ಬಜೆಟ್ ಮಂಡನೆ ಮಾರ್ಚ ಬಿಟ್ಟು ಫೆಬ್ರವರಿಯಲ್ಲೇ ಏಕೆ

ರಿಪೋರ್ಟರ್: ಎಂ.ಎನ್. ಚಂದ್ರೇಗೌಡ ಸ್ಲಗ್: ಬಜೆಟ್ ಡೇಟ್: 14-01-2011 ಬೆಂಗಳೂರು ಆಂಕರ್: ಫೆಬ್ರವರಿ ಕಡೆಯ ವಾರದಲ್ಲಿ ರಾಜ್ಯ ಬಜೆಟ್ ಮಂಡನೆಯಾಗುವ ಸಾಧ್ಯತೆ ಇದೆ. ಆದರೆ ಬಜೆಟ್ ಮಂಡನೆ ಮಾರ್ಚ ಬಿಟ್ಟು ಫೆಬ್ರವರಿಯಲ್ಲೇ ಏಕೆ ಎಂಬ ಚಚರ್ೆ ಈಗ ರಾಜಕೀಯ ವಲಯದಲ್ಲಿ. ಸಕರ್ಾರದ ಈ ತರಾತುರಿ ಕ್ರಮದ ಹಿಂದಿರುವ ಲೆಕ್ಕಾಚಾರಗಳ ಬಗ್ಗೆ ಇಲ್ಲಿದೆ ವರದಿ. ಫ್ಯಾಕೇಜ್ ಫಾಲೋಸ್……… ವಾಯ್ಸ್ ಓವರ್ 1: ಸಕರ್ಾರಕ್ಕೆ ಈಗ ಎಲ್ಲಾ ಮಗ್ಗಲುಗಳಿಂದ ಹೊಡೆತ ಬೀಳಲಾರಂಭಿಸಿದೆ. ಒಂದು ಕಡೆ ಲಾಯರ್ಸ್ ಫೋರಂ ರಾಜ್ಯಪಾಲರ ಮುಂದೆ ಸಲ್ಲಸಿರುವ ಅಜರ್ಿ ಬಾಕಿ ಇದೆ. ಮತ್ತೊಂದು ಕಡೆ ಹೈಕೋರ್ಟನಲ್ಲಿ ಅನರ್ಹಗೊಂಡಿರುವ ಪಕ್ಷೇತರ ಶಾಸಕರ ಅಜರ್ಿ ಶೀಘ್ರವೇ ಇತ್ಯರ್ಥವಾಗುವ ಸಾಧ್ಯತೆ ಇದೆ. ಮತ್ತೊಂದು ಕಡೆ ಸುಪ್ರಿಂಕೋರ್ಟನಲ್ಲಿ ಅನರ್ಹಗೊಂಡಿರುವ ಬಿಜೆಪಿ ಶಾಸಕರ ತೀಪರ್ು ಜನವರಿಯಲ್ಲೇ ಹೊರಬೀಳುವ ಎಲ್ಲಾ ಲಕ್ಷಣಗಳಿವೆ. ಇನ್ನೊಂದು ಕಡೆ ಹೈಕೋರ್ಟ, ನ್ಯಾಯಮೂತರ್ಿ ಪದ್ಮರಾಜ್ ಆಯೋಗದ ತನಿಖೆಗೆ ತಡೆಯಾಜ್ಞೆ ನೀಡಿದೆ. ಲೋಕಾಯುಕ್ತರು ಭೂಹಗರಣಗಳ ತನಿಖೆ ಮುಂದುವರೆಸಿದ್ದಾರೆ. ಹೀಗೆ ಬಿಜೆಪಿ ಸಕರ್ಾರ ಸಮಸ್ಯೆಗಳ ಮೇಲೆ ಸಮಸ್ಯೆಗಳನ್ನು ಎದುರಿಸುವ ಸನ್ನಿವೇಶ ನಿಮರ್ಾಣವಾಗಿದೆ. ಯಾವ ಗಳಿಗೆಯಲ್ಲಿ ಏನುಬೇಕಾದರೂ ಆಗಬಹುದು ಎಂಬ ವಾತಾವರಣ ಸೃಷ್ಟಿಯಾಗಿದೆ. ಒಂದು ವೇಳೆ ರಾಜ್ಯಪಾಲರು, ಮುಖ್ಯಮಂತ್ರಿಗಳ ವಿರುದ್ಧ ಮೊಕದ್ದಮೆ ಹೂಡಲು ಅನುಮತಿ ನೀಡಿದರೆ, ಅನರ್ಹಗೊಂಡಿರುವ ಶಾಸಕರ ಪರ ತೀಪರ್ು ಬಂದರೆ, ಲೋಕಾಯುಕ್ತರು ತನಿಖೆ ಮುಂದುವರೆಸಿ ಎಫ್ಐಆರ್ ದಾಖಲಿಸಿದರೆ ಮುಖ್ಯಮಂತ್ರಿಗಳು ಜತೆಗೆ ಅವರ ಸಕರ್ಾರ ಅಪಾಯಕ್ಕೆ ಸಿಕ್ಕಿ ಬೀಳುತ್ತದೆ. ಇಂಥಹ ಅಪಾಯಗಳು ಎದುರಾಗುವ ಮುನ್ನವೇ ತರಾತುರಿಯಲ್ಲಿ ಬಜೆಟ್ ಮಂಡಿಸಲು ಮುಖ್ಯಮಂತ್ರಿಗಳು ಮುಂದಾಲೋಚನೆ ಮಾಡಿದ್ದಾರೆಂದು ಹೇಳಲಾಗುತ್ತಿದೆ. ಇನ್ನೊಂದು ಲೆಕ್ಕಾಚಾರದ ಪ್ರಕಾರ, ಒಂದು ವೇಳೆ ಯುಪಿಎ ಸಕರ್ಾರ ಕೇಂದ್ರದ ಬಜೆಟ್ ಮಂಡನೆ ನಂತರ ಲೋಕಸಭೆಯನ್ನು ವಿಸಜರ್ಿಸಿ ಸಾರ್ವತ್ರಿಕ ಚುನಾವಣೆ ಘೋಷಿಸುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಬಿ.ಎಸ್. ಯಡಿಯೂರಪ್ಪ ವಿಧಾನಸಭೆ ವಿಸಜರ್ಿಸಲು ತರಾತುರಿ ಬಜೆಟ್ ಮಂಡನೆಗೆ ಸಿದ್ಧರಾಗುತ್ತಿದ್ದಾರೆಂದು ಬಣ್ಣಿಸಲಾಗುತ್ತಿದೆ. ಬಿಜೆಪಿ ಹೈಕಮಾಂಡ್ ಸಹ ಬಜೆಟ್ ಮಂಡಿಸಿ ಕುಚರ್ಿ ತ್ಯಜಿಸಿ ಎಂದು ಗುಟ್ಟಿನಲ್ಲಿ ಹೇಳಿರುವ ಸಾಧ್ಯತೆಯೂ ಇರುವುದರಿಂದ ಫೆಬ್ರವರಿಯಲ್ಲಿ ಆಯವ್ಯಯ ಮಂಡನೆಯಾಗುತ್ತಿವುದಕ್ಕೆ ರೆಕ್ಕೆಪುಕ್ಕ ಬಂದಿದೆ. ಒಟ್ಟಿನಲ್ಲಿ ಬಜೆಟ್ ಮಂಡನೆ ಹಿಂದೆ ರಾಜಕೀಯ ಲೆಕ್ಕಾಚಾರವೇ ಕಾಣುತ್ತಿದೆ. –ಎಂ.ಎನ್. ಚಂದ್ರೇಗೌಡ, ಸಮಯ ನ್ಯೂಸ್ ಬೆಂಗಳೂರು

Advertisements

ಬಜೆಟ್ ಅಧಿವೇಶನದ ನಂತರ ವಿಧಾನಸಭೆಯನ್ನು ವಿಸಜರ್ಿಸಿ ಹೊಸ ಜನಾದೇಶ

ರಿಪೋರ್ಟರ್; ಎಂ. ಎನ್. ಚಂದ್ರೇಗೌಡ ಸ್ಲಗ್: ಎಲೆಕ್ಷನ್ ಡೇಟ್: 11-01-2011 ಬೆಂಗಳೂರು ಆಂಕರ್: ಬಜೆಟ್ ಅಧಿವೇಶನದ ನಂತರ ವಿಧಾನಸಭೆಯನ್ನು ವಿಸಜರ್ಿಸಿ ಹೊಸ ಜನಾದೇಶ ಪಡೆಯಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಲೋಚಿಸಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ. ನಿರೀಕ್ಷಿತ ಬೆಂಬಲ ಜೆಡ್ಪಿ ಹಾಗೂ ಟಿಪಿ ಚುನಾವಣೆಯಲ್ಲಿ ದಕ್ಕಿದ್ದರೆ ಜನವರಿಯಲ್ಲೇ ವಿಧಾನಸಭೆಯನ್ನು ವಿಸಜರ್ಿಸಲು ಬಿಜೆಪಿ ನಾಯಕರು ಲೆಕ್ಕಾಚಾರ ಹಾಕಿದ್ದರೆಂದು ಹೇಳಲಾಗಿದೆ. ನಿರೀಕ್ಷಿತ ಬೆಂಬಲ ದೊರೆಯದ ಕಾರಣ ಬಜೆಟ್ ಅಧಿವೇಶನದವರೆಗಾದರೂ ಸಕರ್ಾರ ಮುನ್ನಡೆಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

  ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಸ್ತಿತ್ವಕ್ಕೆ ಬಂದ ಬಿಜೆಪಿ ಸಕರ್ಾರದ ಆಯಸ್ಸು ಇನ್ನು ಕೇವಲ ಮೂರೇ ಮೂರು ತಿಂಗಳೇ? ಇಂಥಹ ಚಚರ್ೆ ರಾಜಕೀಯ ವಲಯದಲ್ಲಿ ಈಗ ಆರಂಭವಾಗಿದೆ. ಇದಕ್ಕೆ ಕಾರಣ ಹಲವು. ಒಂದು ಮುಖ್ಯಮಂತ್ರಿಗಳ ಮೇಲಿರುವ ಗುರುತರ ಭೂಹಗರಣಗಳ ಆರೋಪಗಳು. ಎರಡನೆಯದು ಸಿಇಸಿ ವರದಿ. ಇದರಿಂದ ರೆಡ್ಡಿಗಳ ಮೇಲೆ ಕ್ರಮ ಕೈಗೊಳ್ಳುವ ಅನಿವಾರ್ಯತೆ. ಮೂರನೆಯದು ಅನರ್ಹಗೊಂಡಿರುವ ಪಕ್ಷೇತರ ಶಾಸಕರ ಪರ ಹೈಕೋಟರ್್ ತೀಪರ್ು ಹೊರಬೀಳುವ ಸಾಧ್ಯತೆ. ಒಂದು ಕಡೆ ಬಹುಮತವಿಲ್ಲದ ಸಕರ್ಾರ. ಮತ್ತೊಂದು ಕಡೆ ನಿಲ್ಲದ ಪ್ರತಿಪಕ್ಷಗಳ ಆರೋಪ ಹಾಗೂ ಪ್ರತಿಭಟನೆ. ಇದರಿಂದ ಬೇಸತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೊಸದಾಗಿ ಜನಾದೇಶ ಪಡೆಯಲು ಆಲೋಚನೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.

 ವಿಧಾನಸಭೆ ವಿಸಜರ್ಿಸುವುದಕ್ಕಿಂತ ಬೇರೆ ಏನಾದರೂ ದಾರಿಗಳಿವೆ ಎಂದು ಮುಖ್ಯಮಂತ್ರಿಗಳು ಆಪ್ತರ ಜತೆ ಚಚರ್ಿಸಿದ್ದಾರೆಮದು ಹೇಳಲಾಗಿದೆ. ಮತ್ತೊಂದು ಸುತ್ತಿನ ಆಪರೇಷನ್ ಕಮಲ ನಡೆಸಿ ಅದರಲ್ಲಿ ಜೆಡಿಎಸ್ನ ಸುಭಾಷ್ ಗುತ್ತೇದಾರ್, ಕಾಂಗ್ರೆಸ್ನ ಡಾ. ಸುಧಾಕರ್ ಹಾಗೂ ರಾಜಶೇಖರ್ ಪಾಟೀಲ್ ಹುಮ್ನಾಬಾದ್ರನ್ನು ಬಿಜೆಪಿಗೆ ಕರೆ ತರುವ ಯತ್ನವನ್ನು ಅವರು ಮಾಡಲಿದ್ದಾರೆಂದು ಹೇಳಲಾಗುತ್ತಿದೆ. 12 ರ ಬದಲಾಗಿ ಕನಿಷ್ಠ 18 ಜಿಲ್ಲಾ ಪಂಚಾಯ್ತಿಗಳಲ್ಲಿ ಬಹುಮತ ಲಭಿಸಿದ್ದರೆ ಕೂಡಲೇ ವಿಧಾನಸಭೆಯನ್ನು ವಿಸಜರ್ಿ ಚುನಾವಣೆಗೆ ಹೋಗಲು ಅವರು ಉತ್ಸುಕರಾಗಿದ್ದರೆಂದು ಮೂಲಗಳು ಖಚಿತಪಡಿಸಿವೆ.

 ಆದರೆ ಮೊದಲೇ ಅಲ್ಪ ಮತಕ್ಕೆ ಕುಸಿದಿರುವ ಸಕರ್ಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿಗಳು, ಬಜೆಟ್ ಅಧಿವೇಶನದ ನಂತರ ವಿಧಾನಸಭೆ ವಿಸಜರ್ಿಸಲು ಮುಂದಾದರೆ, ರಾಜ್ಯಪಾಲ ಹೆಚ್.ಆರ್. ಭಾರದ್ವಜ್ ಅದನ್ನು ಒಪ್ಪುವ ಸಾಧ್ಯತೆ ಕಡಿಮೆ. ನ್ಯಾಯಾಲಯಗಳ ತೀಪರ್ು ಹೊರಬೀಳುವವರೆಗೆ ವಿಧಾನಸಭೆ ವಿಸಜರ್ಿನೆಗೆ ಅವರು ತತಾಸ್ತು ಎಂದು ಹೇಳುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಕೇಂದ್ರ ಸಕರ್ಾರವೇನಾದರೂ ಲೋಕಸಭೆಯನ್ನು ಕೇಂದ್ರದ ಬಜೆಟ್ ಅಧಿವೇಶನದ ನಂತರ ವಿಸಜರ್ಿಸಿ ಸಾರ್ವತ್ರಿಕ ಚುನಾವಣೆಗೆ ಹೋದರೆ ಯಡಿಯೂರಪ್ಪ ವಿಧಾನಸಭೆ ವಿಸಜರ್ಿಸುವುದನ್ನು ತಡೆಯುವುದು ಕಷ್ಟ. –ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್ ಬೆಂಗಳೂರು

ವಿಧಾನಮಂಡಲದ ಅಧಿವೇಶನ ಅಕ್ಷರಶ: ರಣರಂಗವಾಗುವ ಸಾಧ್ಯತೆ

ರಿಪೋರ್ಟರ್: ಎಂ. ಎನ್. ಚಂದ್ರೇಗೌಡ ಸ್ಲಗ್: ಟುಮಾರೋ ಡೇಟ್: 09-01-2011 ಬೆಂಗಳೂರು ಆಂಕರ್: ನಾಳೆಯಿಂದ ಪುನರ್ ಆರಂಭವಾಗಲಿರುವ ವಿಧಾನಮಂಡಲದ ಅಧಿವೇಶನ ಅಕ್ಷರಶ; ರಣರಂಗವಾಗುವ ಸಾಧ್ಯತೆ ಇದ್ದು ಪ್ರತಿಪಕ್ಷಗಳು ಮುಖ್ಯಮಂತ್ರಿ ಹಾಗೂ ಬಳ್ಳಾರಿ ರೆಡ್ಡಿ ಸಹೋದರರ ರಾಜೀನಾಮೆಗೆ ಆಗ್ರಹಿಸಿ ಗದ್ದಲ ಎಬ್ಬಿಸುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಉಭಯ ಸದನಗಳಲ್ಲಿ ಕಲಾಪ ಸುಗಮವಾಗಿ ನಡೆಯುವ ಸಾಧ್ಯತೆ ಕಡಿಮೆ. ಫ್ಯಾಕೇಜ್ ಫಾಲೋಸ್……….. ವಾಯ್ಸ್ ಓವರ್: ಅಕ್ರಮ ಗಣಿಗಾರಿಕೆ ಸತ್ಯ ಶೋಧನೆಗಾಗಿ ಸುಪ್ರೀಂಕೋರ್ಟ ನೇಮಿಸಿದ್ದ ಉನ್ನತಾಧಿಕಾರ ಸಮಿತಿ ನೀಡಿರುವ ವರದಿ, ಮುಖ್ಯಮಂತ್ರಿಗಳ ಮೇಲಿರುವ ಭೂ ಹಗರಣಗಳ ಆರೋಪ ಜತೆಗೆ ಸ್ಪೀಕರ್ ಕೆ.ಜಿ. ಬೋಪಯ್ಯ ವಿರುದ್ಧ ಮಂಡಿಸಲು ನಿರ್ಧರಿಸಿರುವ ಅವಿಶ್ವಾಸ ಗೊತ್ತುವಳಿ. ಈ ಮೂರು ವಿಷಯಗಳು ನಾಳೆಯಿಂದ ಪುನರ್ ಆರಂಭವಾಗಲಿರುವ ವಿಧಾನಮಂಡಲದ ಅಧಿವೇಶನವನ್ನು ಗದ್ದಲದ ಗೂಡಾಗಿಸುವ ಸಾಧ್ಯತೆ ಇದೆ. ಇದರಿಂದ ಉಭಯ ಸದನಗಳಲ್ಲಿ ಕಲಾಪ ಸುಗಮವಾಗಿ ನಡೆಯುವುದು ಅನುಮಾನ. ಏಕೆಂದರೆ ಕಟ್ಟಾ ಸುಬ್ರಮಣ್ಯ ನಾಯ್ಡು ರಾಜೀನಾಮೆ ಪಡೆದಂತೆ ರೆಡ್ಡಿ ಸಹೋದರರ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳು ಉಭಯ ಸದನಸಲ್ಲಿ ಕೋಲಾಹಲ ಎಬ್ಬಿಸಲು ಈಗಾಗಲೇ ಸಜ್ಜಾಗಿವೆ. ಉಳಿದಂತೆ ಮುಖ್ಯಮಂತ್ರಿಗಳ ವಿರುದ್ಧ ಇರುವ ಭೂ ಹಗರಣಗಳ ಬಗ್ಗೆ ಕೂಲಂಕಷವಾಗಿ ಚಚರ್ಿಸುವ ಸಲುವಾಗಿ ಗೊತ್ತುವಳಿ ಸೂಚನೆ ಮಂಡಿಸಲು ಅವುಗಳು ಈಗಾಗಲೇ ನಿರ್ಧರಿಸಿವೆ. ಇದರ ನಡುವೆ ವಿಧಾನಸಭೆಯಲ್ಲಿ ಸ್ಪೀಕರ್ ಕೆ.ಜಿ. ಬೋಪಯ್ಯ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಯನ್ನು ಮಾಡಲು ಪ್ರತಿ ಪಕ್ಷಗಳು ಸಜ್ಜಾಗಿವೆ. ಹೀಗೆ ಪ್ರತಿಪಕ್ಷಗಳ ಸರಣಿ ದಾಳಿಯನ್ನು ಸಕರ್ಾರ ಹೇಗೆ ಎದುರಿಸಲಿದೆ, ಆರೋಪಗಳಿಗೆ ಹೇಗೆ ಸಮಜಾಯಿಷಿ ನೀಡಲಿದೆ, ರೆಡ್ಡಿ ಸಹೋದರರನ್ನು, ಮುಖ್ಯಮಂತ್ರಿಗಳನ್ನು ಹೇಗೆ ಸಮರ್ಥನೆ ಮಾಡಿಕೊಳ್ಳಲು ಆಡಳಿತ ಪಕ್ಷ ಏನೆಲ್ಲಾ ಕಸರತ್ತು ಮಾಡಬಹುದು ಎಂಬುದು ಈಗ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ. 1. ಬೈಟ್: ಕೃಷ್ಣಬೈರೇಗೌಡ, ಕಾಂಗ್ರೆಸ್ ಮುಖಂಡ: 2. ಬೈಟ್: ಆರ್. ಅಶೋಕ್, ಗೃಹ ಸಚಿವ ಫೈಲ್ ನೇಮ್: ಆರ್. ಅಶೋಕ್ (ಪೊಲಿಟಿಕಲ್, ಕ್ಲಿಪ್ ನಂ 47 ಟಿಸಿಆರ್: 01: 18 ಟು 03; 05) ವಾಯ್ಸ್ ಓವರ್ 2: ಪ್ರತಿಪಕ್ಷಗಳು ಎಷ್ಟೇ ಗದ್ದಲ, ಕೋಲಾಹಲ ಎಬ್ಬಿಸಿದರೂ ಸಕರ್ಾರ ನಾಳೆ ಉಪಸಭಾಧ್ಯಕ್ಷರ ಚುನಾವಣೆ ನಡೆಸಲು ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ. ಗದ್ದಲದ ನಡುವೆಯೇ ಧ್ವನಿಮತದ ಮೂಲಕವಾದರೂ ಹಿರಿಯ ಶಾಸಕ ಯೋಗೀಶ್ ಭಟ್ರನ್ನು ಉಪಸಭಾಧ್ಯಕ್ಷರನ್ನಾಗಿ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಬಳ್ಳಾರಿ ರೆಡ್ಡಿ ಸಹೋದರರು ನಾಳೆ ಸಕರ್ಾರಕ್ಕೆ ಬಿಸಿ ತುಪ್ಪ. ಯಡಿಯೂರಪ್ಪನವರು ನಾಳೆ ಬಿಸಿ ತುಪ್ಪವನ್ನು ಉಗುಳುವರೋ ನುಂಗುವರೋ ಕಾದು ನೋಡಬೇಕು. ಮುಖ್ಯಮಂತ್ರಿಗಳೇ ಸಕರ್ಾರಕ್ಕೆ ಬಿಸಿ ತುಪ್ಪವಾಗುವರೋ ಹೇಗೆ ಎಂಬುದನ್ನು ಕುತೂಹಲದಿಂದ ನಿರೀಕ್ಷಿಸಬೇಕಾಗಿದೆ. ಒಟ್ಟಿನಲ್ಲಿ ನಾಳೆ ಮಾತ್ರ ಸದನದಲ್ಲಿ ಕದನ ಕುತೂಹವಂತೂ ಸೃಷ್ಟಿಯಾಗಿದೆ. –ಎಂ.ಎನ್. ಚಂದ್ರೇಗೌಡ ಸಮಯ ನ್ಯೂಸ್, ಬೆಂಗಳೂರು

 • ಪುಟಗಳು

 • Flickr Photos

 • ಜನವರಿ 2011
  ಭಾನು ಸೋಮ ಮಂಗಳ ಬುಧ ಗುರು ‍ಶು ಶನಿ
  « ಡಿಸೆ   ಏಪ್ರಿಲ್ »
   1
  2345678
  9101112131415
  16171819202122
  23242526272829
  3031  
 • ವಿಭಾಗಗಳು