ಕೆಐಎಡಿಬಿ ಮೂಲಕ ನೈಸ್ ಕಂಪನಿ ಮಾಡುತ್ತಿರುವ ದಬ್ಬಾಳಿಕೆ ಮುಂದುವರೆದಿde

ಕೆಐಎಡಿಬಿ ಮೂಲಕ ನೈಸ್ ಕಂಪನಿ ಮಾಡುತ್ತಿರುವ ದಬ್ಬಾಳಿಕೆ ಮುಂದುವರೆದಿದ್ದು ಬೆಂಗಳೂರಿನ ಪಿಇಎಸ್ ಕಾಲೇಜಿನ ಬಳಿ ಖಾಸಗಿ ವ್ಯಕ್ತಿಯೊಬ್ಬರ ಜಮೀನನನ್ನು ಬಲವಂತವಾಗಿ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ವಿಚಾರಿಸಲು ಹೋದ ಭೂಮಿಯ ಮಾಲೀಕರ ವಿರುದ್ಧವೇ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ದಬ್ಬಾಳಿಕೆ ನಡೆಸಲಾಗಿದೆ. ಜಮೀನು ಇಲ್ಲಾ, ಪರಿಹಾರವೂ ಇಲ್ಲದೇ ಒದ್ದಾಡುತ್ತಿರುವ ರೈತ ಕುಟುಂಬ ಈಗ ಜೀವ ಬೆದರಿಕೆಯಿಂದ ಬದುಕಬೇಕಾದ ಪರಿಸ್ಥಿತಿ ನಿಮರ್ಾಣವಾಗಿದೆ.

 ನೈಸ್ ಸಂಸ್ಥೆ ಬೆಂಗಳೂರು ಸುತ್ತ ನಿಮರ್ಿಸುತ್ತಿರುವ ಪೆರಿಫೆರಲ್ ರಿಂಗ್ ರಸ್ತೆ ನಿಮರ್ಾಣದ ಸಂದರ್ಭದಲ್ಲಿ ಆರ್ ಅಂಡ್ ಆರ್ ಪ್ಯಾಕೇಜ್ನ್ನು ಜಾರಿಗೊಳಿಸಿ ಆ ಮೂಲಕವೇ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಕೊಡಬೇಕು. ಆವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. 10 ಕ್ಕಿಂತ ಹೆಚ್ಚು ಕುಟುಂಬಗಳಿದ್ದರೆ ಅವರಿಗೆ ಬೇರೆಕಡೆ ವಸತಿ ವ್ಯವಸ್ಥೆ ಮಾಡಿಕೊಟ್ಟು ಅವರನ್ನು ಸ್ಥಳಾಂತರಿಸಿದ ನಂತರ ಭೂಮಿಯನ್ನು ಕೆಐಎಡಿಬಿ ವಶಕ್ಕೆ ತೆಗೆದುಕೊಳ್ಳಬೇಕು. ಆನಂತರವೇ ನೈಸ್ ಸಂಸ್ಥೆಗೆ ಹಸ್ತಾಂತರಿಸಬೇಕೆಂದು 1995 ರಲ್ಲಿಯೇ ಒಪ್ಪಂದ ಮಾಡಿಕೊಳ್ಳಲಾಯಿತು. ಆದರೆ ಆರ್ ಅಂಡ್ ಆರ್ ಫ್ಯಾಕೇಜ್, ನಿಯಮಗಳನ್ನು ಗಾಳಿಗೆ ತೂರಿ ಅದೆಷ್ಟು ರೈತರ ಭೂಮಿ ಕೆಐಎಡಿಬಿ ಮೂಲಕ ನೈಸ್ ಪಾಲಾಯಿತು ಎಂಬುದಕ್ಕೆ ಲೆಕ್ಕವಿಲ್ಲ. ಹೀಗೆ ಯಾವುದೇ ನಿಯಮಗಳನ್ನು ಪಾಲಿಸದೇ ಕೆಐಎಡಿಬಿ ರೈತರ ಭೂಮಿಯನ್ನು ವಶಕ್ಕೆ ತೆಗೆದುಕೊಂಡಿರುವುದಕ್ಕೆ ತಾಜಾ ಉದಾಹರಣೆ ಬಾಬುರೆಡ್ಡಿ ಅವರದು. ಇವರ 40 ಕೋಟಿ ರುಪಾಯಿ ಬೆಲೆ ಬಾಳುವ 7 ಗುಂಟೆ ಜಮೀನು ಪಿಇಎಸ್ ಎಂಜಿನಿಯರಿಂಗ್ ಕಾಲೇಜು ಹಾಗೂ ವಿಪ್ರೋ ಕಚೇರಿ ನಡುವೆ ಬರುತ್ತದೆ. ಇವರಿಗೆ ನೋಟಿಸು ನೀಡದೆ, ಪರಿಹಾರ ವಿತರಿಸದೇ ಕೆಐಎಡಿಬಿ ಇವರ ಜಮೀನನ್ನು ಬಲವಂತವಾಗಿ ಕಿತ್ತುಕೊಂಡಿದೆ. ಬೈಟ್: ಬಾಬುರೆಡ್ಡಿ, ರೈತ, ದೊಡ್ಡತೋಗೂರು ಟಿಸಿಆರ್ ಕ್ಲಿಪ್: ಪಿಇಎಸ್ ಕಾಲೇಜು ಹಾಗೂ ವಿಪ್ರೋ ಕಂಪನಿಗಳನ್ನು ಬಿಟ್ಟು, ಮಧ್ಯದಲ್ಲಿರುವ ನಮ್ಮ ಭೂಮಿಯನ್ನಷ್ಟೇ ಕೆಐಎಡಿಬಿ ಏಕೆ ವಶಪಡಿಸಿಕೊಂಡಿದೆ ಎಂಬುದು ಬಾಬುರೆಡ್ಡಿ ಅವರ ತಕರಾರು. ಭೂಮಿ ವಶಪಡಿಸಿಕೊಳ್ಳುವುದನ್ನು ತಡೆಯಲು ಹೋದ ದಂಪತಿಗಳ ವಿರುದ್ಧ ಈಗ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬೈಟ್: ಬಾಬು ರೆಡ್ಡಿ ಪತ್ನಿ, ಟಿಸಿಆರ್: ಪೊಲೀಸರ ಸರ್ಪಗಾವಲಿನಲ್ಲಿ ಕೆಐಎಡಿಬಿ ಅಧಿಕಾರಿಗಳು ನಿಂತು ತಮ್ಮ ಭೂಮಿ ವಶಪಡಿಸಿಕೊಳ್ಳುವುದನ್ನು ಚಿತ್ರೀಕರಿಸಿಕೊಂಡಿರುವ ದಂಪತಿ ಈಗ ನ್ಯಾಯಕ್ಕಾಗಿ ಹೈಕೋರ್ಟ ಮೆಟ್ಟಿಲು ಏರಿದ್ದಾರೆ. ಆದರೆ ನೂರಾರು ಕೇಸುಗಳನ್ನು ಗೆದ್ದು ಪೆರಿಫರಲ್ ರಸ್ತೆ ನಿಮರ್ಿಸಿರುವ ಅಶೋಕ್ ಖೇಣಿಗೆ ಇವರು ಸವಾಲು ಒಡ್ಡಬಲ್ಲರೇ ಎಂಬುದು ಈಗ ಕುತೂಹಲದ ಪ್ರಶ್ನೆ. ಭೂಮಿಯೂ ಇಲ್ಲಾ, ಪರಿಹಾರವೂ ಇಲ್ಲಾ. ಆದರೆ ಕ್ರಿಮಿನಲ್ ಕೇಸ್ನ್ನು ಹಾಕಿಸಿಕೊಂಡಿರುವ ಬಾಬುರೆಡ್ಡಿ ದಂಪತಿಯ ಬೆಂಬಲಕ್ಕೆ ನಿಲ್ಲುವವರು ಯಾರು? ನ್ಯಾಯಾಲಯವಾದರೂ ಅವರ ಬೆಂಬಲಕ್ಕೆ ನಿಲ್ಲಿವುದೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.

One more denotification case

 ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಡಿನೋಟಿಫೈ ಮಾಡಿರುವ ಮತ್ತೊಂದು ಪ್ರಕರಣ ಹೊರಬಿದ್ದಿದೆ. ಈ ಪ್ರಕರಣದಲ್ಲಿ ಕೆ.ಆರ್. ಪುರಂ ಹೋಬಳಿ ಚಳ್ಳಕೆರೆ ಗ್ರಾಮದಲ್ಲಿ 15 ಗುಂಟೆ ಜಮೀನನ್ನು ಡಿನೋಟಿಫೈ ಮಾಡಲಾಗಿದ್ದು ಇದರಿಂದ ಬಿಡಿಎಗೆ 20 ಕೋಟಿ ರುಪಾಯಿಗೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಬಿಡಿಎ ಬಡಾವಣೆ ನಿಮರ್ಿಸಿ ಅಭಿವೃದ್ಧಿಪಡಿಸಲಾಗಿರುವ ಚಳ್ಳಕೆರೆ ಗ್ರಾಮ ಈಗಿನ ಬಾಣಸವಾಡಿ, ಹೆಣ್ಣೂರು ಬಳಿಯ ಹೆಚ್ಆರ್ಬಿಆರ್ ಲೇಔಟ್ನಲ್ಲಿದ್ದು ಇಲ್ಲಿ ಪ್ರತಿ ಚದರ ಅಡಿಗೆ ಕನಿಷ್ಠವೆಂದರೂ 5000 ಸಾವಿರ ರುಪಾಯಿ ಬೆಲೆ ಇದೆ. ಇಂಥಹ ಬಡಾವಣೆಯಲ್ಲಿ ಮಾಜಿ ಸಂಸತ್ ಸದಸ್ಯೆ ಮೋನಿಕಾ ದಾಸ್ ಹಾಗೂ ಮಾಜಿ ಸಚಿವ ಬಾಬುರಾವ್ ಚೌವ್ಹಾಣ್ಗೆ ಎರಡು ನಿವೇಶನಗಳು ಮಂಜೂರಾಗಿದ್ದವು. ಆದರೆ ಇವರಿಬ್ಬರ ನಿವೇಶನವಿರುವ ಸವರ್ೆ ನಂ 100/1, 100/2 15 ಗುಂಟೆ ಜಮೀನನ್ನು ಮುಖ್ಯಮಂತ್ರಿಗಳು 2010 ರ ಜನವರಿಯಲ್ಲಿ ಡಿನೋಟಿಪೈ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಜಮೀನಿನ ಮಾಲೀಕರು ಕೃಷ್ಣಾರೆಡ್ಡಿ ಹಾಗೂ ಅಕ್ಕಯ್ಯಮ್ಮ. ಡಿನೋಟಿಫೈ ಮಾಡಿದ್ದರಿಂದ ನಿವೇಶನ ಕಳೆದುಕೊಂಡಿರುವ ಮಾಜಿ ಸಂಸದೆ ಹಾಗೂ ಸಚಿವರಿಗೆ ಬೇರೆಡೆ ನಿವೇಶನ ನೀಡಲಾಗಿದೆ.

ಕಂದಾಯ ಸಚಿವ ಕರುಣಾಕರರೆಡ್ಡಿ ಸಕರ್ಾರಿ ಭೂಮಿಯನ್ನು ಮಂಜೂರು ಮಾಡುವಂತೆ ಶಿಫಾರಸ್ಸು

 

ಕಂದಾಯ ಸಚಿವ ಕರುಣಾಕರರೆಡ್ಡಿ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಖಾಸಗಿ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗೆ ಕೋಟ್ಯಾಂತರ ರು ಬೆಲೆ ಬಾಳುವ ಸಕರ್ಾರಿ ಬೂಮಿಯನ್ನು ಮಂಜೂರು ಮಾಡುವಂತೆ ಶಿಫಾರಸ್ಸು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಇವರಿಬ್ಬರೂ ಬೆಂಗಳೂರು ಪೂರ್ವ ತಾಲೂಕಿನ ಮಾರತ್ತಳ್ಳಿ ಬಳಿ ಸುಮಾರು 75 ಕೋಟಿ ರುಪಾಯಿ ಬೆಲೆ ಬಾಳುವ ಸಕರ್ಾರಿ ಭೂಮಿಯನ್ನು ಮಂಜೂರು ಮಾಡಲು ಶಿಫಾರಸ್ಸು ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಯ ನ್ಯೂಸ್ಗೆ ಎಲ್ಲಾ ದಾಖಲೆಗಳು ಲಭ್ಯವಾಗಿವೆ. ಫ್ಯಾಕೇಜ್ ಫಾಲೋಸ್………… ವಾಯ್ಸ್ ಓವರ್ 1: ಇದು ಬೆಂಗಳೂರು ಪೂರ್ವ ತಾಲೂಕು ಮಾರತ್ತಳ್ಳಿ. ಈ ಸ್ಥಳದ ಸುತ್ತೆಲ್ಲಾ ಬರೀ ಐಟಿ, ಬಿಟಿ ಕಂಪನಿಗಳೇ ತಲೆ ಎತ್ತಿವೆ. ಇಲ್ಲಿನ ಪ್ರತಿ ಇಂಚಿಂಚು ಭೂಮಿಗೆ ಭಾರಿ ಬೆಲೆ ಇದೆ. ವಿಮಾನ ನಿಲ್ದಾಣ ಹತ್ತಿರವಿರುವುದರಿಂದ ಚಿನ್ನವೇನು ವಜ್ರದ ಬೆಲೆ ಇಲ್ಲಿನ ಭೂಮಿಗೆ. ಹೀಗಿರುವಾಗ ಮಾರತ್ತಳ್ಳಿಯಲ್ಲಿರುವ ಸವರ್ೆ ನಂ. 33 ರ 16 ಎಕರೆ 17 ಗುಂಟೆ ಜಮೀನು ಖಾಲಿ ಬಿದ್ದಿರುವುದನ್ನು ಕಂಡರೆ ಯಾರು ತಾನೆ ಸುಮ್ಮನಿರುತ್ತಾರೆ. ಅದಕ್ಕೆ ನಮ್ಮ ಕಂದಾಯ ಸಚಿವ ಕರುಣಾಕರರೆಡ್ಡಿ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಈ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗೆ ಮಂಜೂರು ಮಾಡಲು ಮುಂದಾಗಿದ್ದಾರೆ. ಈ ಸಂಬಂಧ ಈಗಾಗಲೇ ಇವರುಗಳು ಸ್ಥಳಿಯ ತಹಸೀಲ್ದಾರ್ಗೆ ಶಿಫಾರಸ್ಸು ಪತ್ರ ಸಹ ಬರೆದಿದ್ದಾರೆ. ಫ್ಲೋ………………..ಡಾಕುಮೆಂಟ್ ವಿಷುಯಲ್ಸ್: ಬೈಟ್: ಮುನಿವೀರಪ್ಪ, ದಲಿತ ಮುಖಂಡ ವಾಯ್ಸ್ ಓವರ್ 2: ಹೀಗೆ ಸಕರ್ಾರಿ ಭೂಮಿ ಕಂಡವರ ಪಾಲಾಗುವುದನ್ನು ತಡೆಯಲು ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ ಮುನಿವೀರಪ್ಪ. ಈ ಭೂಮಿಯ ಇತಿಹಾಸವನ್ನ ಅವರೇ ಹೇಳುತ್ತಾರೆ ಕೇಳಿ. ಬೈಟ್: ವಾಯ್ಸ್ ಓವರ್ 2: ಡಿನೊಟಿಫಿಕೇಷನ್ ದಂಧೆ, ಕೆಐಎಡಿಬಿ ಭೂ ಮಂಜೂರಾತಿ ವಿಷಯಗಳಲ್ಲಿ ಬ್ಯುಸಿಯಾಗಿರುವ ಮುಖ್ಯಮಂತ್ರಿಗಳು ಈಗಲಾದರೂ ಈ ಕಡೆ ಗಮನಹರಿಸುತ್ತಾರಾ, ಸಕರ್ಾರಿ ಭೂಮಿಯನ್ನು ಉಳಿಸಲು ಕ್ರಮ ಕೈಗೊಳ್ಳುತ್ತಾರಾ ಎಂಬುದನ್ನು ನಾವುಗಳು ಕಾದು ನೋಡಬೇಕಾಗಿದೆ.

ಯಡಿಯೂರಪ್ಪನವರಿಗೆ ಮೂರು ಷರತ್ತುಗಳನ್ನು ವಿಧಿಸಿ ಅಧಿಕಾರದಲ್ಲಿ ಮುಂದುವರೆಯಲು ನಿಶಾನೆ

 ಸಿಎಂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಮೂರು ಷರತ್ತುಗಳನ್ನು ವಿಧಿಸಿ ಅಧಿಕಾರದಲ್ಲಿ ಮುಂದುವರೆಯಲು ಬಿಜೆಪಿ ಹೈಕಮಾಂಡ್ ಹಸಿರು ನಿಶಾನೆ ತೋರಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಜಿಲ್ಲಾ ಪಂಚಾಯ್ತಿ ಚುನಾವಣೆ ನಂತರ ಸ್ವಯಂನ ಅಧಿಕಾರ ತ್ಯಜಿಸಬೇಕು. ಇಲ್ಲವಾದರೆ ಕೇಂದ್ರದಿಂದ ಆಗಮಿಸುವ ಪಕ್ಷದ ಆಂತರಿಕ ವಿಚಾರಣಾ ತಂಡದ ವರದಿ ಮುಖ್ಯಮಂತ್ರಿಗಳಿಗೆ ತದ್ವಿರುದ್ಧವಾಗಿ ಬಂದರೆ ತಕ್ಷಣವೇ ಅಧಿಕಾರದಿಂದ ನಿರ್ಗಮಿಸಬೇಕೆಂಬ ಷರತ್ತುಗಳನ್ನು ಮುಖ್ಯಮಂತ್ರಿಗಳಿಗೆ ವಿಧಿಸಲಾಗಿದೆ ಎಂದು ಹೇಳಲಾಗಿದೆ.

ಫ್ಯಾಕೇಜ್ ಫಾಲೋಸ್………….. ವಾಯ್ಸ್ ಓವರ್ 1:

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ವಿರುದ್ಧ ಹೈಕಮಾಂಡ್ನ ಬಹುತೇಕ ಎಲ್ಲಾ ನಾಯಕರು ಇದ್ದಾಗಲೇ ಅವರಿಗೆ ಅಧಿಕಾರದಲ್ಲಿ ಮುಂದುವರೆಯಲು ಅವಕಾಶ ಸಿಕ್ಕಿದ್ದಾದರೂ ಹೇಗೆ ಎಂಬ ಚಚರ್ೆ ರಾಜಕೀಯ ವಲಯದಲ್ಲಿ ಆರಂಭವಾಗಿದೆ. ಯಡಿಯೂರಪ್ಪನವರಿಗೆ ಜೀವದಾನ ಸಿಗಲು ಪ್ರಮುಖವಾಗಿ ಆರ್ಎಸ್ಎಸ್ ಕಾರಣ ಎಂದು ಹೇಳಲಾಗುತ್ತಿದ್ದು ಮೈ.ಚ. ಜಯದೇವ್ ಈ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆಂದು ಮೂಲಗಳು ತಿಳಿಸಿವೆ. ಹಲವಾರು ಕೋರ್ ಕಮಿಟಿ ಸಭೆಗಳು, ಗುಪ್ತ ಸಮಾಲೋಚನಾ ಸಭೆಗಳು, ಸಂಸದೀಯ ಮಂಡಳಿ ಸಭೆಯಲ್ಲಿ ಯಡಿಯೂರಪ್ಪ ರಾಜೀನಾಮೆ ಕೊಡುವುದೇ ಸರಿಯಾದ ದಾರಿ ಎಂದು ಅಭಿಪ್ರಾಯ ವ್ಯಕ್ತವಾದರೂ ಯಡಿಯೂರಪ್ಪ ಬಚಾವಾಗಿದ್ದಾರೆ. ಬೀಸಿದ ದೊಣ್ಣೆಗೆ ಸದ್ಯಕ್ಕೆ ತಪ್ಪಸಿಕೊಂಡಿದ್ದಾರೆ. ಮ.ಚ. ಜಯದೇವ್, ನಾಗಪುರಕ್ಕೆ ತೆರಳಿ ಆರ್ಎಸ್ಎಸ್ ಹಿರಿಯ ಮುಖಂಡ ಮೋಹನ್ ಭಾಗವತರ್ ಮೇಲೆ ಪ್ರಭಾವ ಬೀರಿದ್ದು ಆ ಬಳಿಕ ನಾಗಪುರಕ್ಕೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಈ ಇಬ್ಬರೂ ಮೊನವೊಲಿಸಿ ಯಡಿಯೂರಪ್ಪನವರಿಗೆ ಜೀವದಾನ ದೊರಕಿಸಿಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಹೀಗಿದ್ದರೂ ಬಿಜೆಪಿ ಹೈಕಮಾಂಡ್, ಮುಖ್ಯಮಂತ್ರಿಗಳಿಗೆ ಮೂರು ಷರತ್ತುಗಳನ್ನು ವಿಧಿಸಿ ಅಧಿಕಾರದಲ್ಲಿ ಮುಂದುವರೆಯಲು ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಲಾಗುತ್ತಿದೆ. ಷರತ್ತುಗಳ ವಿವರ ಇಂತಿದೆ. (ಗ್ರಾಫಿಕ್ ಪಾಯಿಂಟ್ಸ್) 1) ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆ ನಂತರ ಅಧಿಕಾರ ತ್ಯಜಿಸಬೇಕು. 2) ಪಕ್ಷದ ಆಂತರಿಕ ಸಮಿತಿ ತೀಪರ್ು ಸಿಎಂಗೆ ತದ್ದಿರುದ್ಧವಾಗಿ ಬಂದರೆ ಅಧಿಕಾರ ತ್ಯಜಿಸಬೇಕು ಹಾಗೂ 3) ಸದ್ಯಕ್ಕೆ ಯಥಾಸ್ಥಿತಿ ಮುಂದುವರೆಸಿಕೊಂಡು ಹೋಗಬೇಕು. ಸಂಪುಟದಿಂದ ಯಾರನ್ನು ಕೈಬಿಡುವುದು, ಸೇರಿಸಿಕೊಳ್ಳುವುದನ್ನು ಮಾಡಿ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳಬಾರದು. ಹೈಕಮಾಂಡ್ನ ಷರತ್ತುಗಳಿಗೆ ಒಪ್ಪಿ ಸದ್ಯಕ್ಕೆ ಬೀಸುವ ದೊಣ್ಣೆಯಿಂದ ತಲೆ ತಪ್ಪಿಸಿಕೊಂಡಿರುವ ಯಡಿಯೂರಪ್ಪ ಮುಂದೆ ಷರತ್ತುಗಳನ್ನು ಪಾಲಿಸುವರೋ ಇಲ್ಲಾ ಅವುಗಳನ್ನು ತಿರಸ್ಕರಿಸಿ ತಾವು ನಡೆದದ್ದೇ ದಾರಿ ಎಂಬಂತೆ ನಡೆದುಕೊಳ್ಳುತ್ತಾರೋ ಎಂಬುದನ್ನು ಕಾಲವೇ ಹೇಳಬೇಕಾಗಿದೆ. ಏಕೆಂದರೆ ಜಿಲ್ಲಾ ಪಂಚಾಯ್ತಿ ಚುನಾವಣೆ ಡಿಸೆಂಬರ್ನಲ್ಲಿ ನಡೆಯುವುದೇ ಈಗ ಅನುಮಾನವಾಗಿದೆ. –ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್ ಬೆಂಗಳೂರು

ಯಡಿಯೂರಪ್ಪನವರ ಮತ್ತೊಂದು ಸ್ವಜನ ಪಕ್ಷಪಾತದ ಪ್ರಕರಣ ಹೊರಬಿದ್ದಿದೆ

 ಆಂಕರ್: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮತ್ತೊಂದು ಸ್ವಜನ ಪಕ್ಷಪಾತದ ಪ್ರಕರಣ ಹೊರಬಿದ್ದಿದೆ. ಬೆಂಗಳೂರಿನ ಹೊರ ವತರ್ುಲ ರಸ್ತೆಯ ನಾಗವಾರ ಬಳಿ ನಿಮರ್ಿಸಲಾಗಿರುವ ವೈಯ್ಯಾಲಿಕಾವಲ್ ಹೆಚ್ಬಿಸಿಎಸ್ ಲೇಔಟ್ನಲ್ಲಿ ಅವರ ಪುತ್ರರ ಧವಳಗಿರಿ ಪ್ರಾಪಟರ್ೀಸ್ ಕಂಪನಿ ದೊಡ್ಡ ಗಾತ್ರದ ಸೈಟೊಂದನ್ನು ಖರೀದಿಸಿ ಬಿಡಿಎಗೆ ಕೋಟ್ಯಾಂತರ ರುಪಾಯಿ ನಷ್ಟ ಉಂಟುಮಾಡಿದೆ. ಆದರೆ ಈ ವ್ಯವಹಾರದಲ್ಲಿ ಧವಳಗಿರಿ ಪ್ರಾಪಟರ್ೀಸ್ ಸುಮಾರು 17 ಕೋಟಿ ರುಪಾಯಿ ಲಾಭ ಮಾಡಿಕೊಂಡಿದೆ ಎಂದು ಹೇಳಲಾಗಿದೆ. ಫ್ಯಾಕೇಜ್ ಫಾಲೋಸ್………… ವಾಯ್ಸ್ ಓವರ್: ಬೆಂಗಳೂರಿನ ನಾಗವಾರ ಗ್ರಾಮದಲ್ಲಿ ಈ ಹಿಂದೆ ವೈಯ್ಯಾಲಿಕಾವಲ್ ಹೆಚ್.ಬಿ.ಸಿ.ಎಸ್ ಎಂಬ ಖಾಸಗಿ ಬಡಾವಣೆಯೊಂದನ್ನು ನಿಮರ್ಿಸಲಾಗಿತ್ತು. ಈ ಬಡಾವಣೆಯಲ್ಲಿದ್ದ 1 ರಿಂದ 10 ನೇ ನಂಬರಿನ ಸೈಟುಗಳಿಗೆ ಹೊಂದಿಕೊಂಡಂತೆ 18 ಮೀ ರಸ್ತೆಗಾಗಿ ಕಾಯ್ದಿರಿಸಿದ 24684 ಚದರ ಅಡಿ ಖಾಲಿ ಜಾಗವಿತ್ತು. ಈ ಜಾಗವನ್ನು ಈ ಹತ್ತೂ ಸೈಟುಗಳಿಗೆ ಸೇರಿಸಿ ಸೈಟುಗಳ ವಿಸ್ತೀರ್ಣವನ್ನು ವಿಸ್ತರಿಸಲು ಈ ಲೇಔಟ್ನ ಮಾಲೀಕರು ನಿರ್ಧರಿಸಿದ್ದರು. ಇದು ಕಾನೂನು ಬಾಹಿರವಾಗಿದ್ದೂ ಮುಖ್ಯಮಂತ್ರಿಗಳ ಆಣತಿ ಮೇರೆಗೆ ಬಿಡಿಎ 29-03-2010 ರಂದು ಆದೇಶ ಹೊರಡಿಸಿ ರಸ್ತೆ ಜಾಗವನ್ನು ಸೈಟುಗಳಿಗೆ ಸೇರಿಸಲು ಕ್ರಮಕೈಗೊಂಡಿತ್ತು. ಹೀಗೆ ರಚಿತವಾದ ಸೈಟುಗಳಲ್ಲಿ 10 ನೇ ನಂಬರಿನ 40447 ಚದರ ಅಡಿ ಸೈಟನ್ನು 18-06-2010 ರಂದು ಮುಖ್ಯಮಂತ್ರಿಗಳ ಪುತ್ರರ ಒಡತನದ ಧವಳಗಿರಿ ಪ್ರಾಪಟರ್ೀಸ್ ಹಾಗೂ ಡೆವಲಪರ್ಸ್ ಸುಮಾರು 8 ಕೋಟಿ ರುಪಾಯಿಗಳಿಗೆ ಖರೀದಿಸಿತ್ತು. ಹೀಗೆ ಸೈಟುಗಳಿಗೆ ಸೇರಿಸಲಾದ ಜಾಗಕ್ಕೆ ಬಿಡಿಎ ಪ್ರತಿ ಚದರ ಅಡಿಗೆ 27 ರುಪಾಯಿ ಅಭಿವೃದ್ಧಿ ಶುಲ್ಕ ವಿಧಿಸಿ ಲೇಔಟ್ನ್ನು ಅನುಮೋದಿಸಿತ್ತು. ಹೀಗೆ ರಸ್ತೆಗೆ ಮೀಸಲಾಗಿದ್ದ ಜಾಗವನ್ನು ಸೈಟುಗಳಿಗೆ ಸೇರಿಸಲು ಬಿಡಿಎ ಅನುವುಮಾಡಿಕೊಟ್ಟಿದ್ದರಿಂದ ಬಿಡಿಎಗೆ ಅಂದಾಜು 25 ಕೋಟಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಹಾಗೆಯೇ ಕಡಿಮೆ ಬೆಲೆಗೆ ಧವಳಗಿರಿ ಪ್ರಾಪಟರ್ೀಸ್ ಈ ಸೈಟನ್ನು ಖರೀದಿಸಿದ್ದರಿಂದ ಸುಮಾರು 17 ಕೋಟಿ ಲಾಭ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣದಿಂದ ಮುಖ್ಯಮಂತ್ರಿಗಳು ಕೇವಲ ಭೂಮಿ ಡಿನೋಟಿಫೈ, ಮಂಜೂರು ಅಷ್ಟೇ ಮಾಡದೇ ಈ ರೀತಿಯ ಅಮಾಲ್ಗಮೇಷನ್ ಪ್ರಕರಣಗಳಲ್ಲೂ ಕೈಯಾಡಿಸಿರುವುದು ಖಚಿತಪಟ್ಟಿದೆ.

–ಎಂ.ಎನ್. ಚಂದ್ರೇಗೌಡ

 ಸಮಯ ನ್ಯೂಸ್ ಬೆಂಗಳೂರು.

ಹೆಚ್.ಡಿ. ಕುಮಾರಸ್ವಾಮಿ ಏಕಾಂಗಿಯಾಗಿ ಹೋರಾಡಿ ರಾಜ್ಯ ರಾಜಕೀಯದಲ್ಲಿ ಹೀರೋ ಆಗಿ ಹೊರಹೊಮ್ಮಿದ್ದಾರೆ

ಆಂಕರ್: ಇಡೀ ಕಾಂಗ್ರೆಸ್ ಪಕ್ಷ ಇಂದು ಕೈಕಟ್ಟಿ ಕುಳಿತು ನೋಡುತ್ತಿರುವಂತೆಯೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಏಕಾಂಗಿಯಾಗಿ ಹೋರಾಡಿ ಬಿಜೆಪಿ ಸಕರ್ಾರವನ್ನು ಇಕ್ಕಟ್ಟಿಗೆ ಸಿಕ್ಕಿಸಿ ಹಾಕಿದ್ದಾರೆ. ಈ ಮೂಲಕ ನಾಯಕತ್ವ ಬದಲಾವಣೆಗೆ ವೇದಿಕೆ ಸೃಷ್ಟಿಸಿ ರಾಜ್ಯ ರಾಜಕೀಯದಲ್ಲಿ ಹೀರೋ ಆಗಿ ಹೊರಹೊಮ್ಮಿದ್ದಾರೆ. ಸಕರ್ಾರದ ಒಂದೊಂದೇ ಅವ್ಯವಹಾರದ ದಾಖಲೆಗಳನ್ನು ಹೊರತೆಗೆದು ಕುಮಾರಸ್ವಾಮಿ ಮಾಡಿದ ಹೊಸ ಬಗೆಯ ರಾಜಕೀಯ ನೋಡಿ ಕಾಂಗ್ರೆಸ್ ಪಕ್ಷವೇ ಏಕೆ, ಬಿಜೆಪಿ ಪಕ್ಷದ ಶಾಸಕರೇ ಬೆಕ್ಕಸ ಬೆರಗಾಗಿದ್ದಾರೆ. ಈ ಘಟನೆ ರಾಜ್ಯ ರಾಜಕೀಯದಲ್ಲಿ ಹೆಚ್ಡಿಕೆ ಮತ್ತಷ್ಟು ಆಳವಾಗಿ ಬೇರೂರುವಂತೆ ಮಾಡಿದೆ.

ಫ್ಯಾಕೇಜ್ ಫಾಲೋಸ್……………

ವಾಯ್ಸ್ ಓವರ್: ರಾಜ್ಯ ರಾಜಕೀಯದಲ್ಲಿ ಒಬ್ಬ ಮುಖ್ಯಮಂತ್ರಿಯನ್ನು ಕೆಳಗಿಳಿಸಲು ಪ್ರತಿ ಪಕ್ಷದ ನಾಯಕರೊಬ್ಬರು ಇಷ್ಟೊಂದು ಅಚ್ಚುಕಟ್ಟಾಗಿ ಅವ್ಯವಹಾರದ ದಾಖಲೆಗಳನ್ನು ಜನರ ಮುಂದಿಟ್ಟ ದಾಖಲೆಗಳಿಲ್ಲ. ಈ ಹಿಂದೆ ಮುಖ್ಯಮಂತ್ರಿ ಗುಂಡೂರಾವ್ ಅವರ ವಿರುದ್ಧ ಸತತ ಹೋರಾಟ ನಡೆಸಿದ ಎ.ಕೆ. ಸುಬ್ಬಯ್ಯನವರನ್ನು ಬಿಟ್ಟರೆ ಮತ್ಯಾರೂ ಒಬ್ಬ ಮುಖ್ಯಮಂತ್ರಿಯನ್ನು ಇಷ್ಟು ವ್ಯವಸ್ಥಿತವಾಗಿ ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಲು ಅವ್ಯವಹಾರದ ದಾಖಲೆಗಳನ್ನು ಜನರ ಮುಂದಿಟ್ಟಿರಲಿಲ್ಲ. ರೇವಜಿತು ಹಗರಣ, ಸಾರಾಯಿ ಬಾಟ್ಲಿಂಗ್ ಹಗರಣ, ಹೌಸಿಂಗ್ ಸೊಸೈಟಿ ಹಗರಣಗಳು ಬೆಳಕಿಗೆ ಬಂದಿದ್ದರೂ ಅವುಗಳೆಲ್ಲಾ ಬೇರೆ ಬೇರೆ ಕಾರಣಗಳಿಗೆ ಸುದ್ದಿಯಾಗಿದ್ದವು. ಆದರೆ ಮುಖ್ಯಮಂತ್ರಿಯೊಬ್ಬರನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಲು ಪ್ರತಿಪಕ್ಷದ ನಾಯಕರೊಬ್ಬರು ತಮ್ಮ ದಾಖಲೆಗಳಿಂದಲೇ ಇಕ್ಕಟ್ಟಿಗೆ ಸಿಕ್ಕಿಸಿದ ಪ್ರಕರಣಗಳಾಗಿರಲಿಲ್ಲ. ದೇವೇಗೌಡರ ಸಾಂಪ್ರಾದಾಯಿಕ ರಾಜಕಾರಣದಿಂದ ಹೊರಬಂದು ರೆಸಾರ್ಟ ರಾಜಕಾರಣ ಆರಂಭಿಸಿದ ಹೆಚ್.ಡಿ. ಕುಮಾರಸ್ವಾಮಿ, ಆರ್ಟಿಐ ಕಾಯ್ದೆಯನ್ನು ಬೇರೆ ಯಾವುದೇ ನಾಯಕರಿಗಿಂತ ಅತ್ಯಂತ ಪರಿಣಾಮಕಾರಿಯಾಗಿ ಬಳೆಸಿಕೊಂಡಿದ್ದಾರೆ. ತಮ್ಮ ಕುಟುಂಬಕ್ಕೆ ಹತ್ತಿರವಾಗಿದ್ದ ಆರ್ಟಿಐ ಆಯುಕ್ತರಾಗಿದ್ದ ತಿಪ್ಪೇಸ್ವಾಮಿ ಹಾಗೂ ಈಗ ಹಾಲಿ ಆಯುಕ್ತರಾಗಿರುವ ಡಾ. ಹೆಚ್. ಎನ್. ಕೃಷ್ಣ ಅವರ ಸೇವೆಯನ್ನು ಸರಿಯಾಗಿ ಬಳಸಿಕೊಂಡು ಸಕರ್ಾರವನ್ನು ಬತ್ತಲೆಗೊಳಿಸಿದ್ದಾರೆ. ಈ ಮೂಲಕ ಪ್ರತಿಪಕ್ಷದ ನಾಯಕನೊಬ್ಬ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿದರೆ ಹೇಗೆ ಒಬ್ಬ ಮುಖ್ಯಮಂತ್ರಿಯನ್ನು, ಸಕರ್ಾರವನ್ನು ಎಷ್ಟು ಸುಲಭವಾಗಿ ಅಳ್ಳಾಡಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಜತೆಗೆ ರಾಜ್ಯ ರಾಜಕಾರಣದಲ್ಲಿ ಹೊಸ ತಲೆಮಾರಿನ, ಹೊಸ ಚಿಂತನೆತ ರಾಜಕೀಯ ಪ್ರಯೋಗಗಳನ್ನು ಮಾಡುವ ಭಿನ್ನ ನಾಯಕರಾಗಿ ಹೊರಹೊಮ್ಮಿದ್ದಾರೆ. ಈ ಬೆಳವಣಿಗೆಗಳ ಹಿನ್ನಲೆಯಲ್ಲಿ ಅವರಿಗೆ ಗೊತ್ತಿಲ್ಲದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರಲ್ಲಿ ಅಭಿಮಾನಿಗಳನ್ನು ಸೃಷ್ಟಸಿಕೊಂಡಿದ್ದಾರೆ. ಈ ಬೆಳವಣಿಗೆಗಳು ಹೆಚ್.ಡಿ. ಕುಮಾರಸ್ವಾಮಿಯವರನ್ನು ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಆಳವಾಗಿ ಬೇರೂರುವಂತೆ ಮಾಡಿದೆ. ಆದ್ದರಿಂದಲೇ ಅವರ ಮುಂದೆ ಈಗ ಹಲವಾರು ಆಯ್ಕೆಗಳಿವೆ. ಒಂದು ವೇಳೆ ಯಡಿಯೂರಪ್ಪ ರಹಿತ ಬಿಜೆಪಿ ಸಕರ್ಾರಕ್ಕೆ ಬೆಂಬಲ ನೀಡುವ ಪರಿಸ್ಥಿತಿ ಉದ್ಭವಿಸಿದರೆ ಅದಕ್ಕೂ ಅವರಲ್ಲಿ ಉತ್ತರ ಸಿದ್ಧವಿದೆ.

–ಎಂ.ಎನ್. ಚಂದ್ರೇಗೌಡ
ಸಮಯ ನ್ಯೂಸ್
ಬೆಂಗಳೂರು.

BJP high command officially tells CM to quit

 

ನವೆಂಬರ್ 11 ರಂದು ಅಕರ್ಾವರಿ ಬಡಾವಣೆ ನಿಮರ್ಾಣಕ್ಕಾಗಿ ಭೂಸ್ವಾಧೀನ ಪಡಿಸಿಕೊಂಡಿದ್ದ ಸುಮಾರು 3 ಎಕರೆ 11 ಗುಂಟೆ ಭೂಮಿಯನ್ನು ಡಿನೋಟಿಫೈ ಮಾಡಿ ಆದೇಶ ಹೊರಡಿಸಿದ್ದಾರೆ

 

ಡಿನೋಟಿಫಿಕೇಷನ್ ಹಗರಣಗಣನ್ನು ಒಂದೊಂದನ್ನಾಗಿ ಪ್ರತಿಪಕ್ಷಗಳು ಬಯಲಿಗೆಳೆದು ಗದ್ದಲ ಎಬ್ಬಿಸುತ್ತಿರುವಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀರಾ ಇತ್ತೀಚೆನೆ ಅಂದರೆ ನವೆಂಬರ್ 11 ರಂದು ಅಕರ್ಾವರಿ ಬಡಾವಣೆ ನಿಮರ್ಾಣಕ್ಕಾಗಿ ಭೂಸ್ವಾಧೀನ ಪಡಿಸಿಕೊಂಡಿದ್ದ ಸುಮಾರು 3 ಎಕರೆ 11 ಗುಂಟೆ ಭೂಮಿಯನ್ನು ಡಿನೋಟಿಫೈ ಮಾಡಿ ಆದೇಶ ಹೊರಡಿಸಿದ್ದಾರೆ. ಬೆಂಗಳೂರು ಕೆ.ಆರ್. ಪುರಂ ತಾಲೂಕು ರಾಚೇನಹಳ್ಳಿ ಗ್ರಾಮದ ಸವರ್ೆ ನಂಬರ್ 90/1 ಹಾಗೂ 90/2 ರ ಭೂಮಿಯನ್ನು ಡಿನೋಟಿಫೈ ಮಾಡಲಾಗಿದೆ. ಇದಕ್ಕೆ ಬಿಡಿಎ ವಿಶೇಷ ಭೂಸ್ವಾಧೀನ ಅಧಿಕಾರಿಗಳು ಸಹಿ ಮಾಡಿರುವ ದಾಖಲೆಗಳು ಸಮಯಾ ನ್ಯೂಸ್ಗೆ ಲಭ್ಯವಾಗಿವೆ.

ತಣ್ಣಿರುಬಾವಿಯಲ್ಲಿ ನೀಡಲಾಗಿದ್ದ 34 ಎಕರೆ ಭೂಮಿಯನ್ನು ಕೆಐಎಡಿಬಿ ವಾಪಸ್ಪಡೆದುಕೊಂಡಿದೆ

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ

ಸ್ಲಗ್: ತಣ್ಣೀರುಬಾವಿ

ಡೇಟ್: 19-11-2010

ಬೆಂಗಳೂರು

 ಆಂಕರ್: ಗೋಲ್ಡ್ಫಿಂಚ್ ಹೊಟೇಲ್ ಮಾಲೀಕ ಪ್ರಕಾಶ್ಶೆಟ್ಟಿಗೆ ಮಂಗಳೂರಿನ ತಣ್ಣಿರುಬಾವಿಯಲ್ಲಿ ನೀಡಲಾಗಿದ್ದ 34 ಎಕರೆ ಭೂಮಿಯನ್ನು ಕೆಐಎಡಿಬಿ ವಾಪಸ್ಪಡೆದುಕೊಂಡಿದೆ. ಮುಖ್ಯಮಂತ್ರಿ ಪುತ್ರರೊಬ್ಬರು, ಪ್ರಕಾಶ್ಶೆಟ್ಟಿರೊಂದಿಗೆ ಸೇರಿ ಮಂಗಳೂರಿನ ತಣ್ಣೀರುಬಾವಿಯಲ್ಲಿ ಮನರಂಜನಾ ಹಾಗೂ ಕ್ರೀಡಾ ಪಾರ್ಕ ಒಂದನ್ನು ನಿಮರ್ಿಸಲು ಕೆಐಎಡಿಬಿಯಿಂದ ಭೂಮಿ ಮಂಜೂರು ಮಾಡಿಸಿಕೊಂಡಿದ್ದರು ಎಂಬ ದಟ್ಟ ವದಂತಿ ಹಬ್ಬಿತ್ತು. ಆದರೆ ನಿಗದಿತ ಸಮಯದಲ್ಲಿ ಹಣ ಪಾವತಿಸದ ಕಾರಣ ನೀಡಿ ಮಂಜೂರು ಮಾಡಲಾಗಿದ್ದ ಭೂಮಿಯನ್ನು ಕೆಐಎಡಿಬಿ ವಾಪಸ್ ಪಡೆದುಕೊಂಡಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಖಲೆಗಳು ಸಮಯ ನ್ಯೂಸ್ಗೆ ಲಭ್ಯವಾಗಿದ್ದು ಇದೇ ಪ್ರಥಮಬಾರಿಗೆ ಸಕರ್ಾರಕ್ಕೆ ಪರಮಾಪ್ತರಾಗಿರುವವರಿಗೆ ಹಣ ಪಾವತಿಸದ ಕಾರಣ ನೀಡಿ ಕೆಐಎಡಿಬಿ ಭೂಮಿ ವಾಪಸ್ ಪಡೆದು ದಿಟ್ಟ ಕ್ರಮಕೈಗೊಂಡಿದೆ.

78 ಎಕರೆ ಭೂಮಿಯನ್ನು ಪ್ರತಿ ಎಕರೆಗೆ ಕೇವಲ 50 ಲಕ್ಷ ರುಪಾಯಿಗೆ ಮಾರಾಟ

ರಿಪೋರ್ಟರ್; ಎಂ. ಎನ್. ಚಂದ್ರೇಗೌಡ ಸ್ಲಗ್: ಕಾನ್ಕಾರ್ಡ ಡೇಟ್; 17-11-2010 ಬೆಂಗಳೂರು

ಆಂಕರ್: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಸ್ವಜನ ಪಕ್ಷಪಾತದ ಒಂದೊಂದೇ ಪ್ರಕರಣಗಳು ಹೊರಬೀಳುತ್ತಿರುವಾಗಲೇ, ಅವರು ಉಪ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಬೆಂಗಳೂರಿನ ಕಾಡುಗೋಡಿ ಬಳಿ ಕಾನ್ಕಾರ್ಡ ಇಂಡಿಯಾ ಲಿಮಿಟೆಡ್ ಕಂಪನಿಗೆ ನಿಯಮಗಳನ್ನು ಗಾಳಿಗೆ ತೂರಿ 78 ಎಕರೆ ಭೂಮಿಯನ್ನು ಪ್ರತಿ ಎಕರೆಗೆ ಕೇವಲ 50 ಲಕ್ಷ ರುಪಾಯಿಗೆ ಮಾರಾಟ ಮಾಡಿರುವ ದಾಖಲೆಗಳು ಸಮಯ ನ್ಯೂಸ್ಗೆ ಲಭ್ಯವಾಗಿದೆ. ಸಕರ್ಾರದ ಏಕಗವಾಕ್ಷಿ ಸಮಿತಿಯಾಗಲಿ, ಉನ್ನತ ಮಟ್ಟದ ಸಮಿತಿಯಾಗಲಿ ಕಾನ್ಕಾಡರ್್ ಕಂಪನಿ ಯೋಜನೆಗೆ ಒಪ್ಪಿಗೆ ನೀಡುವ ಮುನ್ನವೇ ಸಕರ್ಾರ ಈ ಕಂಪನಿಗೆ ಭೂ ಮಂಜೂರಾತಿಗೆ ಆದೇಶ ಹೊರಡಿಸಿದೆ. ಈ ಪ್ರಕರಣದಲ್ಲಿ ಆಗಿನ ಬೃಹತ್ ಕೈಗಾರಿಕಾ ಸಚಿವರು ಭಾಗಿಯಾಗಿರುವ ಸಾಧ್ಯತೆಯೇ ಹೆಚ್ಚಾಗಿದೆ.

 ಬೆಂಗಳೂರಿನ ಇನ್ಫ್ಯಾಂಟ್ರಿ ರಸ್ತೆಯಲ್ಲಿರುವ ಕಾನ್ಕಾರ್ಡ ಇಂಡಿಯಾ ಕಂಪನಿ, ಕಾಡುಗೊಡಿ ಬಳಿ 78 ಎಕರೆ ಭೂಮಿ ಬೇಕೆಂದು ಕೆಐಎಡಿಬಿಗೆ ಸಮ್ಮಿಶ್ರ ಸಕರ್ಾರ ಅಸ್ತಿತ್ವದಲ್ಲಿದ್ದಾಗ ಅಜರ್ಿ ಸಲ್ಲಿಸಿತ್ತು. ಆಗ ಕಟ್ಟಾ ಸುಬ್ರಮಣ್ಯನಾಯ್ಡು ಬೃಹತ್ ಕೈಗಾರಿಕಾ ಸಚಿವರಾಗಿದ್ದರು. ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಬಿ. ಎಎಸ್. ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾಗಿದ್ದರು. ಆಗ ಬೆಂಗಳೂರಿನ ಕಾಡುಗೋಡಿ ಕೈಗಾರಿಕಾ ಪ್ರದೇಶದಲ್ಲಿ ಪ್ರತಿ ಎಕರೆಗೆ ಕನಿಷ್ಠ 1 ಕೋಟಿ ರುಪಾಯಿ ಬೆಲೆ ಇತ್ತು. ಹೀಗಿದ್ದಾಗ್ಯೂ ಕಾನ್ಕಾಡ್ ಕಂಪನಿಗೆ ಪ್ರತಿ ಎಕರೆಗೆ ಕೇವಲ 50 ಲಕ್ಷ ರುಪಾಯಿ ಬೆಲೆಗೆ ಸುಮಾರು 78 ಎಕರೆ ಭೂಮಿಯನ್ನು ನೀಡುವಂತೆ ಕೆಐಎಡಿಬಿಗೆ ಸಕರ್ಾರ ಆದೇಶ ನೀಡಿದೆ. ಸಕರ್ಾರದ ಈ ಆದೇಶ 26. 05. 2007 ರಂದು ಹೊರಬಿದ್ದದೆ. ಆನಂತರ 27. 07. 2007 ರಂದು ಸಕರ್ಾರದ ಉನ್ನತ ಮಟ್ಟದ ಸಮಿತಿ ಕಾನ್ಕಾಡ್ ಇಂಡಿಯಾ ಕಂಪನಿಯ ಯೋಜನೆಗೆ ದಿನಾಂಕ 27. 07. 2010 ರಂದು ಮಂಜೂರಾತಿ ನೀಡಿದೆ. ಅಲ್ಲದೆ ಉನ್ನತ ಮಟ್ಟದ ಸಮಿತಿ ಆಗಿನ ಬೃಹತ್ ಕೈಗಾರಿಕಾ ಸಚಿವರ ಆದೇಶದ ಮೇರೆಗೆ ಭೂ ಮಂಜೂರಾತಿ ಮಾಡಿರುವುದಾಗಿ ದಾಖಲೆಗಳಲ್ಲಿ ನಮೂದಿಸಿದೆ. ಜಿತೇಂದ್ರ ವಿವರ್ಾನಿ ಹಾಗೂ ನರ್ಪತ್ ಸಿಂಗ್ ಚೋರಾರಿಯ ಒಡತನದ ಕಾನ್ಕಾಡರ್್ ಕಂಪನಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಸಕರ್ಾರದ ಏಕಗವಾಕ್ಷಿ ಏಜೆನ್ಸಿ ಹಾಗೂ ಉನ್ನತ ಮಟ್ಟದ ಭೂಮಂಜೂರಾತಿ ಸಮಿತಿ ಅನುಮೋದನೆ ಪಡೆಯದೇ ತಾರಾತುರಿಯಲ್ಲಿ ಸಕರ್ಾರ ಭೂ ಮಂಜೂರಾತಿ ಆದೇಶ ಹೊರಡಿಸಿದ್ದೇಕೆ? ಈ ಕಂಪನಿಗೆ ಪ್ರತಿ ಎಕರೆಗೆ ಕೇವಲ 50 ಲಕ್ಷ ರುಪಾಯಿ ನಿಗದಿ ಪಡಿಸಿದವರ್ಯಾರು? ಕೆಐಎಡಿಬಿ ಭೂಮಂಜೂರಾತಿ ನಿಯಮಗಳನ್ನು ಗಾಳಿಗೆ ತೂರಿ ಆಗಿನ ಬೃಹತ್ ಕೈಗಾರಿಕಾ ಸಚಿವರು ಪ್ರತಿ ಎಕರೆಗೆ 50 ಲಕ್ಷ ದರ ನಿಗದಿಪಡಿಸಿದ್ದೇಕೆ ಎಂಬುದೇ ಈಗ ಸಾರ್ವಜನಿಕರ ಮುಂದಿರುವ ಪ್ರಶ್ನೆ. ಆಗಿನ ಮುಖ್ಯಮಂತ್ರಿಗಳ ಗಮನಕ್ಕೆ ತಾರದೇ ಈ ವ್ಯವಹಾರ ನಡೆದಿದ್ದು ಹೇಗೆ ಎಂಬುದೇ ಎಲ್ಲರನ್ನೂ ಕಾಡುವ ಪ್ರಶ್ನೆಯಾಗಿದೆ.

–ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್, ಬೆಂಗಳೂರು.

 1. ಕಂಪನಿ ಹೆಸರು : ಕಾಣ್ಕಾಡರ್್ ಇಂಡಿಯಾ 2. ಮಾಲೀಕರ ಹೆಸರು: ಜಿತೇಂದ್ರ ವಿವರ್ಾನಿ ಹಾಗೂ ನರ್ಪತ್ಸಿಂಗ್ ಚೋರಾರಿಯಾ 3. ವಿಳಾಸ: ಎಂಬಸಿ ಪಾಯಿಂಟ್ ನಂ; 150, ಇನ್ಫ್ಯಾಂಟ್ರಿ ರಸ್ತೆ. 4. ಮಂಜೂರಾದ ಸ್ಥಳ: ಕಾಡುಗೋಡಿ, ಪ್ಲಾಟ್ ನಂ: 6. ಸವೇ ನಂ. 1, ಬ್ಲಾಕ್ ನಂ: 73, ಕಾಡುಗೋಡಿ ಪ್ಲಾಂಟೇಷನ್ ವಿಲೇಜ್, ಬಿದರಹಳ್ಳಿ ಹೋಬಳಿ, ಬೆಂಗಳೂರು ಪೂರ್ವ ತಾಲೂಕು. 5. 02. 04. 2007 ರಂದು ಅಜರ್ಿ ಸಲ್ಲಿಕೆ 6. 26. 05. 2007 ರಂದು 78 ಎಕರೆ ಭೂಮಿ ನೀಡಲು ಸಕರ್ಾರಿ ಆದೇಶ 7. 27. 07. 2007 ರಂದು ಉನ್ನತ ಮಟ್ಟದ ಸಮಿತಿಯಿಂದ ಈ ಯೋಜನೆಗೆ ಒಪ್ಪಿಗೆ 8. 1902. 57 ಕೋಟಿ ಬಂಡವಾಳ ಹೂಡಿಕೆ, ಐಟಿ/ ಐಟಿಇಎಸ್ ಗಾಗಿ ಎಸ್ಇಜೆಡ್ ನಿಮರ್ಾಣ. 9. 68 ಸಾವಿರ ಜನರಿಗೆ ಉದ್ಯೋಗ ಸೃಷ್ಟಿ 10. 07. 06. 2007 ರಲ್ಲಿ ಕಂಪನಿಗೆ ಲೀಸ್ ಕಮ್ ಸೇಲ್ ಡೀಡ್ ಮಾಡಿಕೊಡಲಾಗಿದೆ.

  • ಪುಟಗಳು

  • Flickr Photos

  • ನವೆಂಬರ್ 2010
    ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
     123456
    78910111213
    14151617181920
    21222324252627
    282930  
  • ವಿಭಾಗಗಳು