Sushmaswaraj stalls Reddy’s ouster from the cabinet, CM upset

ರಿಪೋರ್ಟರ್: ಎಂ.ಎನ್. ಚಂದ್ರೇಗೌಡ ಸ್ಲಗ್: ಬಿಜೆಪಿ- ಸುಷ್ಮಾ ಡೇಟ್; ಬೆಂಗಳೂರು ಆಂಕರ್: ಬಳ್ಳಾರಿಯ ರೆಡ್ಡಿ ಸಹೋದರರನ್ನು ಸಚಿವ ಸಂಪುಟದಿಂದ ಕೈಬಿಡಲು ತುದಿಗಾಲ ಮೇಲೆ ನಿಂತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಲೋಕಸಭೆ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ತಡೆಹಾಕಿದ್ದಾರೆಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ. ಗಣಿಧಣಿಗಳನ್ನು ಹದ್ದುಬಸ್ತಿನಲ್ಲಿಡಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ, ಹಿರಿಯ ನಾಯಕ ಅಡ್ವಾಣಿಯವರ ಅನುಮತಿ ಪಡೆದಿರುವ ಯಡಿಯೂಪ್ಪನವರಿಗೆ ಈಗ ತಡೆಗೋಡೆಯಾಗಿರುವುದು ಸುಷ್ಮಾ ಸ್ವರಾಜ್. ಅವರ ಆಶೀವರ್ಾದದಿಂದಲೇ ರೆಡ್ಡಿ ಬ್ರದರ್ಸ ಈಗ ಬಳ್ಳಾರಿಯಲ್ಲಿ ಪಕ್ಷದ ಅನುಮತಿ ಪಡೆಯದೆ ಸ್ವಾಭಿಮಾನಿ ಯಾತ್ರೆ ಕೈಗೊಂಡಿದ್ದಾರೆ. ಇದಕ್ಕೆ ಮುಖ್ಯಮಂತ್ರಿಗಳು ತೀವ್ರ ಅಸಮಧಾನಗೊಂಡಿದ್ದಾರೆಂದು ಹೇಳಲಾಗಿದೆ. ಫ್ಯಾಕೇಜ್ ಫಾಲೋಸ್…. ವಾಯ್ಸ್ ಓವರ್: ಶತಾಯಗತಾಯ ಬಳ್ಳಾರಿ ಗಣಿಧಣಿಗಳನ್ನು ಹತ್ತಿಕ್ಕಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈಗ ಮನಸ್ಸು ಮಾಡಿದ್ದಾರೆ. ಇದಕ್ಕೆ ರಾಜ್ಯ ಬಿಜೆಪಿ ಘಟಕದ ಬೆಂಬಲದ ಜತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ, ಬಿಜೆಪಿ ಅತ್ಯಂತ ಹಿರಿಯ ನಾಯಕ ಎಲ್,ಕೆ. ಆಡ್ವಾಣಿ ಅವರಿಂದಲೂ ಯಡಿಯೂರಪ್ಪ ಗ್ರೀನ್ ಸಿಗ್ನಲ್ ಪಡೆದಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ. ಆದರೆ ಯಡಿಯೂರಪ್ಪನವರಿಗೆ ಅಡ್ಡಿಯಾಗಿರುವುದು ಮಾತ್ರ ಈಗ ಲೋಕಸಭೆಯ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್. ರೆಡ್ಡಿ ಬ್ರದರ್ಸಗಳನ್ನು ಬೆಂಬಲಿಸಬೇಕೆ ಹೊರತು ಅವರನ್ನು ಸಂಪುಟದಿಂದ ಕೈಬಿಡುವ ಪ್ರಶ್ನೆಯೇ ಇಲ್ಲವೆಂದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸುಷ್ಮಾ ತಿಳಿಸಿದ್ದಾರೆಂದು ಮೂಲಗಳು ತಿಳಿಸಿವೆ. ಸುಷ್ಮಾ ಅವರ ನೋ ಎನ್ನುವ ಮಾತುಗಳು ಮುಖ್ಯಮಂತ್ರಿಗಳ ಕೈಕಟ್ಟಿಹಾಕಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ರೆಡ್ಡಿ ಬ್ರದರ್ಸರನ್ನು ಸಂಪುಟದಿಂದ ಕೈಬಿಟ್ಟು ಸಕರ್ಾರಕ್ಕೇನಾದರೂ ಆಪತ್ತು ಎದುರಾದರೆ ಎಂಬ ಪ್ರಶ್ನೆ ಉದ್ಭವವಾಗಿರುವುದರಿಂದಲೇ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ, ಜೆಡಿಎಸ್ ನಾಯಕರ ಜತೆ ಮಾತುಕತೆ ನಡೆಸಲು ಮುಖ್ಯಮಂತ್ರಿಗಳು ಗ್ರೀನ್ ಸಿಗ್ನಲ್ ನೀಡಿದ್ದಾರೆಂದು ಮೂಲಗಳು ತಿಳಿಸಿವೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತ್ರ, ಪ್ರತಿ ಸಾರಿ ಹೀಗೆ ಸುದ್ದಿ ಎಬ್ಬಿಸಿ ಸುಮ್ಮನಾಗುವುದು ಬೇಡ. ಏನಾದರೂ ನಿದರ್ಿಷ್ಟ. ಗಟ್ಟಿ ನಿಧರ್ಾರ ತೆಗೆದುಕೊಳ್ಳುವುದಾದರೆ ಬನ್ನಿ ಎಂದು ತಮ್ಮ ಜತೆ ಆಪ್ತರಾಗಿರುವ ಬಿಜೆಪಿ ಶಾಸಕರ ಮೂಲಕ ಯಡಿಯೂರಪ್ಪನವರಿಗೆ ಸುದ್ದಿ ಮುಟ್ಟಿಸಿದ್ದಾರೆಂದು ಮೂಲಗಳು ತಿಳಿಸಿವೆ. ಈ ಹಿನ್ನಲೆಯಲ್ಲಿಯೇ ಜೆಡಿಎಸ್ನ ನಾಯಕ ಹೆಚ್.ಡಿ. ರೇವಣ್ಣ, ಬಿಜೆಪಿ- ಜೆಡಿಎಸ್ ಮೈತ್ರಿ ಬಗ್ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಜತೆಗೆ ಮುಖ್ಯಮಂತ್ರಿಗಳು ಬಿಜೆಪಿ ವರಿಷ್ಠರ ಜತೆ ಚಚರ್ಿಸಿ ಈ ಬಗ್ಗೆ ತೀಮರ್ಾನ ತೆಗೆದುಕೊಳ್ಳುವುದಾಗಿ ತುಮಕೂರಿನಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಸಚಿವ ರೇಣುಕಾಚಾರ್ಯ ನೇತೃತ್ವದ ಶಾಸಕರ ತಂಡ ನಿನ್ನೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಮುಖ್ಯಮಂತ್ರಿಗಳಿಗೆ ಅವರುಗಳ ಮೇಲಿದ್ದ ಗೊಂದಲವನ್ನು ಬಗೆಹರಿಸಿದೆ ಎಂದು ಹೇಳಲಾಗಿದೆ. ಆದ್ದರಿಂದಲೇ ಮುಖ್ಯಮಂತ್ರಿಗಳು ನಿನ್ನೆ ಜನಾರ್ದನ ರೆಡ್ಡಿ ಅವರನ್ನು ಬೆಂಗಳೂರಿಗೆ ಕರೆಸಿ, ಸ್ವಾಭಿಮಾನಿ ಯಾತ್ರೆ ನಿಲ್ಲಿಸುವಂತೆ ತಾಕೀತು ಮಾಡಿದ್ದಾರೆಂದು ಹೇಳಲಾಗಿದೆ. ಇಲ್ಲವಾದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆಂದು ಮೂಲಗಳು ತಿಳಿಸಿವೆ. —ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್ ಬೆಂಗಳೂರು

Madhurangaiahnavara Ooru Newjersyalli AKKA convention

 

High court thrashes NICE, warns not to distrub Sohail Baig until further orders


ರಿಪೋರ್ಟರ್: MNC Gowda 

Slug : ನೈಸ್ ಕೇಸ್
ಡೇಟ್: 28- 07- 2010

ಆಂಕರ್: ಬೆಂಗಳೂರಿನ ಭನ್ನೇರುಘಟ್ಟ ಸಮೀಪದ ಗೊಟ್ಟಿಗೆರೆಯ ಸೊಹೇಲ್ ಬೇಗ್ ಎಂಬುವರ ಭೂಮಿಯನ್ನು ಮುಂದಿನ ಆದೇಶ ನೀಡುವವರೆಗೆ ಯಾವುದೇ ಕಾರಣಕ್ಕೂ ಪೆರಿಫರಲ್ ರಸ್ತೆ ನಿಮರ್ಾಣ್ಕಕ್ಕಾಗಿ ಕೆಐಎಡಿಬಿ ವಶಕ್ಕೆ ತೆಗೆದುಕೊಳ್ಳಬಾರದೆಂದು ಹೈಕೋಟರ್್ ತುತರ್ು ಮೌಖಿಕ ಆದೇಶ ನೀಡಿದೆ. ನ್ಯಾಯಮೂತರ್ಿ ರಾಮ್ಮೋಹನ್ರೆಡ್ಡಿ ಈ ಆದೇಶ ನೀಡಿದ್ದು  ನೈಸ್ ಕಂಪನಿಯಾಗಲಿ ಕೆಐಎಡಿಬಿಯಾಗಲಿ ಕೋರ್ಟ ಆದೇಶ ಉಲ್ಲಂಘಿಸಿ ಬೇಗ್ ಜಮೀನಿನ ವಶಕ್ಕೆ ಮುಂದಾಗಬಾರದೆಂದು ಆದೇಶಿಸಿದ್ದಾರೆ.

ಫ್ಯಾಕೇಜ್ ಫಾಲೋಸ್….

ವಾಯ್ಸ್ ಓವರ್ 1:
ಬೆಂಗಳೂರು ಸುತ್ತಮುತ್ತ 46 ಕಿಲೋ ರಸ್ತೆ ಪೆರಿಫೆರಲ್ ರಸ್ತೆ ನಿಮರ್ಿಸಲು ಸಾವಿರಾರು ರೈತರ ಭೂಮಿಯನ್ನು ನೈಸ್ ಕಂಪನಿ ವಶಕ್ಕೆ ತೆಗೆದುಕೊಂಡು ಈಗಾಗಲೇ ರಸ್ತೆ ನಿಮರ್ಿಸಿದೆ. ಆದರೆ ಗೊಟ್ಟಿಗೆರೆ ಬಳಿ ಮಾತ್ರ ಈ ರಸ್ತೆಯನ್ನು ಜೋಡಿಸುವುದೊಂದು ಮಾತ್ರ ಬಾಕಿ ಉಳಿದುಕೊಂಡಿದೆ. ಈ ರಸ್ತೆ ಜೋಡಿಸಲು ಗೊಟ್ಟಿಗೆರೆ ಬಳಿ ಸೊಹೇಲ್ ಬೇಗ್ರ ಭೂಮಿ ಅವಶ್ಯಕತೆ ಇದೆ. ಈ ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳಲು 2008 ರಿಂದಲೂ ನೈಸ್ ಕಂಪನಿ ಪ್ರಯತ್ನಿಸುತ್ತಿದೆ. ಆದರೆ ಬೇಗ್ ಕೋರ್ಟ ಮೊರೆ ಹೋಗಿ ತಮ್ಮ ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳದಂತೆ ತಡೆಯಾಜ್ಞೆ ಪಡೆದುಕೊಂಡಿದ್ದಾರೆ. ಈ ತಡೆಯಜ್ಞೆಯನ್ನು ತೆರವುಗೊಳಿಸಲು ನೈಸ್ ಕಂಪನಿ ಪ್ರಯತ್ನಿಸುತ್ತಲೇ ಇತ್ತು. ನಿನ್ನೆ ಈ ಬಗ್ಗೆ ಮಧ್ಯಂತರ ಆದೇಶ ನೀಡಿದ್ದ ಹೈಕೋರ್ಟ ನ್ಯಾಯಮೂತರ್ಿ ರಾಮ್ಮೋಹನ್ ರೆಡ್ಡಿ, ಮುಂದಿನ ಆದೇಶ ನೀಡುವವರೆಗೂ ಬೇಗ್ರ ಜಮೀನಿನಲ್ಲಿರುವ ಕಟ್ಟಡಗಳನ್ನು ಧ್ವಂಸಗೊಳಿಸಬಾರದೆಂದು ಆದೇಶ ನೀಡಿದ್ದರು. ಆದರೆ ಈ ಕುರಿತಂತೆ ನ್ಯಾಯಾಲಯದ ಲಿಖಿತ ಆದೇಶ ಹೊರಬೀಳುವುದರೊಳಗೆ ನೈಸ್ ಕಂಪನಿ ಇಂದು ಬೆಳಿಗ್ಗೆಯೇ ಸೊಹೇಲ್ ಬೇಗ್ ಜಮೀನಿನ ಬಳಿ ಬುಲ್ಡೋಜರ್ಗಳನ್ನು ಕಳುಹಿಸಿ ಭೂಮಿ ವಶಕ್ಕೆ ಮುಂದಾಗಿತ್ತು. ನ್ಯಾಯಾಲಯ ಕೇವಲ ಕಟ್ಟಡ ನೆಲಸಮಗೊಳಿಸಬಾರದೆಂದು ತಿಳಿಸಿದೆ. ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳಬಾರದೆಂದು ತಿಳಿಸಿಲ್ಲ ಎಂಬ ಕಾರಣವನ್ನು ನೈಸ್ ಕಂಪನಿ ಜನ ನೀಡಿದ್ದರು.
ಬೈಟ್; ಸೊಹೇಲ್ ಬೇಗ್, ಗೊಟ್ಟಿಗೆರೆ ನಿವಾಸಿ
ಟಿಸಿಆರ್:
ನೈಸ್ ಕಂಪನಿ ಹುನ್ನಾರವನ್ನರಿತ ಸಾವಿರಾರು ಮಂದಿ ಬೇಗ್ ಬೆಂಬಲಿಗರು ಇಂದು ಸ್ಥಳಕ್ಕೆ ಆಗಮಿಸಿ ಬೇಗ್ರ ಭೂಮಿಯನ್ನು ನೈಸ್ ಕಂಪನಿ ವಶಪಡಿಸಿಕೊಳ್ಳದಂತೆ ನೋಡಿಕೊಂಡರು. ಪರಿಸ್ಥಿತಿ ಬಿಗಡಾಯಿತು. ಬೇಗ್ ಈ ಸಂಬಂಧ ಭನ್ನೇರುಘಟ್ಟ ಪೊಲೀಸ್ ಠಾಣೆಗೆ ದೂರು ನೀಡಿ ಮತ್ತೆ ಹೈಕೋರ್ಟನ ಮೊರೆಹೋದರು. ನ್ಯಾಯಮೂತರ್ಿ ರಾಮ್ಮೋಹನ್ ರೆಡ್ಡಿ ತಕ್ಷಣವೇ ಮುಂದಿನ ಆದೇಶ ನೀಡುವವರೆಗೂ ಬೇಗ್ರ ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳದಂತೆ ಆದೇಶಿಸಿದರು. ಆನಂತರ ಗೊಟ್ಟಿಗೆರೆಯಲ್ಲಿ ಪರಿಸ್ಥಿತಿ ಶಾಂತವಾಯಿತು.
ಬೈಟ್: ಅಬ್ಬಾಸ್, ಬೇಗ್ ಸಂಬಂಧಿ
ಟಿಸಿಆರ್:
ಕೆಐಎಡಿಬಿ ಯಾವುದೇ ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳುವ ಮುನ್ನ ಕನಿಷ್ಠ ಮೂರು ತಿಂಗಳ ನೋಟಿಸು ನೀಡಬೇಕು. ಆದರೆ ಮೂರು ತಿಂಗಳಿರಲಿ ಮೂರು ಗಂಟೆಯ ನೋಟಿಸು ನೀಡದೇ ಕೆಐಎಡಿಬಿ ಪರವಾಗಿ ನೈಸ್ ಕಂಪನಿ ಭೂಮಿ ವಶಪಡಿಸಿಕೊಳ್ಳಲು ಮುಂದಾಗಿದ್ದು ಕಾನೂನು ಬಾಹಿರವಾಗಿದೆ. ಇದು ಬಿಎಂಐಸಿ ಪುನರ್ವಸತಿ ಹಾಗೂ ಪುನರ್ಸ್ಥಾಪನೆ ಪರಿಹಾರದ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ.

JDS opposes Rajiv Gandhi VV shifting

 

ರಿಪೋರ್ಟರ್: ಎಂ.ಎನ್. ಚಂದ್ರೇಗೌಡ ಸ್ಲಗ್: ರಾಜೀವ್ ವಿವಿ ಡೇಟ್; 28-07- 2010 ಬೆಂಗಳೂರು ಆಂಕರ್: ಆಗಸ್ಟ್ 15 ರೊಳಗೆ ರಾಜೀವ್ಗಾಂಧಿ ವಿವಿ ಸ್ಥಳಾಂತರಿಸುವುದಿಲ್ಲವೆಂದು ಸಕರ್ಾರ ಸ್ಪಷ್ಟನೆ ನೀಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದೆಂದು ಜೆಡಿಎಸ್ ಎಚ್ಚರಿಸಿದೆ. ಯಾವುದೇ ಕಾರಣಕ್ಕೂ ರಾಜೀವ್ಗಾಂಧಿ ವೈದ್ಯಕೀಯ ವಿವಿಯನ್ನು ರಾಮನಗರದಿಂದ ಸ್ಥಳಾಂತರಿಸಲು ಅವಕಾಶ ನೀಡುವುದಿಲ್ಲ ಎಂದು ಅದು ಘೋಷಿಸಿದೆ. ಫ್ಯಾಕೇಜ್ ಫಾಲೋಸ್…. ಸುಮಾರು 300 ಕೋಟಿ ರುಪಾಯಿ ವೆಚ್ಚದ ರಾಜೀವ್ಗಾಂಧಿ ವಿವಿಯನ್ನು ರಾಮನಗರದಲ್ಲಿ ಸ್ಥಾಪಿಸಲು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕ್ರಮ ಕೈಗೊಂಡಿದ್ದರು. ಆದರೆ ಆನಂತರ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಸಕರ್ಾರ ರಾಜೀವ್ ಗಾಂಧಿ ವಿವಿಯನ್ನು ರಾಮನಗರದಿಂದ ಬೇರೆಡೆಗೆ ಸ್ಥಳಾಂತರಿಸಲು ಮುಂದಾಗಿತ್ತು. ಈ ವಿಷಯ ವಿಧಾನಸಭೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರ ನಡುವೆ ತೀವ್ರ ಮಾತಿನ ಚಕಮಕಿಗೂ ಕಾರಣವಾಗಿತ್ತು. ಆನಂತರ ರಾಜೀವ್ ಗಾಂಧಿ ವಿವಿಯನ್ನು ರಾಮನಗರದಲ್ಲಿಯೇ ಸ್ಥಾಪಿಸಲು ಸಕರ್ಾರ ಒಪ್ಪಿಕೊಂಡಿತ್ತು. ಆದರೆ ದಿಢೀರನೆ ಕಳೆದ 7 ರಂದು ಆರೋಗ್ಯ ಮತ್ತು ಕುಟುಂಬ ಇಲಾಖೆ ಕಾರ್ಯದಶರ್ಿ ಐ.ಎಂ. ವಿಠ್ಠಲಮೂತರ್ಿ ನೇತೃತ್ವದ ಸಭೆ ರಾಜೀವ್ ಗಾಂಧಿ ವಿವಿಯನ್ನು ರಾಮನಗರದ ಅರ್ಚಕರಹಳ್ಳಿಯಿಂದ ಕೆಂಗೇರಿಯ ಬಳಿಯ ಭೀಮನ ಕುಪ್ಪೆ ಗ್ರಾಮಕ್ಕೆ ಸ್ಥಳಾಂತರಿಸಲು ತೀಮರ್ಾನ ತೆಗೆದುಕೊಂಡಿತ್ತು. ಈ ಕ್ರಮ ಮತ್ತೆ ಜೆಡಿಎಸ್ ನಾಯಕರನ್ನು ಕೆರಳುವಂತೆ ಮಾಡಿದೆ. ಜತೆಗೆ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡರು ತಮ್ಮ ಗಮನಕ್ಕೆ ತಾರದೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿಕೆ ನೀಡಿರುವುದು ಸ್ಥಳಾಂತರದ ವಿಷಯದಲ್ಲಿ ಸಕರ್ಾರಕ್ಕೇ ಗೊಂದಲವಿದೆ ಎಂಬಂತಾಗಿದೆ. ಆದ್ದರಿಂದಲೇ ಆಗಸ್ಟ್ 15ರೊಳಗೆ ಈ ಬಗ್ಗೆ ಸಕರ್ಾರ ಸ್ಪಷ್ಟನೆ ನೀಡಬೇಕೆಂದು ಜೆಡಿಎಸ್ ಆಗ್ರಹಿಸಿದೆ. ಬೈಟ್; ಹೆಚ್.ಸಿ. ಬಾಲಕೃಷ್ಣ, ಮಾಗಡಿ ಶಾಸಕ ಟಿಸಿಆರ್: ವಾಯ್ಸ್ ಓವರ್ 2: ಒಂದು ವೇಳೆ ಸಕರ್ಾರ ಈ ಗೊಂದಲವನ್ನು ಬಗೆಹರಿಸದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಆಗಸ್ಟ್ 15 ರಂದು ಧ್ವಜಾರೋಹಣಕ್ಕೆ ಅವಕಾಶ ಕೊಡುವುದಿಲ್ಲ. ಜತೆಗೆ ಜೆಡಿಎಸ್ ಬೀದಿಗಿಳಿದು ಉಗ್ರ ಹೋರಾಟ ನಡೆಸುವುದೆಂದು ಬಾಲಕೃಷ್ಣ ಎಚ್ಚರಿಸಿದ್ದಾರೆ.

High court orders not to touch Suhail Baig’s land


ರಿಪೋರ್ಟರ್: ಎಂ. ಎನ್. ಚಂದ್ರೇಗೌಡ
ಸ್ಲಗ್: ನೈಸ್ ಕೇಸ್
ಡೇಟ್: 28- 07- 2010

ಆಂಕರ್: ಬೆಂಗಳೂರಿನ ಭನ್ನೇರುಘಟ್ಟ ಸಮೀಪದ ಗೊಟ್ಟಿಗೆರೆಯ ಸೊಹೇಲ್ ಬೇಗ್ ಎಂಬುವರ ಭೂಮಿಯನ್ನು ಮುಂದಿನ ಆದೇಶ ನೀಡುವವರೆಗೆ ಯಾವುದೇ ಕಾರಣಕ್ಕೂ ಪೆರಿಫರಲ್ ರಸ್ತೆ ನಿಮರ್ಾಣ್ಕಕ್ಕಾಗಿ ಕೆಐಎಡಿಬಿ ವಶಕ್ಕೆ ತೆಗೆದುಕೊಳ್ಳಬಾರದೆಂದು ಹೈಕೋರ್ಟ ತುತರ್ು ಆದೇಶ ಹೊರಡಿಸಿದೆ. ನ್ಯಾಯಮೂತರ್ಿ ರಾಮ್ಮೋಹನ್ರೆಡ್ಡಿ ಈ ಆದೇಶ ಹೊರಡಿಸಿದ್ದು ನೈಸ್ ಕಂಪನಿಯಾಗಲಿ ಕೆಐಎಡಿಬಿಯಾಗಲಿ ಕೋರ್ಟ ಆದೇಶ ಉಲ್ಲಂಘಿಸಿ ಬೇಗ್ ಜಮೀನಿನ ವಶಕ್ಕೆ ಮುಂದಾಗಬಾರದೆಂದು ಆದೇಶಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಹೈಕೋರ್ಟ ಮಧ್ಯಂತರ ಆದೇಶ ನೀಡಿ ಪೆರಿಫೆರಲ್ ರಸ್ತೆ ನಿಮರ್ಾಣಕ್ಕೆ ಸಂಬಂಧಿಸಿದಂತೆ ಸೊಹೇಲ್ ಬೇಗ್ರ ಜಮೀನಿನಲ್ಲಿರುವ ಯಾವುದೇ ಕಟ್ಟಡಗಳನ್ನು ಧ್ವಂಸಗೊಳಿಸಬಾರದೆಂದು ನಿದರ್ೇಶನ ನೀಡಿದ್ದರು. ಇಂದು ಆ ಆದೇಶ ಲಿಖಿತ ರೂಪದಲ್ಲಿ ಹೊರಬೀಳುವ ಮುನ್ನವೇ ನೈಸ್ ಕಂಪನಿ ಬುಲ್ಡೋಜರ್ಗಳನ್ನು ಗೊಟ್ಟಿಗೆರೆಗೆ ತೆಗೆದುಕೊಂಡು ಹೋಗಿ ಸೊಹೇಲ್ ಬೇಗ್ರ ಜಮೀನು ವಶಕ್ಕೆ ಮುಂದಾಗಿತ್ತು. ಇದನ್ನು ವಿರೋಧಿಸಲು ಸಾವಿರಾರು ರೈತರು ಅಲ್ಲಿ ಜಮಾಯಿಸಿದ್ದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿಮರ್ಾಣವಾಗಿತ್ತು.

ಎವಿ ಫಾಲೋಸ್……………

High court dismisses NICE petition, VIjayaraghavan smiles

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ
ಸ್ಲಗ್: ನೈಸ್ ಕೇಸ್
ಡೇಟ್: 28- 07- 2010

ಆಂಕರ್:
ಬಿಎಂಐಸಿ ಪೆರಿಫೆರಲ್ ರಸ್ತೆ ನಿಮರ್ಾಣಕ್ಕಾಗಿ ಗೊಟ್ಟಿಗೆರೆ ನಿವಾಸಿ ವಿಜಯರಾಘವನ್ ಭೂಮಿಯನ್ನು ಕೂಡಲೇ ವಶಕ್ಕೆ ತೆಗೆದುಕೊಳ್ಳಲು ಅವಕಾಶ ಮಾಡಿಕೊಡುವಂತೆ ಕೋರಿ ನೈಸ್ ಕಂಪನಿ ಸಲ್ಲಿಸಿದ್ದ ತಡೆಯಾಜ್ಞೆ ತೆರವುಗೊಳಿಸುವ ಅಜರ್ಿಯನ್ನು ಹೈಕೋರ್ಟ ಇಂದು ವಜಾ ಮಾಡಿದೆ. ಈ ಪ್ರಕರಣದಲ್ಲಿ ಇನ್ಫೋಸಿಸ್, ಶೋಭಾ ಡೆವಲಪರಸ್ ಸೇರಿದಂತೆ ಒಟ್ಟು 8 ಕಂಪನಿಗಳಿಗೆ ಇಂದು ನೋಟಿಸು ಜಾರಿಗೊಳಿಸಲಾಗಿದೆ.

ಫ್ಯಾಕೇಜ್ ಫಾಲೋಸ್…..

ವಾಯ್ಸ್ ಓವರ್ 1:
ಬಿಎಂಐಸಿ ಪೆರಿಫರಲ್ ರಸ್ತೆ “ಎ” ಸೆಕ್ಟರ್ನ ಲಿಂಕ್ ಮಾಡಲು ಗೊಟ್ಟಿಗೆರೆಯ ವಿಜಯರಾಘವನ್ರ ಸುಮಾರು 10 ಎಕರೆ ಭೂಮಿ ಅವಶ್ಯಕತೆ ಇದೆ ಎಂದು ಕೆಐಎಡಿಬಿ ಭೂಸ್ವಾಧೀನಕ್ಕೆ ಮುಂದಾಗಿತ್ತು. ನೈಸ್ ನಿಮರ್ಿಸುತ್ತಿರುವ ಪೆರಿಫೆರಲ್ ರಸ್ತೆ ಮೂಲ ಒಪ್ಪಂದ ರಸ್ತೆ ಅಲೈನ್ಮೆಂಟ್ಗೆ ಪೂರಕವಾಗಿಲ್ಲ ಎಂದು ವಿಜಯರಾಘವನ್ ಪರ ಮಾಜಿ ಅಡ್ವೋಕೇಟ್ ಜನರಲ್ ಉದಯ್ಹೊಳ್ಳ ವಾದಿಸಿದ್ದರು. ಆದರೆ ವಿಜಯರಾಘವನ್ಗೆ ಸೇರಿದ ಸವರ್ೆ ನಂ 104/226 ರ ಭೂಮಿ ಪೆರಿಫರಲ್ ರಸ್ತೆ ನಿಮರ್ಾಣಕ್ಕೆ ಅತ್ಯವಶ್ಯಕವಾಗಿ ಬೇಕಾಗಿದೆ ಎಂದು ವಾದಿಸಿ ನೈಸ್ ಕಂಪನಿ ಕೋರ್ಟ ಮೆಟ್ಟಿಲು ಏರಿತ್ತು. ಈ ಪ್ರಕರಣದಲ್ಲಿ ಹೈಕೋರ್ಟ ತಡೆಯಾಜ್ಞೆ ನೀಡಿತ್ತು. ಇಂದು ವಿಚಾರಣೆ ಮುಂದುವರೆಸಿದ ನ್ಯಾಯಮೂತರ್ಿ ರಾಮ್ಮೋಹನ್ ರೆಡ್ಡಿ, ನೈಸ್ ಕಂಪನಿಯನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಮೂಲ ಒಪ್ಪಂದದ ಅಲೈನ್ಮೆಂಟ್ನಲ್ಲಾಗಲಿ ಅಥವಾ ಓಡಿಪಿ ಅಲೈನ್ಮೆಂಟ್ನಲ್ಲಾಗಲಿ ವಿಜಯರಾಘವನ್ ಭೂಮಿ ಇಲ್ಲದಿರುವುದನ್ನು ಗುರುತಿಸಿದರು. ವಿಜಯರಾಘವನ್ ಭೂಮಿ ರಸ್ತೆ ರ್ಯಾಂಪ್ ನಿಮರ್ಾಣಕ್ಕೆ ಅಗತ್ಯವಿದೆ ಎಂಬ ನೈಸ್ ವಾದವನ್ನು ತಳ್ಳಿಹಾಕಿದರು. ತಡೆಯಾಜ್ಞೆ ತೆರವುಗೊಳಿಸುವಂತೆ ನೈಸ್ ಸಲ್ಲಿಸಿದ್ದ ಅಜರ್ಿಯನ್ನು ವಜಾಗೊಳಿಸಿದರು. ಜತೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಷ್ಠಿತ ಐಟಿ ಕಂಪನಿ ಇನ್ಫೋಸಿಸ್, ಶೋಭಾ ಡೆವಲಪರ್ಸ್ ಸೇರಿದಂತೆ ಒಟ್ಟು 8 ಕಂಪನಿಗಳಿಗೆ ಇಂದು ನೋಟಿಸು ಜಾರಿಗೊಳಿಸಿತು.

–ಎಂ.ಎನ್. ಚಂದ್ರೇಗೌಡ
ಸಮಯ ನ್ಯೂಸ್
ಬೆಂಗಳೂರು 

Minister himself does not know Rajiv Gandhi VV shifting issue

ರಿಪೋರ್ಟರ್: ಎಂ.ಎನ್. ಚಂದ್ರೇಗೌಡ
ಸ್ಲಗ್: ರಾಜೀವ್ ವಿವಿ
ಡೇಟ್:
ಬೆಂಗಳೂರು

ಆಂಕರ್: ವೈದ್ಯಕೀಯ ಸಚಿವರ ಗಮನಕ್ಕೆ ತಾರದೇ ರಾಜೀವ್ಗಾಂಧಿ ವಿವಿಯನ್ನು ರಾಮನಗರದಿಂದ ಕೆಂಗೇರಿಗೆ ಸ್ಥಳಾಂತರಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯದಶರ್ಿ ಐಎಂ ವಿಠ್ಠಲಮೂತರ್ಿ ನೇತೃತ್ವದ ಸಭೆ ತೀಮರ್ಾನ ತೆಗೆದುಕೊಂಡಿದೆ. ಇದಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡ ಆಕ್ಷೇಪ ವ್ಯಕ್ತಪಡಿಸಿದ್ದು ತಮ್ಮ ಗಮನಕ್ಕೆ ಈ ವಿಷಯವನ್ನು ತಾರದೇ ಕ್ರಮ ಕೈಗೊಳ್ಳಲಾಗಿದೆ ಎಂದು ದೂರಿದ್ದಾರೆ.

ಫ್ಯಾಕೇಜ್ ಫಾಲೋಸ್…………

ವಾಯ್ಸ್ ಓವರ್ 1:
ಸುಮಾರು 300 ಕೋಟಿ ರುಪಾಯಿ ವೆಚ್ಚದ ರಾಜೀವ್ಗಾಂಧಿ ವಿವಿಯನ್ನು ರಾಮನಗರದಲ್ಲಿ ಸ್ಥಾಪಿಸಲು ಕ್ರಮಕೈಗೊಂಡಿದ್ದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸಕರ್ಾರ. ಆದರೆ ಸಮ್ಮಿಶ್ರ ಸಕರ್ಾರ ಪತನದ ನಂತರ ಅಸ್ತಿತ್ವಕ್ಕೆ ಬಂದ ಬಿಜೆಪಿ ಸಕರ್ಾರ ರಾಜೀವ್ ಗಾಂಧಿ ವಿವಿಯನ್ನು ರಾಮನಗರದಿಂದ ಬೇರೆಡೆಗೆ ಸ್ಥಳಾಂತರಿಸಲು ಮುಂದಾಗಿತ್ತು. ಈ ವಿಷಯ ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿಗೂ ಕಾರಣವಾಗಿತ್ತು. ಹೆಚ್.ಡಿ. ಕುಮಾರಸ್ವಾಮಿ ಸಕರ್ಾರ ಟೆಂಡರ್ ಕರೆಯದೇ ರಾಜೀವ್ಗಾಂಧಿ ವಿವಿ ನಿಮರ್ಾಣಕ್ಕೆ ಸಂಬಂಧಿಸಿದಂತೆ ಆಂಧ್ರ ಮೂಲದ ಗುತ್ತಿಗೆದಾರರಿಗೆ 37.37 ಕೋಟಿ ರುಪಾಯಿ ಪಾವತಿಸಿದೆ ಎಂದು ಮುಖ್ಯಮಂತ್ರಿಗಳು ಸದಸದಲ್ಲಿಯೇ ಆಕ್ಷೇಪ ವ್ಯಕ್ತಪಡಿಸಿದ್ದರು. ಆನಂತರ ಗುತ್ತಿಗೆದಾರರಿಂದ ಹಣ ವಾಪಸ್ ಪಡೆಯಲು ತೀಮರ್ಾನಿಸಿ ರಾಮನಗರದಲ್ಲಿಯೇ ರಾಜೀವ್ಗಾಂಧಿ ವಿವಿಯನ್ನು ಮುಂದುವರೆಸಲು ನಿರ್ಧರಿಸಲಾಗಿತ್ತು. ಆದರೆ ಇದ್ದಕ್ಕಿದ್ದಂತೆಯೇ ಕಳೆದ 7 ರಂದು ಆರೋಗ್ಯ ಮತ್ತು ಕುಟುಂಬ ಇಲಾಖೆ ಕಾರ್ಯದಶರ್ಿ ಐ.ಎಂ. ವಿಠ್ಠಲಮೂತರ್ಿ ನೇತೃತ್ವದ ಸಭೆ ರಾಜೀವ್ ಗಾಂಧಿ ವಿವಿಯನ್ನು ರಾಮನಗರದ ಅರ್ಚಕರಹಳ್ಳಿಯಿಂದ ಕೆಂಗೇರಿಯ ಬಳಿಯ ಭೀಮನ ಕುಪ್ಪೆ ಗ್ರಾಮಕ್ಕೆ ಸ್ಥಳಾಂತರಿಸಲು ತೀಮರ್ಾನ ತೆಗೆದುಕೊಂಡಿದೆ. ಇದುವರೆಗೆ ರಾಜೀವ್ ಗಾಂಧಿ ವಿವಿ ಸ್ಥಾಪನೆಗೆ ಭೂಮಿಯನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದ್ದರಿಂದಲೇ ವಿವಿಯನ್ನು ಸ್ಥಳಾಂತರಿಸಲು ತೀಮರ್ಾನಿಸಲಾಯಿತೆಂದು ವಿಠ್ಠಲಮೂತರ್ಿ ತಿಳಿಸಿದ್ದಾರೆ. ಇದಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಮ್ಮ ಗಮನಕ್ಕೆ ತಾರದೇ ಹೇಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ. ರಾಜೀವ್ ಗಾಂಧಿ ವಿವಿಯನ್ನು ಸ್ಥಳಾಂತರಿಸಲು ಮೊದಲು ಸಂಬಂಧಪಟ್ಟ ಸಚಿವರು, ಆನಂತರ ಸಚಿವ ಸಂಪುಟ ಸಭೆ ತೀಮರ್ಾನಿಸಬೇಕಾಗುತ್ತದೆ. ಆನಂತರ ವಿಧಾನಸಭೆಯಲ್ಲಿ ವಿವಿ ಕಾಯ್ದೆಗೆ ತಿದ್ದುಪಡಿ ತರಬೇಕಾಗುತ್ತದೆ ಎಂಬುದನ್ನು ಇಲ್ಲಿ ಗಮನಿಸಬಹುದು. ಹೀಗಿದ್ದೂ ವಿಠ್ಠಲ್ಮೂತರ್ಿ ನೇತೃತ್ವದ ಸಭೆ ಈ ಕ್ರಮಕ್ಕೆ ಏಕೆ ಮುಂದಾಯಿತು ಎಂಬುದೇ ಪ್ರಶ್ನಾರ್ಹವಾಗಿದೆ.

–ಎಂ. ಎನ್.ಪ ಚಂದ್ರೇಗೌಡ
ಸಮಯ ನ್ಯೂಸ್
ಬೆಂಗಳೂರು

BJP high command divides over Reddy brothers

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ ಸ್ಲಗ್:

ಬಿಜೆಪಿ ಹೈ ಕಮಾಂಡ್ ಡೇಟ್: 27-07-2010 ಬೆಂಗಳೂರು. ಆಂಕರ್: ಬಳ್ಳಾರಿಯ ರೆಡ್ಡಿ ಸಹೋದರರನ್ನು ಸಂಪುಟದಿಂದ ಕೈಬಿಡುವ ಬಗ್ಗೆ ಬಿಜೆಪಿ ಹೈಕಮಾಂಡ್ನಲ್ಲೇ ಪರ – ವಿರೋಧಿ ಗುಂಪುಗಳಾಗಿವೆ ಎಂದು ಉನ್ನತ ಮೂಲಗಳು ತಿಳಿಸಿವೆ. ಒಂದು ಕಡೆ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ರೆಡ್ಡಿ ಬ್ರದರ್ಸಗಳನ್ನು ಕೈಬಿಡಲು ಆಸಕ್ತಿ ತೋರಿದ್ದರೆ, ಸುಷ್ಮಾ ಸ್ವರಾಜ್ ಬಣ ಯಾವುದೇ ಕಾರಣಕ್ಕೂ ರೆಡಿ ಬ್ರದರ್ಸಗಳ ಕೈಬಿಡುವ ಪ್ರಶ್ನೆಯೇ ಇಲ್ಲವೆಂದು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿದೆ ಎಂದು ಮೂಲಗಳು ತಿಳಿಸಿವೆ. ಒಟ್ಟಿನಲ್ಲಿ ರಾಜ್ಯ ಬಿಜೆಪಿಯ ರಾಜಕೀಯ ಕೆಸೆರೆರಚಾಟ ಮತ್ತೊಮ್ಮೆ ಬೆಂಗಳೂರು ಬಿಟ್ಟು ಈಗ ದೆಹಲಿಗೆ ಸ್ಥಳಾಂತರವಾದಂತಾಗಿದೆ. ಫ್ಯಾಕೇಜ್ ಫಾಲೋಸ್……… ವಾಯ್ಸ್ ಓವರ್ 1: ಕಾಂಗ್ರೆಸ್ನ ಪಾದಯಾತ್ರೆಯಿಂದ ಕಂಗೆಟ್ಟು ದೆಹಲಿ ಸೇರಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಹೇಗಾದರೂ ಮಾಡಿ ಕಾಂಗ್ರೆಸ್ನ ಪಾದಯಾತ್ರೆಗೆ ತಕ್ಕ ರಾಜಕೀಯ ಪರಿಹಾರ ಕಂಡುಕೊಳ್ಳಬೇಕೆಂದು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಅವರ ಜತೆ ಅವರ ನಿಕಟವತರ್ಿ ಸಚಿವರು, ಬೆರಳೆಣಿಕೆಯ ಶಾಸಕರು ದೆಹಲಿಗೆ ಆಗಮಿಸಿದ್ದಾರೆ. ಇನ್ನೂ ಹಲವಾರು ಮಂದಿ ಶಾಸಕರು ಇಂದು ರಾತ್ರಿ ದೆಹಲಿಗೆ ತೆರಳುವ ಸಾಧ್ಯತೆಯೂ ಇದೆ. ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಇತ್ತೀಚೆಗೆ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿಯವರನ್ನು ಭೇಟಿ ಮಾಡಿದ್ದಾಗ ರೆಡ್ಡಿ ಸಹೋದರರನ್ನು ಸಂಪುಟದಿಂದ ಕೈಬಿಡದಿದ್ದರೆ ಕನರ್ಾಟಕದಲ್ಲಿ ಪಕ್ಷದ ವರ್ಚಸ್ಸಿಗೆ ಭಾರಿ ಹೊಡೆತ ಬೀಳಲಿದೆ. ಆದ್ದರಿಂದ ರೆಡ್ಡಿ ಸಹೋದರರನ್ನು ಸಂಪುಟದಿಂದ ಕೈಬಿಡಲು ತಮ್ಮ ಅನುಮತಿ ಬೇಕೆಂದು ಆಡ್ವಾಣಿಯವರಲ್ಲಿ ಮನವಿ ಮಾಡಿದರೆಂದು ಉನ್ನತ ಮೂಲಗಳು ತಿಳಿಸಿವೆ. ಇದಕ್ಕೆ ಆಡ್ವಾಣಿ ಸಮ್ಮತಿ ಸೂಚಿಸಿದ ಕೂಡಲೇ ಲೋಕಸಭೆಯ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ಇದಕ್ಕೆ ಬಿಲ್ಕುಲ್ ಒಪ್ಪಿಗೆ ಇಲ್ಲವೆಂದು, ಬಿಜೆಪಿ ಕನರ್ಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ರೆಡ್ಡಿ ಸಹೋದರ ಕೊಡುಗೆಯೇ ಕಾರಣ. ಆದ್ದರಿಂದ ಅಂಥಹ ದುಸ್ಸಾಹಸಕ್ಕೆ ಕೈಹಾಕಬಾರೆದೆಂದು ಮುಖ್ಯಮಂತ್ರಿಗಳಿಗೆ ಸೂಚಿಸಿದರೆಂದು ಮೂಲಗಳು ತಿಳಿಸಿವೆ. ಸುಷ್ಮಾ ಅವರ ನಿಲವಿಗೆ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ, ಸಂಸದ ಅನಂತ್ಕುಮಾರ್ ಸಹ ಧನಿಗೂಡಿಸಿದ್ದಾರೆಂದು ಹೇಳಲಾಗಿದೆ. ಹೀಗೆ ರೆಡ್ಡಿ ಸಹೋದರರ ಕೈಬಿಡುವ ಬಗ್ಗೆ ಬಿಜೆಪಿ ಹೈಕಮಾಂಡ್ನಲ್ಲೇ ಪರ ವಿರೋಧ ಉಂಟಾದ ಕೂಡಲೇ ರಾಜ್ಯದ ನಾಯಕರಲ್ಲಿಯೂ ಈ ಬಗ್ಗೆ ಪರ ವಿರೋಧದ ಗುಂಪುಗಳು ಸೃಷ್ಟಿಯಾಗಿವೆ ಎಂದು ಉನ್ನತ ಮೂಲಗಳು ತಿಳಿಸಿವೆ. ಬೈಟ್; ಆರ್. ಅಶೋಕ್, ಸಾರಿಗೆ ಸಚಿವ ಟಿಸಿಆರ್: ವಾಯ್ಸ್ ಓವರ್ 2: ಹೇಗಿದ್ದರೂ ರೆಡ್ಡಿ ಸಹೋದರರ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡೋಣ. ಅಷ್ಟರಲ್ಲಿ ಕಾಂಗ್ರೆಸ್ ಪಾದಯಾತ್ರೆಯ ಪರಿಣಾಮ ಎಲ್ಲವೂ ಗೊತ್ತಾಗಲಿದೆ ಎಂದು ಸ್ವಲ್ಪ ದಿನ ಕಾದು ನೋಡಲು ಉಭಯ ಬಣಗಳ ನಾಯಕರು ತೀಮರ್ಾನಿಸಿದ್ದಾರೆಂದು ಮೂಲಗಳು ತಿಳಿಸಿವೆ. ಈಗ ರೆಡ್ಡಿ ಸಹೋದರರನ್ನು ಕೈಬಿಟ್ಟು ಬೀಸುವ ದೊಣ್ಣೆಗೆ ತಪ್ಪಿಸಿಕೊಳ್ಳಬೇಕು. ಮುಂದೆ ಲೋಕಾಯುಕ್ತ ತನಿಖೆ ಮುಗಿದ ನಂತರ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಅಭಯವನ್ನು ಮುಖ್ಯಮಂತ್ರಿಗಳು ನೀಡಿದರೆಂದು ಮೂಲಗಳು ತಿಳಿಸಿವೆ. ಹೀಗಿದ್ದರೂ ಮುಖ್ಯಮಂತ್ರಿಗಳು ಇನ್ನೂ ಅಲ್ಲೇ ಠಿಕಾಣಿ ಹೂಡಿರುವುದು, ಅವರಿಗೆ ನಿಕಟರಾಗಿರುವ ಉತ್ತರ ಕನರ್ಾಟಕದ ಹಲವಾರು ಶಾಸಕರನ್ನು ಇಂದು ರಾತ್ರಿ ಹಾಗೂ ನಾಳೆ ಬೆಳಿಗ್ಗೆ ದೆಹಲಿಗೆ ಕರೆಸಿಕೊಳ್ಳುತ್ತಿರುವುದು ತೀವ್ರ ಕುತೂಕಲ ಕೆರಳಿಸಿದೆ. ದೆಹಲಿ ಮತ್ತೊಮ್ಮೆ ರೆಡ್ಡಿ ಮತ್ತು ಯಡಿಯೂರಪ್ಪನವರ ಶಕ್ತಿ ಪ್ರದರ್ಶನಕ್ಕೆ ವೇದಿಯಾಗಲಿದೆಯೇ ಎಂಬುದನ್ನು ಕಾದುನೋಡಬೇಕಾಗಿದೆ. –ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್ ಬೆಂಗಳೂರ

NICE case: Including Infosys IT companies dragged to court

ರಿಪೋರ್ಟರ್:

ಎಂ. ಎನ್. ಚಂದ್ರೇಗೌಡ
ಸ್ಲಗ್: ಉದಯ್ ಹೊಳ್ಳ ಕೇಸ್
ಡೇಟ್; 23-07- 2010
ಬೆಂಗಳೂರು

ಆಂಕರ್: ಈ ಹಿಂದೆ ಲೋಕೋಪಯೋಗಿ ಇಲಾಖೆ ಕಾರ್ಯದಶರ್ಿಯಾಗಿದ್ದ ಮೇಜರ್ ರಮೇಶ್ ಅವರ ಮಗ, ಪತ್ನಿ ಸೇರಿದಂತೆ ನೈಸ್ ಕಂಪನಿಯ ಹಲವಾರು ಮಂದಿ ಬೇನಾಮಿ ಹೆಸರಿನಲ್ಲಿ ಭೂಸ್ವಾಧೀನಕ್ಕೆ ನೋಟಿಫೈ ಮಾಡಲಾಗಿದ್ದ ಭೂಮಿಗಳನ್ನು ರೈತರಿಂದ ಖರೀದಿಸಿದ್ದಾರೆ. ಇಡೀ ಬಿಎಂಐಸಿ ಯೋಜನೆಯೇ ದೊಡ್ಡ ವಂಚನೆಯ ಜಾಲವಾಗಿದೆ ಎಂದು ಮಾಜಿ ಅಡ್ವೋಕೇಟ್ ಜನರಲ್ ಉದಯ್ಹೊಳ್ಳ ಇಂದು ಹೈಕೋರ್ಟಗೆ ತಿಳಿಸಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕಿನ ಚಿಕ್ಕತೊಗೂರು ಗ್ರಾಮದ ರಾಮಯ್ಯ ಎಂಬುವರ ರಿಟ್ ಅಜರ್ಿ ವಿಚಾರಣೆ ವೇಳೆ ಹೊಳ್ಳ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಫ್ಯಾಕೇಜ್ ಫಾಲೋಸ್……..

ವಾಯ್ಸ್ ಓವರ್: ಬೆಂಗಳೂರು ಚಿಕ್ಕತೊಗೂರಿನ ರಾಮಯ್ಯ ಎಂಬ ರೈತ ಹೈಕೋರ್ಟಗೆ ರಿಟ್ ಅಜರ್ಿ ಸಲ್ಲಿಸಿ ನೈಸ್ ಪೆರಿಫೆರಲ್ ರಸ್ತೆಗೆ ತಮ್ಮ ಜಮೀನನ್ನು ಕಾನೂನು ಬಾಹಿರವಾಗಿ ಭೂಸ್ವಾಧೀನ ಪಡಿಸಿಕೊಳ್ಳಲು ಕೆಐಎಡಿಬಿ ಕ್ರಮ ಕೈಗೊಂಡಿದೆ. ಮೂಲ ಒಪ್ಪಂದದ ಅಲೈನ್ಮೆಂಟನ್ನು ಬದಲಾಯಿಸಿ ಕ್ಯಾಬಿನೆಟ್ನ ಅನುಮತಿಯಿಲ್ಲದೆ ಜಾರಿಗೊಳಿಸಲಾಗಿರುವ ಓಡಿಪಿ ಯೋಜನೆ ಅಲೈನ್ಮೆಂಟ್ಗೆ ತನ್ನ ಜಮೀನನ್ನು ಸೇರಿಸಿ ಭೂಸ್ವಾಧೀನಕ್ಕೆ ಕ್ರಮಕೈಗೊಳ್ಳಲಾಗಿದೆ. ಆದ್ದರಿಂದ ತನಗೆ ನ್ಯಾಯದೊರಕಿಸಿಕೊಡಬೇಕೆಂದು ನ್ಯಾಯಮೂತರ್ಿ ರಾಮ್ಮೋಹನ್ರೆಡ್ಡಿ ಅವರಿಗೆ ಮನವಿ ಮಾಡಿದ್ದರು.

ಇಂದು ಅಜರ್ಿದಾರರ ಪರ ವಾದಿಸಿದ ಮಾಜಿ ಅಡ್ವೋಕೇಟ್ ಜನರಲ್ ಉದಯ್ಹೊಳ್ಳ, ಇಡೀ ಬಿಎಂಐಸಿ ಯೊಜನೆಯೇ ಒಂದು ದೊಡ್ಡ ಮೋಸದ ಜಾಲ. ಈ ಹಿಂದೆ ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದಶರ್ಿಯಾಗಿದ್ದ ಮೇಜರ್ ರಮೇಶ್ ಅವರೇ ಈಗ ನೈಸ್ ಕಂಪನಿಯಲ್ಲಿ ನಿದರ್ೇಶಕರಾಗಿದ್ದಾರೆ. ಅವರ ಪುತ್ರ ರಾಜೀವ್ ರಮೇಶ್, ಪತ್ನಿ ಶಕುಂತಲಮ್ಮ ಹಾಗೂ ನೈಸ್ ಕಂಪನಿಯ ಆಡಳಿತ ವ್ಯವಸ್ಥಾಪಕ ತಿಪ್ಪಾರೆಡ್ಡಿ ಎಂಬುವರ ಪುತ್ರ ರುದ್ರಗೌಡ್ ಎಂಬುವರು ನೋಟಿಫಿಕೇಷನ್ ಹೊರಡಿಸಿದ್ದ ಒಟ್ಟು 691 ಎಕರೆ ಭೂಮಿಯನ್ನೇ ರೈತರಿಂದ ಖರೀದಿಸಿದ್ದಾರೆ. ಇದಕ್ಕೆ ಕೆಐಎಡಿಬಿ ಎನ್ಓಸಿಗಳನ್ನು ನೀಡಿದೆ. ಆದ್ದರಿಂದ ಇದೊಂದು ಬಹು ಆಯಾಮದ ಮೋಸದ ಯೋಜನೆಯಾಗಿದೆ ಎಂದು ವಾದಿಸಿದ್ದಾರೆ. ಹಾಗಿದ್ದರೆ ಈ ಸಂಬಂಧ ನಿಮ್ಮ ಬಳಿ ದಾಖಲೆಗಳಿವೆಯೇ ಎಂಬ ಪ್ರಶ್ನೆಗೆ ಹೊಳ್ಳ, ಸುಮಾರು 421 ಎನ್ಓಸಿಗಳನ್ನು, ಇದಕ್ಕೆ ಸಂಬಂಧಿಸಿದ ಕ್ರಯ ಪತ್ರಗಳನ್ನು ಹೈಕೋರ್ಟಗೆ ನೀಡಿದ್ದಾರೆ.
ಇದೇ ಪ್ರಕರಣದಲ್ಲಿ ಇನ್ಫೋಸಿಸ್, ವೆಲಾಂಕನಿ ಇನ್ಪೋಸಿಸ್ ಸಿಸ್ಟಮ್ಸ್, ಹ್ಯುಲೆಟ್ ಫ್ಯಾಕಾರ್ಡ, ಆನ್ಕೊಸ್ ಕೃಷ್ಣ ಎಜುಕೇಷನ್ ಟ್ರಸ್ಟ್, ಅಜ್ಮೀರಾಗ್ರೂಪ್, ಅಜ್ಮೀರಾ ಗ್ರೂಪ್, ಶೋಭಾ ಡೆವಲಪರ್ಸ್ಗೆ ನೋಟಿಸು ಜಾರಿಗೊಳಿಸಲಾಗಿದ್ದು, ನ್ಯಾಯಾಲಯದ ಆದೇಶವಿದ್ದರೂ ಫ್ರೇಮ್ವರ್ಕ ಒಪ್ಪಂದದಲ್ಲಿ ರಸ್ತೆಗೆ ಮೀಸಲಿಟ್ಟಿದ್ದ ಭೂಮಿಯನ್ನು ಕೆಐಎಡಿಬಿಯಿಂದ ಖರೀದಿಸಿ ಈ ಕಂಪನಿಗಳು ಕಾನೂನು ಉಲ್ಲಂಘಿಸಿವೆ ಎಂದು ಆಪಾದಿಸಲಾಗಿದೆ. ಈ ಎಲ್ಲಾ ಕಂಪನಿಗಳ ವಕೀಲರು ಇಂದು ಹೈಕೋರ್ಟಗೆ ಹಾಜರಾಗಿದ್ದರು.

–ಎಂ.ಎನ್. ಚಂದ್ರೇಗೌಡ
ಸಮಯ ನ್ಯೂಸ್
ಬೆಂಗಳೂರು
 

Cabinet expansion/ reshuffle: BJP MLA’s meet on Tuesday


ರಿಪೋರ್ಟರ್: ಎಂ. ಎನ್. ಚಂದ್ರೇಗೌಡ
ಸ್ಲಗ್: ಎಂಎಲ್ಎಗಳ ಡಿಮ್ಯಾಂಡ್ಗಳು
ಡೇಟ್: 23-070 2010
ಬೆಂಗಳೂರು

ಆಂಕರ್: ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲು ಬುಧವಾರ ರಾತ್ರಿ ಸಭೆ ಸೇರಿದ್ದ 22 ಮಂದಿ ಬಿಜೆಪಿ ಶಾಸಕರು ಮತ್ತೆ ಬರುವ ಮಂಗಳವಾರ ಬೆಂಗಳೂರಿನಲ್ಲಿ ಸಭೆ ಸೇರಲು ತೀಮರ್ಾನಿಸಿದ್ದಾರೆ. ಈ ಬಾರಿ 38 ಮಂದಿ ಶಾಸಕರನ್ನು ಈ ಸಭೆಗೆ ಕಲೆಹಾಕಲಾಗುವುದು. ಹಿರಿಯ ಶಾಸಕರಾದ ಅಪ್ಪಚ್ಚು ರಂಜನ್, ಸೊಗಡು ಶಿವಣ್ಣ, ಸಿ.ಟಿ. ರವಿ, ಎ. ನಾರಾಯಣಸ್ವಾಮಿ ಹಾಗೂ ಎ. ರಾಮ್ದಾಸ್ಗೆ ಈ ಬಾರಿ ಸಚಿವ ಸಂಪುಟದಲ್ಲಿ ಸ್ಥಾನ ನೀಡಲೇಬೇಕೆಂದು ಪಟ್ಟು ಹಿಡಿಯಲು ಈ ಶಾಸಕರ ಗುಂಪು ತೀಮರ್ಾನಿಸಿದೆ ಎಂದು ಮೂಲಗಳು ತಿಳಿಸಿವೆ.

ವಾಯ್ಸ್ ಓವರ್:
ಆಶಾಡ ಕಳೆದು ಶ್ರಾವಣದಲ್ಲಿ ಸಚಿವ ಸಂಪುಟ ವಿಸ್ತರಣೆ ಗ್ಯಾರಂಟಿಯಾಗುತ್ತಿದ್ದಂತೆಯೇ ಸಚಿವ ಸ್ಥಾನ ಆಕಾಂಕ್ಷಿಗಳು ತಮ್ಮ ಲಾಬಿ ಚಟುವಟಿಕೆಗಳನ್ನು ತೀವ್ರಗೊಳಿಸಿದ್ದಾರೆ. ಈ ಸಂಬಂಧ ಕಳೆದ ಬುಧವಾರ ರಾತ್ರಿ ಶಾಸಕರ ಭವನದಲ್ಲಿ ಸಭೆ ಸೇರಿದ್ದ ಶಾಸಕರು, ಬರುವ ಮಂಗಳವಾರ ಮತ್ತೆ ಸಭೆ ಸೇರಲು ತೀಮರ್ಾನಿಸಿದ್ದಾರೆಂದು ಮೂಲಗಳು ತಿಳಿಸಿವೆ. ಈ ಬಾರಿ 38 ಮಂದಿ ಶಾಸಕರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಬಾರಿ 1980 ರಿಂದಲೂ ಪಕ್ಷಕ್ಕಾಗಿ ದುಡಿದಿರುವ ಹಿರಿಯ ಶಾಸಕರಾದ ಅಪ್ಪಚ್ಚು ರಂಜನ್, ಎ.ನಾರಾಯಣಸ್ವಾಮಿ, ಸಿ.ಟಿ. ರವಿ, ಸೊಗಡು ಶಿವಣ್ಣ ಹಾಗೂ ಎ. ರಾಮ್ದಾಸ್ಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲೇಬೇಕೆಂದು ಎಲ್ಲಾ ಶಾಸಕರು ಪಟ್ಟು ಹಿಡಿಯಲಿದ್ದಾರೆಂದು ಮೂಲಗಳು ತಿಳಿಸಿವೆ. ಸಂಸ್ಕಾರ, ತಾಳ್ಮೆ ಇದುವರೆಗೆ ತಿರಸ್ಕಾರಕ್ಕೆ ಒಳಗಾಗಿವೆ. ಈ ಬಾರಿ ತನಗೆ ಸಂಪುಟದಲ್ಲಿ ಸ್ಥಾನ ನೀಡದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಶಾಸಕ ಎ. ನಾರಾಯಣಸ್ವಾಮಿ ಸಮಯ ನ್ಯೂಸ್ಗೆ ತಿಳಿಸಿದ್ದಾರೆ. ಉಳಿದಂತೆ ವಿಧಾನಪರಿಷತ್ನಿಂದ ಮಂತ್ರಿಗಳಾಗಿರುವ ವಿ.ಎಸ್. ಆಚಾರ್ಯ, ರಾಮಚಂದ್ರಗೌಡರನ್ನು ಕೈಬಿಡಬೇಕು. ವಿಧಾನಸಭೆಯಿಂದ ಸಚಿವರಾಗಿರುವ ಅರವಿಂದ ಲಿಂಬಾವಳಿ ಅವರನ್ನು ಕೈಬಿಟ್ಟು ಬೆಂಗಳೂರಿನ ಸಚಿವರ ಕೋಟಾವನ್ನು ಸರಿದೂಗಿಸಿಕೊಳ್ಳಬೇಕು. ಪಕ್ಷೇತರರಾಗಿ ಆಯ್ಕೆಯಾಗಿ ಸಚಿವರಾಗಿರುವ ನರೇಂದ್ರಸ್ವಾಮಿ, ವೆಂಕಟರಮಣಪ್ಪ, ಡಿ. ಸುಧಾಕರ್ರನ್ನು ಕೈಬಿಡಬೇಕು. ಪಂಚಮಶಾಲಿ ಲಿಂಗಾಯಿತ ಪಂಗಡಕ್ಕೆ ಸೇರಿರುವ ಸಚಿವ ಮುರುಗೇಶ್ ನಿರಾಣಿ ಅವರನ್ನು ಕೈಬಿಟ್ಟು ಮತ್ತೊಬ್ಬರಿಗೆ ಅವಕಾಶ ನೀಡಬೇಕು. ಇವಿಷ್ಟು ಈ ಶಾಸಕರ ಬೇಡಿಕೆ. ಈ ಬೇಡಿಕೆಗಳು ಈಡೇರದಿದ್ದರೆ ಬಂಡಾಯದ ಬಾವುಟ ಹಾರಿಸಲು ಈ ಶಾಸಕರ ಪಡೆ ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ. ತಮ್ಮ ಗುಂಪಿಗೆ ಸಚಿವ ರೇಣುಕಾಚಾರ್ಯ ನೇತೃತ್ವದ 12 ಮಂದಿ ಶಾಸಕರ ಗುಂಪು ಸಹ ಬೆಂಬಲ ನೀಡಲಿದೆ ಎಂದು ಈ ಗುಂಪಿನ ನೇತೃತ್ವ ವಹಿಸಿರುವ ಶಾಸಕರೊಬ್ಬರು ಸಮಯ ನ್ಯೂಸ್ಗೆ ತಿಳಿಸಿದ್ದಾರೆ. ಸಚಿವ ಸ್ಥಾನ ಆಕಾಂಕ್ಷಿಗಳಾಗಿರುವ ವಿಮಲಾಗೌಡ, ಶಂಕರಲಿಂಗೇಗೌಡ, ಸಿ.ಎಚ್. ವಿಜಯಶಂಕರ್ ಸಹ ಈಗ ಲಾಭಿ ನಡೆಸುತ್ತಾರ ಹೇಗೆ ಎಂಬುದನ್ನು ಕಾದು ನೋಡಬೇಕಾಗಿದೆ. ಮುಖ್ಯಮಂತ್ರಿಗಳು ಈ ಲಾಬಿಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದೇ ತೀವ್ರ ಕುತೂಹಲ ಕೆರಳಿಸಿದೆ.

—ಎಂ.ಎನ್. ಚಂದ್ರೇಗೌಡ
ಸಮಯ ನ್ಯೂಸ್
ಬೆಂಗಳೂರು

  • ಪುಟಗಳು

  • Flickr Photos

  • ಜುಲೈ 2010
    ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
     123
    45678910
    11121314151617
    18192021222324
    25262728293031
  • ವಿಭಾಗಗಳು