಹಗರಣಗಳು, ಅಸ್ಥಿರತೆಯಿಂದ ಸಕರ್ಾರದ ವರ್ಚಸ್ಸು ಕುಗ್ಗಿದೆ. ಇಂಥಹ ಸಂದರ್ಭದಲ್ಲಿ ಸಾರ್ವಜನಿಕರ ಆಸಕ್ತಿಯನ್ನು ಬೇರೆಡೆಗೆ ತಿರುಗಿಸಲು ಜತೆಗೆ ಶಾಸಕರನ್ನು ಬ್ಯುಸಿಯಾಗಿರುವಂತೆ ನೋಡಿಕೊಳ್ಳಲು ಸಕರ್ಾರ ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಚಾಲನೆ ನೀಡಿದೆ ಎಂದು ಹೇಳಲಾಗುತ್ತಿದೆ. —ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್ ಬೆಂಗಳೂರು

Former Chief Ministers of this State, who had ruled us…..

When Devraj Urs visited Dharmastala along with Indira Gandhi, Kenkal shows blue print of Vidhanasoudha to Maharaja

ಕೆಪಿಸಿಸಿ ಅಧ್ಯಕ್ಷರಾಗಿ ಡಾ. ಜಿ. ಪರಮೇಶ್ವರ್ ನೇಮಕದ ಹಿಂದೆ ಕೇಂದ್ರದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಕೆಲಸ ಮಾಡಿದ್ದಾರೆ

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ

ಡೇಟ್: 26-10-2010

 ಬೆಂಗಳೂರು

ಆಂಕರ್: ಕೆಪಿಸಿಸಿ ಅಧ್ಯಕ್ಷರಾಗಿ ಡಾ. ಜಿ. ಪರಮೇಶ್ವರ್ ನೇಮಕದ ಹಿಂದೆ ಕೇಂದ್ರದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಕೆಲಸ ಮಾಡಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ. ಪರಮೇಶ್ವರ್ರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ರಾಜ್ಯ ರಾಜಕೀಯದ ಮೇಲೆ ಕೃಷ್ಣ ಮತ್ತೊಮ್ಮೆ ಹಿಡಿತ ಸಾಧಿಸಲು ಹೊರಟಿದ್ದಾರೆಂದು ಹೇಳಲಾಗುತ್ತಿದೆ. ಫ್ಯಾಕೇಜ್ ಫಾಲೋಸ್………… ವಾಯ್ಸ್ ಓವರ್ 1: ನಾಯಕರ ಗುಂಪುಗಾರಿಕೆಯಿಂದ ಒಡೆದ ಮನೆಯಂತಾಗಿರುವ ಪ್ರದೇಶ ಕಾಂಗ್ರೆಸ್ ಪಕ್ಷವನ್ನು ನೂತನ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಹೇಗೆ ಮುನ್ನಡೆಸುತ್ತಾರೆ ಎಂಬುದೇ ಈಗ ರಾಜ್ಯ ರಾಜಕೀಯ ವಲಯದಲ್ಲಿ ಚಚರ್ೆಯಾಗುತ್ತಿರುವ ವಿಷಯ. ಯಾವುದೇ ವಿವಾದಗಳನ್ನು ಮೈಗಂಟಿಸಿಕೊಳ್ಳದ, ಸುಶಿಕ್ಷಿತ, ದೂರದಶರ್ಿತ್ವವಿರುವ ವ್ಯಕ್ತಿಯನ್ನು ಪ್ರದೇಶ ಕಾಂಗ್ರೆಸ್ ಗಾದಿಗೆ ತರುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಹೊಸ ಪ್ರಯೋಗಕ್ಕೆ ಚಾಲನೆ ನೀಡಿದೆ. ಕೇಂದ್ರದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಲ್ಲಿಕಾಜರ್ುನ ಖಗರ್ೆ, ಕೆ.ಎಚ್. ಮುನಿಯಪ್ಪ ಮಂತ್ರಿಯಾಗಿದ್ದಾರೆ. ರಾಜ್ಯದಲ್ಲಿ ವಿಧಾನಪರಿಷತ್ ಪ್ರತಿಪಕ್ಷದ ನಾಯಕಿ ಮೋಟಮ್ಮ ದಲಿತ ವರ್ಗಕ್ಕೆ ಸೇರಿದವರಾಗಿದ್ದಾರೆ. ಹೀಗಿದ್ದರೂ ಕೆಪಿಸಿಸಿ ಅಧ್ಯಕ್ಷ ಗಾದಿಯನ್ನು ಮತ್ತೊಬ್ಬ ದಲಿತರಿಗೆ ಅದರಲ್ಲೂ ಪರಿಶಿಷ್ಟ ಜಾತಿಯ ಬಲಗೈ ಪಂಗಡಕ್ಕೆ ಸೇರಿದ ನಾಯಕನಿಗೆ ನೀಡಿರುವುದು ಕೆಪಿಸಿಸಿ ಆಕಾಂಕ್ಷಿಗಳಾಗಿದ್ದವರಲ್ಲಿ ಆಶ್ವರ್ಯ ಉಂಟುಮಾಡಿದೆ. ಈ ನೇಮಕದ ಹಿಂದೆ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಕೆಲಸಮಾಡಿದ್ದಾರೆಂದು ಹೇಳಲಾಗುತ್ತಿದೆ. ಜೆಡಿಎಸ್ನ ವರಿಷ್ಠ ದೇವೇಗೌಡರೊಂದಿಗೆ ರಾಜೀಮಾಡಿಕೊಳ್ಳದ, ಯಾವುದೇ ವಿವಾದಗಳಿಗೆ ಸಿಕ್ಕದ, ಸುಶಿಕ್ಷಿತ ಜತೆಗೆ ಯುವ ನಾಯಕರಾಗಿರುವ ಡಾ. ಜಿ. ಪರಮೇಶ್ವರ್ ಹೆಸರನ್ನು ಎಸ್.ಎಂ. ಕೃಷ್ಣ ಅವರೇ ಸೂಚಿಸಿದ್ದರೆಂದು ಮೂಲಗಳು ತಿಳಿಸಿವೆ. ಆರ್.ವಿ. ದೇಶಪಾಂಡೆ ಅಧ್ಯಕ್ಷರಾದ ನಂತರ ರಾಜ್ಯ ರಾಜಕೀಯದಿಂದ ಬಹುದೂರ ಉಳಿದಿದ್ದ ಎಸ್.ಎಂ. ಕೃಷ್ಣ, ತಮಗೆ ನಿಷ್ಠರಾಗಿದ್ದ ಡಾ. ಜಿ. ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾದ ಮೇಲಾದರೂ ರಾಜ್ಯ ರಾಜಕೀಯದ ಕಡೆ ಇಣುಕಿ ನೋಡಲಿದ್ದಾರೆಯೇ? ಪರಮೇಶ್ವರ್ ಮೂಲಕ ಮತ್ತೊಮ್ಮೆ ಪ್ರದೇಶ ಕಾಂಗ್ರೆಸ್ ಮೇಲೆ ಹಿಡಿತ ಸಾಧಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಬಾರಿ ಯಡಿಯೂರಪ್ಪನವರಿಗೆ ಸಡ್ಡು ಹೊಡೆಯಲು ಲಿಂಗಾಯಿತರೊಬ್ಬರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಕಾಂಗ್ರೆಸ್ ಹೈಕಮಾಂಡ್ ಮಾಡಲಿದೆ ಎಂಬ ವದಂತಿಯ ನಡುವೆ ದಲಿತ ನಾಯಕರೊಬ್ಬರು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ನ ಈ ನಡೆ ಕಾಂಗ್ರೆಸ್ ಪಕ್ಷದಿಂದ ಈಗಾಗಲೇ ದೂರವಾಗಿರುವ ಲಿಂಗಾಯಿತ ಸಮುದಾಯವನ್ನು ಮತ್ತಷ್ಟು ದೂರಮಾಡಲಿದೆಯಾ ಹೇಗೆ ಎಂಬುದಕ್ಕೆ ಕಾಲವೇ ಉತ್ತರಿಸಬೇಕಾಗಿದೆ. —ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್, ಬೆಂಗಳೂರು

ಕಡೆಯದಾಗಿ ದಿವಾಕರ್ ಬಳಿ ಮತ್ತೊಮ್ಮೆ ನಾನು ಕ್ಷಮೆಯಾಚಿಸುತ್ತೇನೆ………………………………

ರಿಪೋರ್ಟರ್: ಎಂ.ಎನ್. ಚಂದ್ರೇಗೌಡ
ಸ್ಲಗ್: ಇಬ್ರಾಹಿಂ
ಡೇಟ್: 24-10-2010
ಬೆಂಗಳೂರು

ನಿನ್ನೆ ನಡೆದ ಘಟನೆ ರಾಜಕಾರಣಿಗಳ ಮತ್ತೊಂದು ವಿಕೃತ ಮುಖವನ್ನು ನನಗೆ ಪರಿಚಯಿಸಿದೆ. ನಿನ್ನೆ ನಾವು ಹೈಕಮಾಂಡ್ ರಾಜಕಾರಣದ ಬಗ್ಗೆ ಚಚರ್ಿಸಲು ತೀಮರ್ಾನಿಸಿ ಸಂಜೆ 5 ತಿಂದ 6.30 ರವರೆಗೆ ಚಚರ್ೆ ನಡೆಸುವುದೆಂದು ತೀಮರ್ಾನಿಸಿದ್ದೆವು. ಅದಕ್ಕಾಗಿ ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ, ಮುಖ್ಯಮಂತ್ರಿಗಳ ರಾಜಿಕೀಯ ಕಾರ್ಯದಶರ್ಿ ದಿವಾಕರ್, ಅನರ್ಹಗೊಂಡಿರುವ ಶಾಸಕ ಶಿವರಾಜ್ ತಂಗಡಗಿ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾಯದಶರ್ಿ ಬಿ.ಜಿ. ಪುಟ್ಟಸ್ವಾಮಿಯವರನ್ನು ಆಹ್ವಾನಿಸಿದ್ದೆವು. ಹೈಕಮಾಂಡ್ ರಾಜಕಾರಣ ಪ್ರಾದೇಶಿಕ ನಾಯಕರನ್ನು ಇತ್ತೀಚಿನ ದಿನಗಳಲ್ಲಿ ವ್ಯವಸ್ಥಿತವಾಗಿ ಮೂಲೆಗುಂಪು ಮಾಡುತ್ತಿರುವ, ನಮ್ಮ ಸ್ವಾಭಿಮಾನಿ, ವರ್ಚಸ್ವಿ ನಾಯಕರು ಹೈಕಮಾಂಡ್ನ ಗುಲಾಮಗಿರಿ ರಾಜಕಾರಣಕ್ಕೆ ಬಲಿಯಾಗಿ ಸ್ವಂತಿಕೆ ಕಳೆದುಕೊಳ್ಳುತ್ತಿರವ ಬಗ್ಗೆ ನಮ್ಮ ನೈಜ ಕಳಕಳ ವ್ಯಕ್ತಪಡಿಸುವ ಹಂಬಲ ನನಗಿತ್ತು. ಇದಕ್ಕಾಗಿ ಸಿಎಂ ಇಬ್ರಾಹಿಂರಂಥಹ ಹಿರಿಯ ರಾಜಕಾರಣಿ, ಜತೆಗೆ ರಾಜಕೀಯ ಇತಿಹಾಸದ ಬಗ್ಗೆ ಸಾಕಷ್ಟು ಹೋಂವರ್ಕ ಮಾಡಿರುವ ದಿವಾಕರ್ ಅವರಿಗೆ ಮೊದಲೇ ಈ ವಿಷಯ ತಿಳಿಸಿ, ಹಿಟ್ಲರನ ಕಾಲದಲ್ಲಿ ಹುಟ್ಟಿದ ಹೈಕಮಾಂಡ್ ಎನ್ನುವ ಅಪ್ರಜಾಸತ್ತಾತ್ಮಕ ರಾಜಕೀಯ ವ್ಯವಸ್ಥೆಯ ಬಗ್ಗೆ ಚಚರ್ಿಸಲು ಸಿದ್ಧನಾಗಿದ್ದೆ. ಜತೆಗೆ ಭಿನ್ನ ನಡೆ ತೋರಿಸಿ ಇಂದು ಬೀದಿಗೆ ಬಿದ್ದಿರುವ ಮಾಜಿ ಸಚಿವ ಶಿವರಾಜ್ ತಂಗಡಿಯವರ ಈಗಿನ ಮನಸ್ಥತಿ, ರಾಜಕಾರಣದಲ್ಲಿರುವ ಗರ್ಭಗುಡಿ ಸಂಸ್ಕೃತಿ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಜನರ ಮುಂದಿಡಬೇಕು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದಶರ್ಿಗಳಿಂದ ಸಕರ್ಾರದ ಕಾರ್ಯವೈಖರಿ ಬಗ್ಗೆ ಸ್ಪಷ್ಟನೆ ಪಡೆಯಬೇಕು. ಯಾವುದೇ ಘಟನೆಗಳಿಗೆ ಪ್ರತಿಕ್ರಿಯಿಸದೇ ಕಾಲ ತಳ್ಳುತ್ತಿರುವ ಸಕರ್ಾರ, ಅದರ ಪ್ರತಿನಿಧಿಗಳ ವರ್ತನೆಯ ಬಗ್ಗೆ ಬೆಳಕು ಚೆಲ್ಲಬೇಕು ಎಂಬುದು ನನ್ನ ಚಚರ್ೆಯ ಹಿಂದಿನ ಉದ್ದೇಶವಾಗಿತ್ತು. ಸಕರ್ಾರದ ನಡೆಯನ್ನು ಸದಾ ತಮ್ಮ ಮೊನಚು ಮಾತುಗಳಿಂದ ಚುಚ್ಚುವ ವೈಎಸ್ವಿ ದತ್ತಾರನ್ನು ಆಹ್ವಾನಿಸಿ ಚಚರ್ೆಗೆ ಮತ್ತಷ್ಟು ರಂಗುತರಲು ನಿರ್ಧರಿಸಲಾಗಿತ್ತು.

5 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಶಿಸ್ತಿನ ಸಿಪಾಯಿಯಾಗಿರುವ ದಿವಾಕರ್ ಹತ್ತು ನಿಮಿಷ ಮೊದಲೇ ಬಂದು ಸ್ಟುಡಿಯೋದಲ್ಲಿ ಆಸೀನರಾಗಿದ್ದರು. ಸದಾ ಕೇಳಿದ ಸಮಯಕ್ಕೆ ಸರಿಯಾಗಿ ಬರುವ, ಒಪ್ಪಿಕೊಂಡ ಕಾರ್ಯಕ್ರಮಕ್ಕೆ ಯಾವುದೇ ಕಾರಣಕ್ಕೂ ತಪ್ಪಿಸದೇ ಬರುವ ದಿವಾಕರ್ ಬಗ್ಗೆ ನನಗೊಂದು ಅಭಿಮಾನ. ಏಕೆಂದರೆ ಒಪ್ಪಿಕೊಂಡ ಸಮಯಕ್ಕೆ ಬರದೇ, ಬರುವುದಿಲ್ಲವೆಂದು ತಿಳಿಸುವ ಸೌಜನ್ಯವನ್ನು ತೋರದ ವೈಎಸ್ವಿ ದತ್ತಾರಿಗಿಂತ ದಿವಾಕರ್ ಅತ್ಯತ್ತಮ ವ್ಯಕ್ತಿ. ಅವರು ಒಂದು ರೀತಿಯಲ್ಲಿ ನಮಗೆ ಅಪತ್ಬಾಂಧವ. ಎಷ್ಟೋ ಕಾರ್ಯಕ್ರಮಗಳಿಗೆ ಇನ್ನು 30 ನಿಮಿಷವಿರುವಂತೆ ಹೇಳಿದಾಗಲೂ ಒಂದು ಚೂರು ಬೇಸರಿಸಿಕೊಳ್ಳದೇ ಬಂತು ಕಾರ್ಯಕ್ರಮ ನಡೆಸಲು ನೆರವಾಗುವ ದಿವಾಕರ್ ನಿಜಕ್ಕೂ ಯಾವುದೇ ವಿಷಯದ ಬಗ್ಗೆ ಮಾತನಾಡುವ ಆಳದ ಜ್ಞಾನವಿರುವ ವ್ಯಕ್ತಿ. ಆದ್ದರಿಂದಲೇ ಅವರು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿದ್ದಾರೆ.

ಹೀಗಿದ್ದಾಗ ನಾವೆಲ್ಲಾ ಕಡೆಯ ಕ್ಷಣದ ಸಿದ್ಧತೆಯಲ್ಲಿದ್ದಾಗಲೇ ಸಿಎಂ ಇಬ್ರಾಹಿಂ ಅವರಿಂದ ಬಂತು ಕರೆ. ಮತ್ತೆ ಯಾರು ಬರುತ್ತಾರೆ. ಇವರೆಲ್ಲಾ ಬರುತ್ತಾರೆ ಎಂದಾಗಲೇ ಹೇ ಎಲ್ಲಾದರೂ ಉಂಟೇ ಈ ಚಿಲ್ಲರೆ ಜನರ ಜತೆ ನಾನು ಕುಳಿತುಕೊಳ್ಳುವುದೇ ಎಂಬ ಕೊಂಕು ನುಡಿ ಆ ಕಡೆಯಿಂದ. ತಕ್ಷಣವೇ ಶಿವರಾಜ್ ತಂಗಡಗಿ ಹೇಗಿದ್ರೂ 10 ನಿಮಿಷ ಲೇಟಾಗಿ ಬರುತ್ತೇನೆ ಎನ್ನುತ್ತಿದ್ದಾರೆ ಅವರಿಗೆ ಬೇಡ ಎಂದು ಹೇಳುತ್ತೇವೆ ಎಂದು ಹೇಳಿ ಬನ್ನಿ ಎಂದೆವು. ಪುಟ್ಟಸ್ವಾಮಿ ಅವರನ್ನು ಮತ್ತೊಂದು ಸ್ಟುಡಿಯೋದಲ್ಲಿ ಕುಳಿತುಕೊಳ್ಳುವಂತೆ ಮಾಡಿ, ದಿವಾಕರ್, ಇಬ್ರಾಹಿಂ ಇಬ್ಬರನ್ನೇ ಸ್ಟುಡಿಯೋದಲ್ಲಿ ಕುಳಿತುಕೊಳ್ಳುವಂತೆ ಮಾಡೋಣ ಎಂದು ನಿರ್ಣಯಿಸಿದೆವು. ಹೇಗಿದ್ದರೂ ದಿವಾಕರ್ ಕುಳಿತಿಕೊಂಡಿದ್ದಾರೆ. ಇಬ್ರಾಹಿಂ ಬಂದವರೆ ನೇರವಾಗಿ ಸ್ಟುಡಿಯೋಗೆ ಬರಲಿ ಎಂದು ನಾನೂ ಸಿದ್ಧವಾಗಿ ಕುಳಿತೆ. ಬ್ಲೇಸರ್ ಹಾಕಿ, ಈಪಿ ಸಿಕ್ಕಿಸಿ ಕುಳಿತೆ. ದಿವಾಕರ್ ಮಾತನಾಡಲು ಸಿದ್ಧಪಡಿಸಿಕೊಂಡಿರುವ ಟಿಪ್ಪಣಿಗಳ ಬಗ್ಗೆ ಕಾರ್ಯಕ್ರಮ ಆರಂಭಕ್ಕೆ ಮೊದಲು ಒಂದೆರಡು ವಿಷಯಗಳನ್ನು ಹಂಚಿಕೊಂಡರು. ಅಷ್ಟರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಪೋನೋದೊಂದಿಗೆ ಕಾರ್ಯಕ್ರಮ ಆರಂಭಿಸಲು ನಿರ್ಧರಿಸಿ ಪಿಸಿಆರ್ಗೆ ಅವರ ಪೋನ್ ನಂಬರ್ ನೀಡಿ ಸಿದ್ಧನಾದೆ. ಇಬ್ರಾಹಿಂ ಎಂಟ್ರಿಯಾಯಿತು, ಇನ್ನೇನು ಕಾರ್ಯಕ್ರಮ ಆರಂಭ ಮಾಡಬೇಕು ಎಂದು ಪಿಸಿಆರ್ನ ಆಜ್ಞೆಗಾಗಿ ಕಾದು ಕುಳಿತಿದ್ದ ನನಗೆ ಶಾಕ್ ಕಾದಿತ್ತು.
 
ಸ್ಟುಡಿಯೋ ಒಳಗೆ ಬಂದ ಇಬ್ರಾಹಿಂ ಸಾಹೇಬರು, ಕಿಟಕಿ ಗಾಜಿನಲ್ಲಿ ಇಣುಕಿ ನೋಡಿ ದಿವಾಕರ್ ಇರುವುದನ್ನು ಗಮನಿಸಿ ಅವರ ಪಕ್ಕದಲ್ಲಿ ನಾನು ಕುಳಿತುಕೊಳ್ಳುವುದಿಲ್ಲ ಎಂದು ಹೇಳಿ ಹಿಂದಕ್ಕೆ ನಡೆದರು. ಹಬೀಬ್ ದಂಡಿ ಕೈ ಸನ್ನೆ ಮಾಡಿ ನನ್ನನ್ನು ಹೊರಕರೆದರು. ನನಗೆ ಅರ್ಥವಾಯಿತು ವಿಷಯ. ಹಿಂದೆ ಇದೇ ರೀತಿ ಆರ್.ವಿ. ದೇಶಪಾಂಡೆ ಹೀಗೆಯೇ ಸ್ಟುಡಿಯೋದಲ್ಲಿ ಕುಳಿತಿದ್ದ ಇದೇ ಪುಟ್ಟಸ್ವಾಮಿ ಅವರನ್ನು ಹೊರಕಳುಹಿಸಿದ್ದರು. ಅನಂತರ ಅವರೊಬ್ಬರೆ ಮಾತನಾಡಿದ್ದರು. ನನಗೆ ವಿಷಯ ಅರ್ಥವಾಗುತ್ತಿದ್ದರಂತೆಯೇ ಇಬ್ರಾಹಿಂ  ಅವರನ್ನು ಹಿಂಬಾಲಿಸಿದೆ. ನಂತರ ಅವರನ್ನು ಮಾತನಾಡಿಸಿ ಛೇಂಬರ್ ಒಂದರಲ್ಲಿ ಕುಳಿತುಕೊಳ್ಳುವಂತೆ ಮಾಡಿ ಮನವೊಲಿಸಲು ಯತ್ನಿಸಿದೆ. ಏ ಈ ಚಿಲ್ಲರೆಗಳ ಜತೆ ನಾನು ಕುಳಿತುಕೊಳ್ಳುವುದೇ………. ನಾನೆಲ್ಲಿ ಆವರೆಲ್ಲಿ ಎಂದರು ಇಬ್ರಾಹಿಂ,…….ಅವರ ಪಕ್ಕದಲ್ಲಿ ಕುಳಿತ ಬೆನ್ನೆಲುಬು ಇಲ್ಲದ Journalist obba ಕಿಸಕ್ಕನೆ ನಕ್ಕ…..ಇಬ್ರಾಹಿಂ ಅಹಂ ಇನ್ನೂ ಹೆಚ್ಚಾಯಿತು……ಕಡೆಗೆ ದಿವಾಕರ್ ಅವರನ್ನು ಮತ್ತೊಂದು ಸ್ಟುಡಿಯೋದಲ್ಲಿ ಕೂರಿಸಲಾಗುವುದೆಂದು ತಿಳಿಸಿ ಮನವೊಲಿಸಲು ಯತ್ನಿಸಿದೆವು. ಆದರೆ ಅವರೂ ಒಪ್ಪಲಿಲ್ಲ. ಪುಟ್ಟಸ್ವಾಮಿ, ದಿವಾಕರ್ ಜತೆ ವೇದಿಕೆ ಹಂಚಿಕೊಳ್ಳುವುದಿಲ್ಲ. ಇಲ್ಲವಾದರೆ ನಾನು ಇನ್ನೊಮ್ಮೆ ಬರುತ್ತೇನೆ ಎಂದರು ಇಬ್ರಾಹಿಂ ಸಾಹೇಬರು.

ಕಡೆಗೆ ಒಲ್ಲದ ಮನಸ್ಸಿನಿಂದ ದಿವಾಕರ್ ಅವರಿಗೆ ಬೇರೆ ಸ್ಟುಡಿಯೋದಲ್ಲಿ ಕುಳಿತುಕೊಳ್ಳುವಂತೆ ವಿನಂತಿಸಲಾಯಿತು. ಸ್ವಾಭಿಮಾನಿ ದಿವಾಕರ್ ಒಪ್ಪಲಿಲ್ಲ. ನನಗೆ, ನನ್ನ ಪಕ್ಷಕ್ಕೆ ಮಾಡುವ ಅವಮಾನ ಇದು ಎಂದರು. ಅದು ನಿಜವೂ ಆಗಿತ್ತು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರ ಜತೆ ಕುಳಿತುಕೊಳ್ಳಲು ಇಬ್ರಾಹಿಂ ಸುತಾರಾಂ ಒಪ್ಪಲಿಲ್ಲ. ಬೇರೆ ಸ್ಟುಡಿಯೋದಲ್ಲಿ ಕುಳಿತುಕೊಂಡು ಲೈವ್ಗೆ ಬರಲು ದಿವಾಕರ್ ಸಿದ್ಧರಾಗಲಿಲ್ಲ. ಕಡೆಗೆ ಪ್ರೋಗ್ರಾಂ ಕ್ಯಾನ್ಸಲ್ ಮಾಡಿ ಎಂದರು ದಿವಾಕರ್. ಅದನ್ನು ಮಾಡಲು ನಾವು ಸಿದ್ಧರಿರಲಿಲ್ಲ.
ಕಡೆಗೆ ದಿವಾಕರ್ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿ ಹೊರನಡೆದರು. ಇಬ್ರಾಹಿಂ ಒಳಗೆ ಬಂದರು. ಕಾರ್ಯಕ್ರಮವನ್ನು 45 ನಿಮಿಷಗಳ ಕಾಲ ನಡೆಸಿದೆವು…………….

ಕಾರ್ಯಕ್ರಮದ ನಂತರ ನನ್ನ ಮನಸ್ಸು ಭಾರವಾಯಿತು. ಇಬ್ರಾಹಿಂ ವರ್ತನೆ, ರಾಜಕಾರಣಿಗಳ ಮನೋಧರ್ಮದ ಬಗ್ಗೆ ನನಗೆ ಜಿಗುಪ್ಸೆ ಉಂಟಾಯಿತು.

1) ಹೀಗೆಕೇ ಈ ರಾಜಕಾರಣಿಗಳು ಅನ್ನಿಸಿತು.
2) ದಿವಾಕರ್ ಅಸ್ಪೃಶ್ಯರೇ? ಸರಿಯಾಗಿ ಓದಿಕೊಂಡು ಸ್ಥಾನಮಾನಗಳನ್ನು ಪಡೆದ ದಿವಾಕರ್ಗೆ ಈ ಟ್ರೀಟ್ಮೆಂಟ್ ಆದರೆ ಸಾಮಾನ್ಯರ ಗತಿ ಏನು ಎನ್ನಿಸಿತು?
3) ವರ್ಷಕ್ಕೆ ಒಂದು ಕಾರ್ಯಕ್ರಮವಾದರೆ ಇಬ್ರಾಹಿಂರ ಲೆವೆಲ್ನ ರಾಜಕರಾಣಿಗಳನ್ನೇ ಹುಡುಕಿ ತರಬಹುದು. ಇಂದಿನ ರಾಜಕೀಯ ಸಂದಿಗ್ಧತೆಯಲ್ಲಿ ಪ್ರತಿದಿನ ಚಚರ್ಾ ಕಾರ್ಯಕ್ರಮಗಳಿರುತ್ತವೆ. ಪ್ರತಿಯೊಬ್ಬರೂ ಬ್ಯುಸಿಯಾಗಿರುತ್ತಾರೆ. ಐದಾರು ಚಾನೆಲ್ನವರು ಐದಾರು ಚಚರ್ೆ ಏರ್ಪಡಿಸಿರುತ್ತಾರೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ನಾಯಕರು ಬೇಕಾಗಿರುತ್ತಾರೆ. ಇಂಥಹ ಸಂದರ್ಭದಲ್ಲಿ ಈ ರಾಜಕಾರಣಿಗಳಿಗೆ ನಾವು ಸದಾ ಜೋಡಿಗಳನ್ನು ಹುಡುಕುವುದು ಹೇಗೆ?

4) ಜನತಂತ್ರ ವ್ಯವಸ್ಥೆಯಲ್ಲಿ ಪ್ರಧಾನಿಯ ಓಟು, ಸೋನಿಯಾ ಗಾಂಧಿ ಓಟು, ಇಬ್ರಾಹಿಂ ಓಟಿನ ಬೆಲೆಗೂ ಭಿಕ್ಷೆ ಬೇಡುವ ವ್ಯಕ್ತಿಯ ಓಟಿನ ಬೆಲೆಗೂ ಯಾವುದೇ ವ್ಯತ್ಯಸ ಇರುವುದಿಲ್ಲ. ಹೀಗಿದ್ದರೂ ಯಾವುದೇ ವಿದ್ಯಾರ್ಹತೆ ಇಲ್ಲದೆ ರಾಜಕಾರಣಕ್ಕೆ ಧುಮುಕಿ ಮಂತ್ರಿ, ಮುಖ್ಯಮಂತ್ರಿಗಲಾಗುವ ಜನಕ್ಕೆ ಇತರ ಸಾಮಾನ್ಯರನ್ನು ಕಂಡರೆ ತಾತ್ಸಾರ ಏಕೆ ಎನ್ನುವ ಪ್ರಶ್ನೆ ನನ್ನನ್ನು ಕಾಡಿತು.

5) ದಿವಾಕರ್ 24 ತಾಸಿನ ರಾಜಕಾರಣಿಯಾಗಿಲ್ಲದಿರಬಹುದು. ಆದರೆ ಅವರಿಗೊಂದು ಅಕಾದೆಮಿಕ್ ಕ್ವಾಲಿಫಿಕೇಷನ್ ಇದೆ. ಸಕರ್ಾರಕ್ಕೆ ಕಾನೂನು ಸಲಹೆ ಗಾರರಾಗಿದ್ದಾರೆ. ನಾವೇನು ಮುತ್ತಪ್ಪ ರೈ ಕರೆ ತಂದು ಪ್ರಜಾತಂತ್ರದ ಬಗ್ಗೆ ಚಚರ್ೆಯಲ್ಲಿ ಪಾಲ್ಗೊಳ್ಳಬೇಕೆಂದು ಇಬ್ರಾಹಿಂ ಅವರಿಗೆ ಕೇಳಿರಲಿಲ್ಲ. ಸಕರ್ಾರದ ಮುಂಚೂಣಿಯಲ್ಲಿದ್ದು ಒಳಹೊರಗನ್ನು ಬಲ್ಲ, ಮುಖ್ಯಮಂತ್ರಿಗೆ ಕಾನೂನಿನ ಬಗ್ಗೆ ಸಲಹೆ ನೀಡುವ ವ್ಯಕ್ತಿಯನ್ನು ಕರೆದು ನೇರ ಉತ್ತರ ಪಡೆಯಲು ಬಯಸಿದ್ದೆವು.

6) ಇಬ್ರಾಹಿಂ ಎತ್ತಿದ ಮುಖ್ಯನ್ಯಾಯಾಧೀಶರ ವರ್ತನೆ ಬಗ್ಗೆ ದಿವಾಕರ್ ಸಮರ್ಪಕವಾಗಿ ಉತ್ತರ ಕೊಡಬಲ್ಲವರಾಗಿದ್ದರು. ಹೀಗಿದ್ದರೂ ಇಬ್ರಾಹಿಂ ವರ್ತನೆ ಮನಸ್ಸನ್ನು ಕಸಿವಿಸಿಗೊಳಿಸಿತು.

7) ಚಚರ್ೆಯಲ್ಲಿ ಪಾಲ್ಗಳ್ಳಲು ತಮಗೆ ಬೇಕಾದವರಿಗೆ, ಮನೆ ಮಂದಿಗೆ ತಿಳಿಸಿ, ತಮ್ಮ ಸಹಾಯಕರೊಂದಿಗೆ ಸ್ಟುಡಿಯೋಗೆ ಆಗಮಿಸಿದ್ದ ದಿವಾಕರ್, ಯಾವುದೇ ಕಾರಣವಿಲ್ಲದೆ, ಅಂತಸ್ತಿನ ಮದಕ್ಕೆ ಸಿಕ್ಕಿದ ವ್ಯಕ್ತಿಯೊಬ್ಬರ ವರ್ತನೆಯಿಂದ ಹೊರಗೋಗಬೇಕಾದಾಗ ಮುಜುಗರ ಅನುಭವಿಸಿದ್ದಾರೆ. ಆ ಕ್ಷಣ ಅವರ ಮನಸ್ಸಿನಲ್ಲಾದ ಸಂಘರ್ಷಕ್ಕೆ, ಸಹಾಯಕರ ಮುಂದೆ ಸಣ್ಣವರಾಗಿ ಹೊರಹೋಗಬೇಕಾದ ಸಂದಿಗ್ಧಕ್ಕೆ ಸಿಕ್ಕಿ ಒದ್ದಾಡಿದ ದಿವಾಕರ್ ಬಳಿ ನಾನು ಕ್ಷಮೆಯಾಚಿಸುತ್ತೇನೆ.

8) ಇಬ್ರಾಹಿಂ ಅವರೇ ಇಂಥಹ ನಿಮ್ಮ ಮದವೇ ನಿಮ್ಮನ್ನು ಇಂದಿನ ಸ್ಥಿತಿಗೆ ನೂಕಲ್ಪಟ್ಟಿದೆ ಎಂಬುದನ್ನು ಮರೆಯದಿರಿ. ಯಾವ ನಾಯಕ ಒಬ್ಬ ಸಾಮಾನ್ಯನನ್ನು ಗೌರವಿಸುವುದಿಲ್ಲವೋ  ಅಲ್ಲಿನವರೆಗೆ ಆತ ಜನಮುಖಿಯಾಗಿ ಬದುಕಲು ಸಾಧ್ಯವಿಲ್ಲ ಎಂಬುದು ತಿಳಿದಿರಲಿ. ಜನತಂತ್ರದಲ್ಲಿ ಇಬ್ರಾಹಿಂರ ಓಟಿಗೇನೂ ಕೋಟಿ ಓಟುಗಳ ಬೆಲೆಯಿಲ್ಲ. ನಿಮ್ಮದೂ ಒಂದೇ ಓಟಿನ ಬೆಲೆ. ಹುಟ್ಟಿದಾಗಲೇ ನೀವೇನೂ ಕೇಂದ್ರದ ವಿಮಾನಯಾನ ಖಾತೆ ಸಚಿವರಾಗಿ ಹುಟ್ಟಿರಲಿಲ್ಲ. ನೀವು ಹಂತ ಹಂತವಾಗಿ ಬೆಳೆದು ಮೇಲಕ್ಕೆ ಹೋದವರೇ. ಹೀಗೆ ಮೇಲೆ ಹೋದವರು ಕೆಳಗಿನಿಂದ ಬೆಳೆಯುತ್ತಾ ಬರುವವರನ್ನು ಗೌರವಿಸುವುದು ಬೇಡ, ಒಬ್ಬ ಸಾಮಾನ್ಯನನ್ನು ಕಂಡಂತೆ ವತರ್ಿಸಿದ್ದರೆ ಸಾಕಿತ್ತು. ಮನುಷ್ಯ ದ್ವೇಷಿಯಂತೆ ವತರ್ಿಸಬಾರದಿತ್ತು. ವತರ್ೂರ್ ಪ್ರಕಾಶ್ ನಿಮ್ಮಂತೆ ವತರ್ಿಸಿದ್ದರೆ ನನಗೇನೂ ಬೇಸರ ಇರುತ್ತಿರಲಿಲ್ಲ. ಆದರೆ ನಿಮ್ಮಂಥಹ ಬಸವ, ಸರ್ವಜ್ಞ, ದಾಸರ ವಚನಗಳನ್ನು ಬಲ್ಲ ವ್ಯಕ್ತಿ ಹೀಗೆ ವತರ್ಿಸಿದ್ದು ನನಗೆ ಬೇಸರ ತಂದಿತ್ತು.
9) ಹಿಂದೆ ನಾನು ಸುವಣರ್ಾ ಚಾನೆಲ್ನಲ್ಲಿದ್ದಾಗ ಹೀಗೆಯೇ ಹಿರಿಯ ಪತ್ರಕರ್ತ ಭಾಸ್ಕರ್ ಹೆಗಡೆಯವರನ್ನು ಚಚರ್ಾ ಕಾರ್ಯಕ್ರಮವೊಂದಕ್ಕೆ ಆಹ್ವಾನಿಸಿದ್ದೆ. ಆಗಲೂ ಇದೇ ದೇಶಪಾಂಡೆಯವರು ಹೆಗಡೆ ಕುರಿತು ಇಂಥದ್ದೇ ಮಾತನಾಡಿದ್ದರು. ಆಗಲೂ ನನಗನ್ನಿಸಿದ್ದು ಸಂದರ್ಶನ ನೀಡಲು ಪತ್ರಕರ್ತ ಬೇಕು. ಆದರೆ ಚಚರ್ೆಗೆ ಮಾತ್ರ ಅವರು ಬೇಡ…..ಎಂಥಃ ಮನೋಧರ್ಮ……
10) ನಾವು ನಡೆಸುವುದು ಚಚರ್ೆ. ವಾದವಲ್ಲ. ಚಚೆಯಲ್ಲಿ ಅವರವರ ಅಭಿಪ್ರಾಯ ಹೇಳಬೇಕೆ ಹೊರತು, ಅವನು ಯಾರು, ಯಾವ ಜಾತಿ, ಅಂತಸ್ತು, ಹಿನ್ನಲೆ ಇವೆಲ್ಲಾ ಮುಖ್ಯ ಆಗುವುದಿಲ್ಲ. ನೀವು ಎನು ಮಾತನಾಡುತ್ತೀರ ಎನ್ನುವುದರ ಬಗ್ಗೆ ಜನ ನಿರ್ಣಯಿಸುತ್ತಾರೆ. ಮುಖ್ಯಮಂತ್ರಿಯೇ ಬಂದರೂ ಆತ ಸತ್ಯಕ್ಕೆ ದೂರವಾದ ಮಾತುಗಳನ್ನು ಹೇಳುತ್ತಿದ್ದಾನೆ ಎನ್ನಿಸಿದೊಡನೆ ವೀಕ್ಷಕ ಆತನ ಮಾತನ್ನು ಕೇಳದೇ ಚಾನೆಲ್ ಬದಾಯಿಸುತ್ತಾನೆ. ಒಂದು ತಿಳಿದಿರಲಿ ಒಬಾಮಾ, ಇಂದಿರಾ, ಮನ್ಮೋಹನ್, ವಾಜಪೇಯಿ, ದೇವೇಗೌಡ ಯಾರೂ ರಾತ್ರೋರಾತ್ರಿ ನಾಯಕರಾದವರಲ್ಲ. ಎಲ್ಲರೂ ಹಂತ ಹಂತವಾಗಿ ಬೆಳೆದು ಮೇಲಕ್ಕೆ ಬಂದವರೇ………ಆದ್ದರಿಂದ ನೀವು ಬೆಳೆದವರು, ಬೆಳೆಯುವವರನ್ನು ಕಂಡು ಎಂದಿಗೂ ಮೂಗೂ ಮುರಿಯಬೇಡಿ. ಕನಿಷ್ಠ ಅವರನ್ನು ಸಹಿಸದಿದ್ದರೆ ಪರವಾಗಿಲ್ಲ ಒಮ್ಮೆ ಅವರನ್ನು ಮಾತನಾಡಿಸಿ ಹೊರನಡೆದುಬಿಡಿ….ನೀವು ದೊಡ್ಡ ಮನುಷ್ಯರಾಗುತ್ತಿರಾ… ಇಲ್ಲವಾದರೆ ಬೇರೆಯವರ ದೃಷ್ಟಿಯಲ್ಲಿ ತುಂಬಾ ಸಣ್ಣವರಾಗುತ್ತೀರ. ಇದೇ ದಿವಾಕರ್, ಪುಟ್ಟಸ್ವಾಮಿ ನಾಳೆ ಎಂಎಲ್ಎ ಗಳಾದರೆ ನೀವೆ ಸಮ್ಮಿಶ್ರ ಸಕರ್ಾರದ ಮುಖ್ಯಮಂತ್ರಿಯಾಗಬೇಕಾದ ಪ್ರಸಂಗ ಬಂದರೆ ಇವರ ಜತೆ ಕುಳಿತುಕೊಳ್ಳುವುದಿಲ್ಲ. ಇವರ ಓಟು ನನಗೆ ಬೇಡ ಎನ್ನುತ್ತೀರಾ? ಆಗ ಇಂಥವರ ತೂಕ ಗೊತ್ತಾಗುತ್ತದೆ. ಅದೇ ಜನತಂತ್ರದ ಶಕ್ತಿ ಎಂಬುದನ್ನು ಮರೆಯದಿರಿ.

ರಾಜರಾರಣಿಗಳೇ ನಿಮಗೊಂದು ವಿಷಯ ತಿಳಿದಿರಲಿ. ಸಣ್ಣ ಮೀನು ದೊಡ್ಡ ಮೀನನ್ನು ತಿನ್ನುತ್ತದೆಯಂತೆ. ದೊಡ್ಡ ಮೀನನ್ನು ಮತ್ತೊಂದು ದೊಡ್ಡ ಮೀನು ನುಂಗುತ್ತದೆ ಗೊತ್ತಲ್ಲ. ಇವತ್ತು ದಿವಾಕರ್ ಜತೆ ಇಬ್ರಾಹಿಂ ಕುಳಿತುಕೊಳ್ಳುವುದಿಲ್ಲ ಎಂದರೆ ನಾಳೆ ಈಶ್ವರಪ್ಪ ಇದೇ ಇಬ್ರಾಹಿಂ ಜತೆ ಕುಳಿತುಕೊಳ್ಳುವುದಿಲ್ಲ ಎನ್ನುತ್ತಾರೆ. ಯಡಿಯೂರಪ್ಪನವರು, ಇಬ್ರಾಹಿಂ, ಡಿಕೆಶಿ ಎದುರು ಬರುವುದಿಲ್ಲ ಎನ್ನುತ್ತಾರೆ. ಉಗ್ರಪ್ಪನ ಎದುರು ಯಾರೂಬ್ಬರೂ ಬರುವುದಿಲ್ಲ ಎನ್ನುತ್ತಾರೆ. ಹೀಗೆ ಒಬ್ಬ ನಾಯಕ ಮತ್ತೊಬ್ಬ ನಾಯಕನನ್ನು ಮುಜುಗರಕ್ಕೆ ಈಡುಮಾಡಿದಾಗ ಅನುಭವಿಸುವ ತಳಮಳವನ್ನು ಅನುಭವಿಸಿದರೆ ಅವರಿಗವರಿಗೆ ಗೊತ್ತಾಗುತ್ತದೆ.

ಬರಾಕ್ ಒಮಾಬನಿಗೆ ಮನಹೋಹನ್ ಕೂಡ ಏನೂ ಅಲ್ಲ. ಮನ್ಮೋಹನ್ ಕೂಡ 187 ದೇಶದ ಪ್ರಧಾನಿಗಳಲ್ಲಿ ಒಬ್ಬ. ಭಾರತ 187 ದೇಶಗಳ ಬಡತನದ ಪಟ್ಟಿಯಲ್ಲಿ ಬಹಳ ಕೆಳಗೆ ಇದೇ ಎಂಬುದನ್ನು ಮರೆಯಬೇಡಿ. ಹಾಗಿದ್ದರೂ ಒಬಮಾ ಭಾರತಕ್ಕೆ ಬರುತ್ತಿದ್ದಾನೆ. ಬಡತನದಲ್ಲಿಯೇ ತನ್ನ ತನವನ್ನು ಭಾರತ ಉಳಿಸಿಕೊಂಡಿದೆ ಎಂಬುದನ್ನು ತಿಳಿದುಕೊಂಡು ಬರುತ್ತಿದ್ದಾನೆ ಆತ. ಬಡತನದ ನಡುವೆಯೂ ಭಾರತೀಯರ ಮಕ್ಕಳು ಅಮೆರಿಕನ್ನಿರಿಗಿಂತ ಬುದ್ಧಿವಂತರು. ಆರೋಗ್ಯ ಕ್ಷೇತ್ರದಲ್ಲಿ, ಐಡಿ, ಬಿಟಿಯಲ್ಲಿ ಭಾರತ ನಮಗಿಂತ ಮುಂದಿದೆ  ಎಂಬ ಸಣ್ಣ ಜ್ಞಾನ ಆತನಿಗಿದೆ. ಯಾರು ಈ ಶ್ರೇಣಿಕೃತ ಸಾಮಾಜಿಕ ಸ್ಯವಸ್ಥೆಯಲ್ಲಿ ತಲಾತಲಾಂತರಗಳಿಂದ ತುಳಿತಕ್ಕೆ, ದಮನಕ್ಕೆ ಒಳಗಾದವರ ಪರವಾಗಿ ಹೋರಾಡಿದ ಗಾಂಧಿ, ಅಂಬೇಡ್ಕರ್ ಹುಟ್ಟಿ ನಡೆದಾಡಿದ ನಾಡಿನಲ್ಲಿ ಬದುಕುತ್ತಿರುವ ರಾಜಕಾರಣಿಗಳೇ ಬಿಡಿ ನಿಮ್ಮ ದರ್ಪ. ಸಾಮಾನ್ಯರಾಗಿ ಬದುಕಿ ಮೊದಲು. ಆನಂತರ ನೀವು ಅಸಾಮಾನ್ಯ ಎಂಬುದನ್ನು ಸಾಮಾನ್ಯರು ಗುರುತಿಸುತ್ತಾನೆ. ನೀವೇ ಸ್ವಯಂ ಘೋಷಿತ ಅಸಾಮಾನ್ಯರಂತೆ ವತರ್ಿಸಿದರೆ ಜನತಂತ್ರದ ಹೊಡೆತಕ್ಕೆ ಸಿಕ್ಕಿ ನುಚ್ಚು ನೂರಾಗುತ್ತೀರಿ. ಎಚ್ಚರಿಕೆ……………

ಕಡೆಯದಾಗಿ ದಿವಾಕರ್ ಬಳಿ ಮತ್ತೊಮ್ಮೆ ನಾನು ಕ್ಷಮೆಯಾಚಿಸುತ್ತೇನೆ………………………………

ಚಿಕ್ಕಮಗಳೂರು ಜಿಲ್ಲೆಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡದ ಯಾವುದೇ ಮುಖ್ಯಮಂತ್ರಿ ಐದು ವರ್ಷ ಪೂರೈಸಿಲ್ಲ

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ

 ಸ್ಲಗ್: ಚಿಕ್ಕಮಗಳೂರು – ಸಚಿವರು

ಡೇಟ್: 20 -10- 2010 ಬೆಂಗಳೂರು

ಆಂಕರ್: ಈ ತಿಂಗಳ 22 ರಂದು ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದ್ದು ಈ ಬಾರಿ ಚಿಕ್ಕಮಗಳೂರು ಜಿಲ್ಲೆಗೆ ಪ್ರಾತಿನಿಧ್ಯ ನೀಡಲೇಬೇಕೆಂದು ಶಾಸಕರಾದ ಸಿ.ಟಿ. ರವಿ ಹಾಗೂ ಜಿ.ಎನ್. ಜೀವರಾಜ್ ಪಟ್ಟುಹಿಡಿದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡದ ಯಾವುದೇ ಮುಖ್ಯಮಂತ್ರಿ ಐದು ವರ್ಷ ಪೂರೈಸಿಲ್ಲವೆಂದು ಈ ಇಬ್ಬರೂ ನಾಯಕರು ಮುಖ್ಯಮಂತ್ರಿಗಳ ಮುಂದೆ ದೊಡ್ಡ ಪಟ್ಟಿಯನ್ನೇ ಮುಂದಿಟ್ಟಿದ್ದಾರೆ. ಮುಖ್ಯಮಂತ್ರಿಗಳಿಗೆ ನೀಡಿರುವ ಪಟ್ಟಿಯಲ್ಲಿ ಏನಿದೆ ಎಂಬುದನ್ನು ಇಲ್ಲಿ ನೋಡಿ…….. ಫ್ಯಾಕೇಜ್ ಫಾಲೋಸ್…………….. ವಾಯ್ಸ್ ಓವರ್ 1: ಗ್ರಾಫಿಕ್ಸ್ ಪಾಯಿಂಟ್ಸ್: ಅದು 1979 ದೇವರಾಜ ಅರಸು ಮುಖ್ಯಮಂತ್ರಿ: ಶೃಂಗೇರಿ ಶಾಸಕ ಬೇಗಾನೆ ರಾಮಯ್ಯ : ಸಂಪುಟದಲ್ಲಿ ಸ್ಥಾನ ಇರಲಿಲ್ಲ. ಅರಸು ಕೆಳಗಿಳಿದರು: ಗುಂಡೂರಾವ್ ಮುಖ್ಯಮಂತ್ರಿಯಾದರು: ಬೇಗಾನೆ ರಾಮಯ್ಯ ಗ್ರಾಮೀಣಾಭಿವೃದ್ಧಿ ಸಚಿವರಾದರು. 1983: ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ: 1 ವರ್ಷ 6 ತಿಂಗಳ: ಗೋವಿಂದೇಗೌಡ ಶಾಸಕ: ಮಂತ್ರಿ ಇರಲಿಲ್ಲ: ಮತ್ತೆ 85 ರಲ್ಲಿ ಹೆಗಡೆ ಮುಖ್ಯಮಂತ್ರಿ: ಗೋವಿಂದೇಗೌಡ ಮಂತ್ರಿ 1987 ರಲ್ಲಿ ಗೋವಿಂದೇಗೌಡರನ್ನು ಬದಲಿಸಿ ಬಿ.ಎಲ್. ಶಂಕರ್ ಮಂತ್ರಿ, ಹೆಗಡೆ ಸಕರ್ಾರ ಪತನ. 1988 ರಲ್ಲಿ ಬೊಮ್ಮಾಯಿ ಮುಖ್ಯಮಂತ್ರಿ: ಗೋವಿಂದೇಗೌಡ ಮಂತ್ರಿ 1989 ವೀರೇಂದ್ರ ಪಾಟೀಲ್ ಸಕರ್ಾರ: 179 ಮಂದಿ ಕಾಂಗ್ರೆಸ್ ಶಾಸಕರು: ಯು.ಕೆ. ಶಾಮಣ್ಣ ಶಾಸಕ, ಮಂತ್ರಿ ಇಲ್ಲಾ. ಸಕರ್ಾರ ಪತನ: ಬಂಗಾರಪ್ಪ ನಂತರ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಗಳು. 1994 ಹೆಚ್. ಡಿ. ದೇವೇಗೌಡ ಮುಖ್ಯಮಂತ್ರಿ, ಗೋವಿಂದೇಗೌಡ ಮಂತ್ರಿ, ಆನಂತರ ಜೆ.ಎಚ್. ಪಟೇಲ್ ಮುಖ್ಯಂಮಂತ್ರಿ ಅವಧಿ ಪೂರ್ಣ. 1999 ಎಸ್. ಎಂ. ಕೃಷ್ಣ ಮುಖ್ಯಮಂತ್ರಿ: ಡಿ.ಬಿ. ಚಂದ್ರೇಗೌಡ ಮಂತ್ರಿ: ಸಕರ್ಾರದ ಅವಧಿ ಪೂರ್ಣ. 2004 ರ ವಿಧಾನಸಭೆ: ಜೀವರಾಜ್ ಶಾಸಕ, ಮಂತ್ರಿ ಇಲ್ಲಾ, ಮೂವರು ಮುಖ್ಯಮಂತ್ರಿಗಳಾದರು. ಧರಂಸಿಂಗ್, ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ 2008 ಜೀವರಾಜ್, ಸಿ.ಟಿ. ರವಿ ಶಾಸಕರು, ಮಂತ್ರಿ ಇಲ್ಲಾ, ಸಕರ್ಾರ ಅಲ್ಲಾಡುತ್ತಿದೆ. ಶೃಂಗೇರಿ ಕ್ಷೇತ್ರದ ಶಾಸಕರನ್ನು ಹೊರತುಪಡಿಸಿ ಚಿಕ್ಕಮಗಳೂರು ಜಿಲ್ಲೆ ಉಸ್ತುವಾರಿ ಸಚಿವರು ಸಹ ತಮ್ಮ ಅಧಿಕಾರವಧಿಯನ್ನು ಪೂರ್ಣಗೊಳಿಸಿಲ್ಲ. ಗೋವಿಂದೇಗೌಡ, ಡಿ.ಬಿ. ಚಂದ್ರೇಗೌಡ- ಅವಧಿ ಪೂರ್ಣ ಗಂಡಸಿ ಶಿವರಾಂ- 6 ತಿಂಗಳು ಸತ್ಯನಾರಾಯಣ- 6 ತಿಂಗಳು ಡಿ.ಎಚ್. ಶಂಕರಮೂತರ್ಿ- 15 ತಿಂಗಳು 2008 ರಲ್ಲಿ: ಈಶ್ವರಪ್ಪ, ರಾಮಚಂದ್ರಗೌಡ ಅಧಿಕಾರ ಕಳೆದುಕೊಂಡಿದ್ದಾರೆ. ರೇಣುಕಾಚಾರ್ಯ ಅಧಿಕಾರ ತೂಗೂಯ್ಯಾಲೆಯಲ್ಲಿದೆ. ಹಿಂದೆ ಮೈಸೂರು ಮಹಾರಾಜರು ಅಧಿಕಾರ ನಡೆಸುತ್ತಿದ್ದಾಗ ಶೃಂಗೇರಿ ಶಾರದಾಂಬೆಯ ದೇವಸ್ಥಾನಕ್ಕೆ ಭೇಟಿ ನೀಡಿ ಧನಕನಕಗಳನ್ನು ಕೊಟ್ಟು ಆಶೀವರ್ಾದ ಪಡೆಯುತ್ತಿದ್ದರಂತೆ. ಈಗಲೂ ದೇವ ಭಕ್ತರಾಗಿರುವ ಮುಖ್ಯಮಂತ್ರಿಗಳು ಚಿಕ್ಕಮಗಳೂರು ಜಿಲ್ಲೆಯವರನ್ನು ಮಂತ್ರಿಗಳನ್ನಾಗಿ ಮಾಡಿದರೆ ಶೃಂಗೇರಿ ಶಾರದಾಂಬೆಯ ಆಶೀವರ್ಾದ ಧಕ್ಕುತ್ತದೆ. ಅವರ ಅಧಿ ಕಾರವಧಿ ಪೂರ್ಣವಾಗಿರುತ್ತದೆ. ಇಲ್ಲದಿದ್ದರೆ ಮುಖ್ಯಮಂತ್ರಿಗಳು ಕಠಿಣ ಸಮಸ್ಯೆಗೆ ಸಿಕ್ಕುಬೀಳುತ್ತಾರೆ ಎಂಬುದು ಜೀವರಾಜ್ ಹಾಗೂ ಸಿಟಿ ರವಿ ಮನವಿ. ಚಾಮರಾಜನಗರಕ್ಕೆ ಹೋದರೆ ಮುಖ್ಯಂಮಂತ್ರಿಗಳು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಪ್ರತೀತಿಯನ್ನು ನಂಬುವ ನಾವು ಚಿಕ್ಕಮಗಳೂರು ಜಿಲ್ಲೆಗೆ ಪ್ರಾತಿನಿಧ್ಯ ನೀಡದಿದ್ದರೆ ಬಿ.ಎಸ್. ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬುದನ್ನು ನಂಬಲೇಬೇಕಾಗಿದೆ. –ಎಂ. ಎನ್. ಚಂದ್ರೇಗೌಡ, ಸಮಯ ನ್ಯೂಸ್ ಬೆಂಗಳೂರು….

BJP MLA’s lodge complaint aganist 14 Congress and JDS MLA’s

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ
ಸ್ಲಗ್: ಸ್ಪೀಕರ್
ಡೇಟ್: 19- 10- 2010
ಬೆಂಗಳೂರು

ಆಂಕರ್: ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಮೊದಲನೇ ವಿಶ್ವಾಸಮತಯಾಚನೆ ಸಂದರ್ಭದಲ್ಲಿ ಗದ್ದಲ ಎಬ್ಬಿಸಿದ್ದ 14 ಮಂದಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ವಿಧಾನಸಭೆಯ ಸ್ಪೀಕರ್ಗೆ ಬಿಜೆಪಿಯ ಶಾಸಕರು ದೂರು ಸಲ್ಲಿಸಿದ್ದಾರೆ. ಈಗಾಗಲೇ ದೂರು ದಾಖಲಾಗಿದ್ದು ಶಾಸಕರ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಶಾಸಕ ಅಪ್ಪಚ್ಚು ರಂಜನ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಸಮಿತಿಯಲ್ಲಿ ನಾಲ್ವರು ಬಿಜೆಪಿ ಶಾಸಕರು, ಮೂರವು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿದ್ದಾರೆ.

D

ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ…

ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ… 

 ಸೇಡಂನ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ ಕೊಡಲ್ಪಡುವ ರಾಜ್ಯ ಮಟ್ಟದ ’ಅಮ್ಮ ಪ್ರಶಸ್ತಿ’ಗೆ ಪ್ರಸಕ್ತ ಸಾಲಿಗಾಗಿ ಪ್ರಕಟಿತ ಕೃತಿಗಳನ್ನು ಆಹ್ವಾನಿಸಲಾಗಿದೆ. ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ಅಮ್ಮನ ಸ್ಮರಣೆಯಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಿದ್ದು . ಕಳೆದ ಒಂಭ್ತತು ವರ್ಷಗಳಿಂದ ನಿರಂತರವಾಗಿ ನಿಶ್ಚಿತ ದಿನಾಂಕ ಹಾಗೂ ನಿಶ್ಚಿತ ಸ್ಥಳದಲ್ಲಿಯೇ ಪ್ರಶಸ್ತಿ ಪ್ರದಾನ ಮಾಡುತ್ತಾ ಬರುತ್ತಿರುವ ’ಅಮ್ಮ ಪ್ರಶಸ್ತಿ’ಗೆ ಈ ಬಾರಿ ’ದಶಮಾನೋತ್ಸವ ಸಂಭ್ರಮ’. ಹತ್ತನೇ ವರ್ಷದ ’ಅಮ್ಮ ಪ್ರಶಸ್ತಿ’ಗಾಗಿ ನಾಡಿನ ಲೇಖಕರು, ಪ್ರಕಾಶಕರು,2009-10ನೇ ಸಾಲಿನಲ್ಲಿ ಪ್ರಕಟವಾದ ಸಾಹಿತ್ಯದ ಯಾವುದೇ ಪ್ರಕಾರದ ಕೃತಿಗಳನ್ನು ಕಳುಹಿಸಬಹುದು.ಪ್ರಕಟಿತ ಕೃತಿಗಳ ಎರಡು ಪ್ರತಿಗಳನ್ನು ಅಕ್ಟೋಬರ್ 30, 2010 ರೊಳಗಾಗಿ ಕಳುಹಿಸಲು ಕೋರಲಾಗಿದೆ. ಬರುವ ನವೆಂಬರ್26ರಂದು ’ಅಮ್ಮ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.

 ಪುಸ್ತಕ ಕಳುಹಿಸುವ ವಿಳಾಸ : ಪ್ರಭಾಕರ ಜೋಶಿ, ’ವಾಹಿನಿವಿಹಾರ, ಬಸವನಗರ, ಸೇಡಂ – 585 222 ಗುಲಬರ್ಗ ಜಿಲ್ಲೆ.

ಹೆಚ್ಚಿನ ಮಾಹಿತಿಗೆ :9449985695 ಮತ್ತು 9611365002 ಸಂಪರ್ಕಿಸಬಹುದು.

  • ಪುಟಗಳು

  • Flickr Photos

  • ಅಕ್ಟೋಬರ್ 2010
    ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
     12
    3456789
    10111213141516
    17181920212223
    24252627282930
    31  
  • ವಿಭಾಗಗಳು